Disk Footed Bat - ಭಾರತದಲ್ಲಿ ದೊರೆತೆ ವಿಚಿತ್ರ ಬಾವುಲಿ, ಇದೇ Coronavirus ಸೋಂಕು ಹೆಚ್ಚಾಗಲು ಕಾರಣವೇ?
Disk Footed Bat - ಈ ಬಾವಲಿಗಳು ತಮ್ಮ ಕಾಲುಗಳ ಸಂರಚನೆಯ ಕಾರಣ ತುಂಬಾ ಭಿನ್ನವಾಗಿ ಕಾಣಿಸುತ್ತವೆ. ಕಿತ್ತಳೆ ಬಣ್ಣದ ಕಾಲುಗಳನ್ನು ಹೊಂದಿದ ಈ ಬಾವಲಿಗಳ (Bat) ಪಾದ ಪ್ಲೇಟ್ ಆಕಾರದ್ದಾಗಿರುತ್ತವೆ. ಈ ವಿಚಿತ್ರ ಬಾವಲಿಯ ಕುರಿತಾದ ಸಂಶೋಧನೆ ಸ್ವಿಟ್ಜರ್ ಲ್ಯಾಂಡ್ ನ Revue Suisse de Zoologie ಜರ್ನಲ್ ನಲ್ಲಿ ಪ್ರಕಟಗೊಂಡಿದೆ.
ನವದೆಹಲಿ : Disk Footed Bat - ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಏತನ್ಮಧ್ಯೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ 'ಪ್ಲೇಟ್' ರೀತಿಯ ಪಾದಗಳನ್ನು ಹೊಂದಿರುವ ಒಂದು ವಿಚಿತ್ರ ಬಾವಲಿಯನ್ನು ಪತ್ತೆಹಚ್ಚಲಾಗಿದೆ. ಮೇಘಾಲಯದ ವೈಲ್ಡ್ ಲೈಫ್ ಸ್ಯಾನಿಚುರಿಯಲ್ಲಿ ಈ ಅಗಲ ಪಾದ ಹೊಂದಿರುವ ಬಾವಲಿ ಪತ್ತೆಯಾಗಿದೆ. ಈ ಬಾವಲಿ ಬಿದಿರಿನ ಹೊಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜ್ಯೂಲಾಜಿಕಲ್ ಸರ್ವೇ ಆಫ್ ಇಂಡಿಯಾ ವಿಜ್ಞಾನಿಗಳು (Science News In Kannada) ಇದನ್ನು ಪತ್ತೆಹಚ್ಚಿದ್ದಾರೆ. ಈ ಹೊಸ ರೀತಿಯ ಬಾವಲಿಯ ಕಾರಣ ಕೊರೊನಾ ಹರಡುತ್ತಿದೆಯೇ? ಎಂಬ ಪ್ರಶ್ನೆ ಇದೀಗ ವಿಜ್ಞಾನಿಗಳಿಗೆ ಕಾಡುತ್ತಿದೆ.
ಯುಡಿಸ್ಕೊಪಸ್ ಡೆಂಟಿಕ್ಯುಲಸ್
ಮೇಘಾಲಯದ ನೊಂಗ್‌ಕಿಲೆಮ್ ವನ್ಯಜೀವಿ ಅಭಯಾರಣ್ಯದ ಲೈಲಾಡ್ ಪ್ರದೇಶದಲ್ಲಿ ಬಿದಿರಿನ ಕಾಡುಗಳ ನಡುವೆ ಈ ಡಿಸ್ಕ್ ಫುಟ್ ಬ್ಯಾಟ್ ಅನ್ನು ಜೂಲಾಜಿಕಲ್ ಸರ್ವೆ ಆಫ್ ಇಂಡಿಯಾ (ZSI) ವಿಜ್ಞಾನಿ ಡಾ. ಉತ್ತಮ್ ಸೈಕಿಯಾ ಮತ್ತು ಯುರೋಪಿಯನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಜಾತಿಯ ಬ್ಯಾಟ್ ಅನ್ನು ಯೂಡಿಸ್ಕೋಪಸ್ ಡೆಂಟಿಕುಲಸ್ (Eudiscopus denticulus) ಎಂದು ಕರೆಯಲಾಗುತ್ತದೆ.
