ಬೆಂಗಳೂರು: ದೀಪಾವಳಿ ಹಬ್ಬಕ್ಕೂ ಮುನ್ನ ಹಲವು ವಾಹನ ತಯಾರಿಕಾ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಉತ್ಪನ್ನಗಳ ಮಾರಾಟ ಮಾಡಲು ವಿವಿಧ ರೀತಿಯ ಕೊಡುಗೆಗಳನ್ನು ಪ್ರಕಟಿಸುತಿವೆ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 10,000 ರೂ.ವರೆಗೆ ರಿಯಾಯಿತಿ ನೀಡುತ್ತಿದೆ. ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಹಬ್ಬದ ಋತುವಿನಲ್ಲಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ, ನೀವು ಟಿವಿಎಸ್ ಐಕ್ಯೂಬ್ ಅನ್ನು ನಿಮ್ಮ ಪಟ್ಟಿಯಲ್ಲಿ ಇರಿಸಬಹುದು. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ರೂ 10,000 ವರೆಗಿನ ಪ್ರಯೋಜನಗಳನ್ನು ನೀಡುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ಗಳ ರೆಂಜ್  ನೀಡುತ್ತದೆ. 


COMMERCIAL BREAK
SCROLL TO CONTINUE READING

ಟಿವಿಎಸ್ ಐಕ್ಯೂಬ್ ಮೇಲೆ ಈ ಕೊಡುಗೆ ಲಭ್ಯವಿದೆ
ಕಂಪನಿಯ ವೆಬ್‌ಸೈಟ್ ಪ್ರಕಾರ, ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ರೂ 10,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಕಂಪನಿಯು ರೂ 7500 ಕ್ಯಾಶ್ಬ್ಯಾಕ್ ನೀಡುತ್ತಿದೆ. ಇದಲ್ಲದೆ, ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವಾಗ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡಿದೆ. ಇನ್ನೊಂದೆಡೆ, ಗ್ರಾಹಕರು ವಾರಂಟಿಯನ್ನು 70000 ಕಿಮೀ ಅಥವಾ 5 ವರ್ಷಗಳವರೆಗೆ ವಿಸ್ತರಿಸಬಹುದು.


ಟಿವಿಎಸ್ ಐಕ್ಯೂಬ್ ಬೆಲೆ
ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯ ಕುರಿತು ಹೇಳುವುದಾದರೆ, ದೆಹಲಿಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 1.55 ಲಕ್ಷ ರೂಪಾಯಿಗಳು, ಇದರಲ್ಲಿ ಚಾರ್ಜರ್ ಮತ್ತು ಜಿಎಸ್‌ಟಿ ಶಾಮೀಳಾಗಿವೆ. ಇದಾದ ನಂತರ 21131 ರೂ.ಗಳ ಫೇಮ್-2 ಸಬ್ಸಿಡಿ ಲಭ್ಯವಿದ್ದು, ರಾಜ್ಯ ಸರಕಾರದಿಂದ 17000 ರೂ.ಗಳ ಸಹಾಯಧನದ ಬಳಿಕ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.17 ಲಕ್ಷ ರೂ.ಗಳಿಗೆ ಸಿಗುತ್ತದೆ ಈ ಬೆಲೆಯಲ್ಲಿಯೂ ಸಹ ನೀವು ರೂ 10,000 ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತೀರಿ. ಅಂದರೆ ನೀವು ಕೇವಲ 1.07 ಲಕ್ಷಕ್ಕೆ ಈ ಸ್ಕೂಟರ್ ಅನ್ನು ಮನೆಗೆ ತರಬಹುದು. 


ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ರೆಂಜ್
ಕಂಪನಿಯ ವೆಬ್‌ಸೈಟ್ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್ ಮೂರು ಬಣ್ಣದ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಉನ್ನತ ಶ್ರೇಣಿ 100 ಕಿಲೋಮೀಟರ್. ಅಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 100 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 78 ಕಿಲೋಮೀಟರ್ ಆಗಿದ್ದು, ಈ ಸ್ಕೂಟರ್ 4.30 ಗಂಟೆಗಳಲ್ಲಿ 0-80 ಪ್ರತಿಶತದಷ್ಟು ಚಾರ್ಜಿಂಗ್ ಅನ್ನು ಪೂರ್ಣಗೊಳಿಸುತ್ತದೆ.


ಇದನ್ನೂ ಓದಿ-ರೂ.500ಕ್ಕೂ ಕಡಿಮೆ ಬೆಲೆಯ ಅದ್ಭುತ ರಿಚಾರ್ಜ್ ಯೋಜನೆ, ಏಕಕಾಲಕ್ಕೆ 15 ಓಟಿಟಿ ವೇದಿಕೆಗಳಿಗೆ ಉಚಿತ ಪ್ರವೇಶ!


ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ವೈಶಿಷ್ಟ್ಯಗಳು
ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 21 ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಒದಗಿಸಲಾಗಿದೆ. ಈ ವೈಶಿಷ್ಟ್ಯಗಳು ಜಿಯೋಫೆನ್ಸಿಂಗ್, ನ್ಯಾವಿಗೇಷನ್ ಅಸ್ಸಿಸ್ಟಂಸ್, ರಿಮೋಟ್ ಚಾರ್ಜ್ ಸ್ಥಿತಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಈ ಸ್ಕೂಟರ್ 3.04 kWh ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಸ್ಕೂಟರ್ ನೀರು ಮತ್ತು ಧೂಳು ನಿರೋಧಕವಾಗಿದೆ.


ಇದನ್ನೂ ಓದಿ-Hero ತನ್ನ ಈ ಇಲೆಕ್ಟ್ರಿಕ್ ಸ್ಕೂಟರ್ ಮೇಲೆ 21000 ರೂ.ಗಳ ಬಂಪರ್ ಕೊಡುಗೆ ನೀಡುತ್ತಿದೆ!


ಇದಲ್ಲದೇ, ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 12.7 cm TFT ಸ್ಕ್ರೀನ್ ಲಭ್ಯವಿದೆ. ಹಗಲು ರಾತ್ರಿ ಸ್ವಯಂಚಾಲಿತ ಮೋಡ್ ಅನ್ನು ಒದಗಿಸಲಾಗಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 32 ಲೀಟರ್ ಸಾಮರ್ಥ್ಯವನ್ನು ನೀಡಿದೆ, ಅಂದರೆ, ಲಭ್ಯವಿರುವ ಬೂಟ್ ಸ್ಪೇಸ್ 32 ಲೀಟರ್ ಆಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.