ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ತಿಳಿದುಕೊಳ್ಳಿ ಏನಿದು GB WhatsApp? ಇಲ್ಲವಾದರೆ ಭಾರೀ ನಷ್ಟವಾದೀತು
ಬಳಕೆದಾರರು ಚಾಟ್ ಮಾಡುವುದು, ಕರೆ ಮಾಡುವುದು ಇತ್ಯಾದಿಗಳನ್ನು ವಾಟ್ಸಾಪ್‌ನಲ್ಲಿ ಮಾಡುವ ರೀತಿಯಲ್ಲಿಯೇ ಮಾಡಬಹುದು. ಜಿಬಿ ವಾಟ್ಸಾಪ್ ಬಳಕೆದಾರರಿಗೆ ಯೂಸರ್ ಕಸ್ಟಮೈಸೆಶನ್ ಸೌಲಭ್ಯವನ್ನು ಕೂಡಾ ಒದಗಿಸುತ್ತದೆ.
ನವದೆಹಲಿ : ಈ ದಿನಗಳಲ್ಲಿ ಜಿಬಿ ವಾಟ್ಸಾಪ್ (GB WhatsApp) ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿದೆ. ಇಷ್ಟಕ್ಕೂ ಈ GB WhatsApp ಅಂದರೆ ಏನು ? ಇದು ಬಹಳ ಅಪಾಯಕಾರಿ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ. ಹಾಗಿದ್ದರೆ ಜಿಬಿ ವಾಟ್ಸಾಪ್ ಎಂದರೇನು ಮತ್ತು ಅದು ಹೇಗೆ ಹಾನಿ ಉಂಟು ಮಾಡುತ್ತದೆ ಎಂದು ನೊಡೋಣ.
ಏನಿದು ಜಿಬಿ ವಾಟ್ಸಾಪ್ ?
ಇಲ್ಲಿ ಬಳಕೆದಾರರು ಚಾಟ್ ಮಾಡುವುದು, ಕರೆ ಮಾಡುವುದು ಇತ್ಯಾದಿಗಳನ್ನು ವಾಟ್ಸಾಪ್‌ನಲ್ಲಿ (Whatsapp) ಮಾಡುವ ರೀತಿಯಲ್ಲಿಯೇ ಮಾಡಬಹುದು. ಜಿಬಿ ವಾಟ್ಸಾಪ್ ಬಳಕೆದಾರರಿಗೆ ಯೂಸರ್ ಕಸ್ಟಮೈಸೆಶನ್ ಸೌಲಭ್ಯವನ್ನು ಕೂಡಾ ಒದಗಿಸುತ್ತದೆ. ಇದರಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ. ಈ ವೈಶಿಷ್ಟ್ಯಗಳಿಂದಾಗಿ ಇದರ ಬಳಕೆ ಇನ್ನಷ್ಟು ಸುಲಭ ಎನ್ನಲಾಗಿದೆ. ಈ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ವಿವರಗಳ ವಿಷಯದಲ್ಲಿ ಬಹಳ ಅಪಾಯಕಲಾರಿ ಎನ್ನಲಾಗಿದೆ.
ಇದನ್ನೂ ಓದಿ : Google-Facebook ಅಧಿಕಾರಿಗಳಿಗೆ Shashi Tharoor ನೇತೃತ್ವದ ಸಂಸದೀಯ ಸಮಿತಿಯ ಬುಲಾವ್
GB WhatsAppನ ಆಘಾತಕಾರಿ ಅನಾನುಕೂಲಗಳು :
ಮುಖ್ಯವಾದ ವಿಷಯವೆಂದರೆ ನೀವು ಜಿಬಿ ವಾಟ್ಸಾಪ್ (GB Whatsapp) ಬಳಸಿದರೆ, ನಿಮ್ಮ ಮೂಲ ವಾಟ್ಸಾಪ್ ಖಾತೆಯನ್ನು ಬ್ಲಾಕ್ ಮಾಡಿಬಿಡಬಹುದು. ಈ ಕ್ಲೋನ್ ಅಪ್ಲಿಕೇಶನ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಲಭ್ಯವಿಲ್ಲ ಎಂಬುದು ಅತ್ಯಂತ ಮುಖ್ಯವಾದ ವಿಷಯ. ಅದನ್ನು ಡೌನ್‌ಲೋಡ್ ಮಾಡಲು, ಅದರ ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಅದು ಸುರಕ್ಷಿತವಾದ ಆಯ್ಕೆಯಲ್ಲ.
ಅಪ್ಲಿಕೇಶನ್ ಬಗ್ಗೆ ಜಾಗರೂಕರಾಗಿರಿ :
ವಾಟ್ಸಾಪ್ ಮಾತ್ರವಲ್ಲ,ನೀವು ಯಾವುದೇ ಆಪ್ ಡೌನ್ ಲೋಡ್ (Download) ಮಾಡುವುದಾದರೂ ಗೂಗಲ್ ಪ್ಲೇ ಸ್ಟೋರ್ ಅನ್ನೇ ಬಳಸಿ. ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಬೇಡಿ. ಇದು ಅಪಾಯಕಾರಿಯಾಗಿ ಸಾಬೀತಾಗಬಹುದು. ಅಲ್ಲದೆ, ನಿಮಗೆ ಬಹಳಷ್ಟು ಹಾನಿ ಉಂಟುಮಾಡಬಹುದು.
ಇದನ್ನೂ ಓದಿ : Mi 11 Lite: ಇಂದಿನಿಂದ ಮಾರಾಟಕ್ಕೆ ಲಭ್ಯವಾಗಲಿದೆ ಸ್ಲಿಮ್ಮೆಸ್ಟ್ ಸ್ಮಾರ್ಟ್‌ಫೋನ್ ಎಂಐ 11 ಲೈಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.