ತುಂಬಾ ವಿಚಿತ್ರವಾಗಿರುತ್ತವೆ ಈ ಬಾವಲಿಗಳು
ತಟ್ಟೆ ಗಾತ್ರದ ಪಾದಗಳನ್ನು ಹೊಂದಿರುವ ಈ ಬಾವಲಿಗಳ ಕಾಲುಗಳು ಕಿತ್ತಳೆಬಣ್ಣದ್ದಾಗಿದ್ದು, ಇವು ತೀರಾ ಭಿನ್ನವಾಗಿ ಕಾಣಿಸುತ್ತವೆ. ಈ ವಿಚಿತ್ರ ಬಾವಲಿಯ ಕುರಿತಾದ ಸಂಶೋಧನೆ ಸ್ವಿಟ್ಜರ್ ಲ್ಯಾಂಡ್ ನ Revue Suisse de Zoologie ಜರ್ನಲ್ ನಲ್ಲಿ ಪ್ರಕಟಗೊಂಡಿದೆ.
ಬಿದಿರಿನ ಟೊಂಗಿಗಳ ಮಧ್ಯೆ ಇವುಗಳ ವಾಸ
ಈ ಕುರಿತು ಹೇಳಿಕೆ ನೀಡುವ ಡಾ. ಉತ್ತಮ್ ಈ ರೀತಿಯ ಬಾವಲಿಗಳು ಬಿದಿರಿನ ಟೊಂಗಿಯ ಮಧ್ಯಭಾಗದಲ್ಲಿ ಇವು ತಮ್ಮ ತಟ್ಟೆ ಗಾತ್ರದ ಪಾದಗಳ ಸಹಾಯದಿಂದ ಅಂಟಿಕೊಂಡು ವಿಶ್ರಮಿಸುತ್ತವೆ ಎಂದಿದ್ದಾರೆ.
ಇದನ್ನೂ ಓದಿ- 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು : ರಾಜ್ಯ ಶಿಕ್ಷಣ ಇಲಾಖೆ ಆದೇಶ!
ಇವುಗಳಲ್ಲಿಯೂ ಕೊರೊನಾ ವೈರಸ್ ಇದೆ
ಈ ವಿಚಿತ್ರ ಪ್ರಜಾತಿಯ ಬಾವಲಿ ಅಂದರೆ Disk Footed Bat, Eudiscopus denticulus ಬಾವಲಿಗಳ ವರ್ಗ Vespertilionidae ಗಳ ಸಬ್ ಜೀನ್ಸ್ ಗಳಾಗಿವೆ. ವೆಸ್ಪರ್ ಬಾವಲಿಗಳಲ್ಲಿಯೂ ಕೂಡ ಕೊರೊನಾ ವೈರಸ್ ಕಂಡುಬಂದಿದೆ. ಈ ರೀತಿಯ ವೈರಸ್ ಗೆ ಅಲ್ಫಾ ಕೊರೊನಾ ವೈರಸ್ ಎಂದು ಕರೆಯುತ್ತಾರೆ.
ಇದನ್ನೂ ಓದಿ- ಕೊರೊನಾ ಪ್ರಕರಣಗಳ ಹೆಚ್ಚಳದ ಮಧ್ಯೆಯೇ ಮತ್ತೊಂದು ಶಾಕಿಂಗ್ ಸುದ್ದಿ..!
ಹಲವು ರೀತಿಯ ಕೊರೊನಾ ವೈರಸ್ ಗಳಿವೆ
ಈ ರೀತಿಯ ವಿಚಿತ್ರ ಬಾವಲಿಗಳಲ್ಲಿಯೂ ಕೂಡ ವಿಭಿನಾ ಕೊರೊನಾ (Coronavirus) ರೂಪಾಂತರಿ ಸಿಗುವ ಸಾಧ್ಯತೆ ಇದೆ. ಉದಾ- Bat Coronavirus 1, BtCoV 512, BtCoV-HKU8, BtCoV-HKU2, Human Coronavirus HCoV-NL63 and HCoV-229E. ಆದರೆ, ಈ ಡಿಸ್ಕ್ FOOTED ಬಾವಲಿಗಳಿಂದ ಕೊರೊನಾ ಹರಡಿದ ಯಾವುದೇ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ.
ಇದನ್ನೂ ಓದಿ-Coronavirus: ಈವರೆಗಿನ ಎಲ್ಲಾ ದಾಖಲೆ ಮುರಿದ ಕರೋನಾ ಸುನಾಮಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.