ನವದೆಹಲಿ: ಭಾರತವು ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು ಮೂರು ಲಕ್ಷ ಪ್ರಕರಣಗಳನ್ನು ಮತ್ತು 2,000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ, ಇದೆ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ COVID ವೈರಸ್‌ನಲ್ಲಿ ಹೊಸ ರೂಪಾಂತರವು ಹೊಸ ಸವಾಲಾಗಿ ಹೊರಹೊಮ್ಮಿದೆ.
ಡಬಲ್ ರೂಪಾಂತರದ ನಂತರ, ಈಗ ಟ್ರಿಪಲ್ ರೂಪಾಂತರ, ಅಂದರೆ ಮೂರು ವಿಭಿನ್ನ ಕೋವಿಡ್ (COVID-19) ತಳಿಗಳು ಹೊಸ ರೂಪಾಂತರವನ್ನು ರೂಪಿಸುತ್ತವೆ, ಇದು ದೇಶದ ಕೆಲವು ಭಾಗಗಳಲ್ಲಿ ಪತ್ತೆಯಾಗಿದೆ.ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಟ್ರಿಪಲ್ ರೂಪಾಂತರಿತ ಪ್ರಕರಣಗಳು ಕಂಡು ಬಂದಿವೆ.
ಇದನ್ನೂ ಓದಿ: Coronavirus: ಈವರೆಗಿನ ಎಲ್ಲಾ ದಾಖಲೆ ಮುರಿದ ಕರೋನಾ ಸುನಾಮಿ
ಜಾಗತಿಕವಾಗಿ ಹೊಸ ಉಲ್ಬಣಗಳು ಹೊಸ ರೂಪಾಂತರಗಳಿಂದ ಪ್ರೇರಿತವಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ."ಇದು ಹೆಚ್ಚು ಹರಡುವ ರೂಪಾಂತರವಾಗಿದೆ, ಇದು ಸಾಕಷ್ಟು ಜನರನ್ನು ಶೀಘ್ರವಾಗಿ ರೋಗಿಗಳನ್ನಾಗಿ ಮಾಡುತ್ತಿದೆ" ಎಂದು ಮೆಕ್‌ಗಿಲ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಮಧುಕರ್ ಪೈ ಹೇಳಿದ್ದಾರೆ.
ಇದು ಭಾರತಕ್ಕೆ ಒಂದು ದೊಡ್ಡ ಸವಾಲನ್ನು ಒಡ್ಡುತ್ತದೆ, ಅಲ್ಲಿ ಪ್ರಸ್ತುತ ಎಲ್ಲಾ ಪ್ರಕರಣಗಳಲ್ಲಿ ಒಂದು ಶೇಕಡಾಕ್ಕಿಂತ ಕಡಿಮೆ ಪ್ರಮಾಣದಲ್ಲಿ ಜೀನೋಮ್ ಅನುಕ್ರಮಣಿಕೆಯನ್ನು ಮಾಡಲಾಗುತ್ತಿದೆ.ಡಾ. ಪೈ ಅವರ ಪ್ರಕಾರ, ಡಬಲ್ ರೂಪಾಂತರವನ್ನು ಕಂಡುಹಿಡಿಯುವಲ್ಲಿನ ವಿಳಂಬವು ಪ್ರಸ್ತುತ ವೈರಸ್ ಪ್ರಚೋದನೆಗೆ ಕಾರಣವಾಗಬಹುದು.
ಇದನ್ನೂ ಓದಿ: Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್
ಅನೇಕ ರೂಪಾಂತರಗಳ ಉಲ್ಬಣವೇಕೆ?
ವೈರಸ್ ಎಷ್ಟು ಹೆಚ್ಚು ಹರಡುತ್ತದೆಯೋ ಅಷ್ಟು ಅದು ಪುನರಾವರ್ತಿಸುತ್ತದೆ ಮತ್ತು ಅದು ಹೆಚ್ಚು ರೂಪಾಂತರಗೊಳ್ಳುತ್ತದೆ.
