ಇಲ್ಲಿ ಕೇವಲ 600 ರೂಪಾಯಿಗೆ ಮಾರಾಟವಾಗುತ್ತಿದೆ 14,999 ರೂ. ಬೆಲೆಯ Nokia Smartphone

ನೋಕಿಯಾ ಉತ್ತಮ ಬ್ಯಾಟರಿಯ ಹಲವು  ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ಗಳ  ಬೆಲೆ ಕೂಡಾ ತೀರಾ ಕಡಿಮೆ ಎನ್ನಲಾಗಿದೆ.

Written by - Ranjitha R K | Last Updated : Aug 3, 2022, 02:31 PM IST
  • ನೋಕಿಯಾದ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ
  • ಕೇವಲ 600 ರೂ.ಗೆ ಖರೀದಿಸಬಹುದು ಈ ಫೋನ್
  • Nokia G20 ಕೊಡುಗೆಗಳು ಮತ್ತು ರಿಯಾಯಿತಿಗಳು
 ಇಲ್ಲಿ ಕೇವಲ 600 ರೂಪಾಯಿಗೆ ಮಾರಾಟವಾಗುತ್ತಿದೆ 14,999 ರೂ. ಬೆಲೆಯ Nokia Smartphone title=
NOKIA G20 (file photo)

ಬೆಂಗಳೂರು : ಒಂದು ಕಾಲದಲ್ಲಿ ನೋಕಿಯಾ ಫೋನ್ ಗಳಿಗೆ ಭಾರೀ ಬೇಡಿಕೆ ಇತ್ತು. ಯಾರ ಕೈಯಲ್ಲೇ ನೋಡಿದರೂ ನೋಕಿಯಾ ಫೋನ್. ಸ್ಮಾರ್ಟ್ ಫೋನ್ ಕಾಲಿಡುತ್ತಿದ್ದಂತೆಯೇ ಈ ಫೀಚರ್ ಫೋನ್ ಗಳು ಬದಿಗೆ ಸರಿದವು. ಇದೀಗ ನೋಕಿಯಾ ಕೂಡಾ ಸ್ಮಾರ್ಟ್ ಫೋನ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೋಕಿಯಾ ಉತ್ತಮ ಬ್ಯಾಟರಿಯ ಹಲವು  ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ಗಳ  ಬೆಲೆ ಕೂಡಾ ತೀರಾ ಕಡಿಮೆ ಎನ್ನಲಾಗಿದೆ. ಅಮೆಜಾನ್‌ನಲ್ಲಿನ ಕಿಕ್‌ಸ್ಟಾರ್ಟರ್ ಡೀಲ್‌ಗಳಲ್ಲಿ, Nokiaದ ಪ್ರಬಲ ಬ್ಯಾಟರಿ ಸ್ಮಾರ್ಟ್‌ಫೋನ್ ಅನ್ನು ಕೇವಲ 600 ರೂಗಳಲ್ಲಿ ಖರೀದಿಸಬಹುದು. 

Nokia G20 ಕೊಡುಗೆಗಳು ಮತ್ತು ರಿಯಾಯಿತಿಗಳು :
Nokia G20ನ ಲಾಂಚಿಂಗ್ ಬೆಲೆ 14,999 ರೂಪಾಯಿ. ಆದರೆ Amazonನಲ್ಲಿ ಈ ಫೋನ್ 10,990 ರೂಪಾಯಿಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ ಫೋನ್ ಮೇಲೆ 4,000 ರೂಪಾಯಿಗಳ ಸಂಪೂರ್ಣ ರಿಯಾಯಿತಿ ನೀಡಲಾಗುತ್ತಿದೆ. 

ಇದನ್ನೂ ಓದಿ : ತಿಂಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಅಕೌಂಟ್ ಬ್ಯಾನ್ ಮಾಡಿದ ವಾಟ್ಸಾಪ್

Nokia G20 ವಿನಿಮಯ ಕೊಡುಗೆಗಳು :
Nokia G20ನಲ್ಲಿ 10,400 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ತುಂಬಾ ರಿಯಾಯಿತಿ ಪಡೆಯಬಹುದು. ಆದರೆ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 10,400 ರೂ. ರಿಯಾಯಿತಿ ಸಿಗಲಿದೆ.  ಈ ಪೂರ್ಣ ಆಫ್  ಪಡೆಯುವುದು ಸಾಧ್ಯವಾದರೆ ಫೋನ್‌ನ ಬೆಲೆ 590 ರೂ.ಗೆ ಇಳಿಯಲಿದೆ. 

Nokia G20 ವಿಶೇಷಣಗಳು :
Nokia G20ನಲ್ಲಿ ನಾಲ್ಕು ರಿಯರ್ ಕ್ಯಾಮೆರಾಗಳು ಇರಲಿವೆ. ಇದು 48 ಮೆಗಾಪಿಕ್ಸೆಲ್‌  ಪ್ರೈಮರಿ ಲೆನ್ಸ್ ಹೊಂದಿದೆ. 2 ಮೆಗಾಪಿಕ್ಸೆಲ್‌ ನ ಎರಡು ಲೆನ್ಸ್‌ಗಳು,  8 ಮೆಗಾಪಿಕ್ಸೆಲ್‌ಗಳ  ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ.  ಫ್ರಂಟ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ನದ್ದಾಗಿದೆ. ದು 6.5 ಇಂಚಿನ  ಸ್ಕ್ರೀನ್ ಹೊಂದಿದ್ದು, ಇದರಲ್ಲಿ HD Plus IPS ಡಿಸ್ಪ್ಲೇ ನೀಡಲಾಗಿದೆ. 

ಇದನ್ನೂ ಓದಿ : ಆರಾಮದಾಯಕ ನಿದ್ದೆಗಾಗಿ ತಕ್ಷಣ ಖರೀದಿಸಿ ಈ Smart Bed,ಬೆಲೆ ಕೂಡಾ ತೀರಾ ಕಡಿಮೆ

5050 mAh ಬ್ಯಾಟರಿ : 
Nokia ಬ್ಯಾಟರಿಯು ತುಂಬಾ ಪ್ರಬಲವಾಗಿದೆ ಎಂದು ಪರಿಗಣಿಸಲಾಗಿದೆ. ಕಂಪನಿಯ ಪ್ರಕಾರ, Nokia G20 ಬ್ಯಾಟರಿ ಮೂರು ದಿನಗಳವರೆಗೆ ಇರುತ್ತದೆ. ಚಾರ್ಜ್ ಮಾಡಲು ಟೈಪ್ ಸಿ ಪೋರ್ಟ್ ಲಭ್ಯವಿರುತ್ತದೆ. ನಾಲ್ಕು ಜಿಬಿ RAM ಮತ್ತು 64 ಜಿಬಿ  ಸ್ಟೋರೇಜ್ ರೂಪಾಂತರದೊಂದಿಗೆ ಈ ಫೋನ್ ಅನ್ನು ಪರಿಚಯಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News