ಟ್ರಿಪಲ್ ರೂಪಾಂತರ ಎಂದರೇನು?
ಎರಡು ತಳಿಗಳು ಸೇರಿಕೊಂಡಾಗ ಅದು ಡಬಲ್ ರೂಪಾಂತರವಾಗುತ್ತದೆ. ಈಗ ಮೂರು ಕೋವಿಡ್ ರೂಪಾಂತರಗಳು ಸೇರಿ ಟ್ರಿಪಲ್ ರೂಪಾಂತರವನ್ನು ರೂಪಿಸಿವೆ.
ಟ್ರಿಪಲ್ ರೂಪಾಂತರ ಎಲ್ಲಿದೆ?
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ
ಟ್ರಿಪಲ್ ರೂಪಾಂತರವು ಸಾಂಕ್ರಾಮಿಕವಾಗಿದೆಯೇ?
ರೂಪಾಂತರಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತಾಜಾ ಸೋಂಕಿನ ಏರಿಕೆಗೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಟ್ರಿಪಲ್ ರೂಪಾಂತರವು ಎಷ್ಟು ಸಾಂಕ್ರಾಮಿಕವಾಗಿದೆ, ಅಥವಾ ಎಷ್ಟು ಮಾರಕವಾಗಿದೆ ಎಂಬುದು ಹೆಚ್ಚಿನ ಅಧ್ಯಯನಗಳಿಂದ ಮಾತ್ರ ತಿಳಿಯುತ್ತದೆ.ಸದ್ಯಕ್ಕೆ, ಭಾರತದಾದ್ಯಂತ ಕೇವಲ 10 ಲ್ಯಾಬ್‌ಗಳು ಮಾತ್ರ ವೈರಸ್ ಜೀನೋಮ್ ಅಧ್ಯಯನದಲ್ಲಿ ತೊಡಗಿಕೊಂಡಿವೆ.ಡಬಲ್ ರೂಪಾಂತರಿತವು ಹೆಚ್ಚಿದ ಪ್ರಸರಣ ದರವನ್ನು ತೋರಿಸುತ್ತದೆ ಮತ್ತು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಇದು ಹೆಚ್ಚು ತೀವ್ರವಾದ ರೋಗಕಾರಕತೆಯನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇದನ್ನೂ ಓದಿ: Coronavirus : ದೆಹಲಿ ಬಳಿಕ ಸಂಪೂರ್ಣ ಲಾಕ್ ಡೌನ್ ನತ್ತ ಮಹಾರಾಷ್ಟ್ರ.!
ಅಸ್ತಿತ್ವದಲ್ಲಿರುವ ಲಸಿಕೆಗಳು ಟ್ರಿಪಲ್ ರೂಪಾಂತರದ ವಿರುದ್ಧ ಕಾರ್ಯನಿರ್ವಹಿಸಲಿದೆಯೇ?
ಟ್ರಿಪಲ್ ರೂಪಾಂತರದಲ್ಲಿನ ಮೂರು ರೂಪಾಂತರಗಳಲ್ಲಿ ಎರಡು ರೋಗನಿರೋಧಕ ಪಾರು ಪ್ರತಿಕ್ರಿಯೆಗಳನ್ನು ಹೊಂದಿರುವುದು ಕಂಡುಬಂದಿದೆ, ಅಂದರೆ ಅವು ಪ್ರತಿಕಾಯಗಳಿಗೆ ಹೆಚ್ಚು ನಿರೋಧಕವಾಗಿರುತ್ತವೆ.ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಇನ್ನೂ ಹೆಚ್ಚು ತಿಳಿದುಬಂದಿಲ್ಲ. ಕೋವಿಡ್‌ಗೆ ದೇಹದ ಸ್ವಾಭಾವಿಕವಾಗಿ ಸ್ವಾಧೀನಪಡಿಸಿಕೊಂಡ ಪ್ರತಿರಕ್ಷೆಯಿಂದ ಪಾರಾಗಲು ಹೊಸ ರೂಪಾಂತರವು ಕೆಲವು ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.