Science Behind Love Feeling: ನೀವೂ ಕೂಡ ನಿಮ್ಮ ಜೀವನದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರೆ ಅಥವಾ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಹೊಟ್ಟೆಗೆ ಕಚಗುಳಿ ಇಟ್ಟ ಅನುಭವ ನಿಮಗೂ ಆಗಿರುತ್ತದೆ, ನಿದ್ದೆ ಹಾರಿಹೋಗಿರುತ್ತದೆ, ಹಸಿವು-ಬಾಯಾರಿಕೆಯಂತಹ ಅನುಭವಗಳು ಕೂಡ ಹಿಂದೆ ಬಿದ್ದಿರುತ್ತವೆ. ಇದರ ಹಿಂದಿನ ಕಾರಣವೇನು ಎಂದು ಎಂದಾದ್ದರು ಯೋಚಿಸಿದ್ದೀರಾ? ವಾಸ್ತವದಲ್ಲಿ, ಪ್ರೀತಿಯ ವಿಜ್ಞಾನವು ಎಲ್ಲರ ತಿಳುವಳಿಕೆಯನ್ನು ಮೀರಿದೆ. ಹೀಗಾಗಿ ಪ್ರೀತಿ, ಪ್ರೇಮ ಮತ್ತು ಪ್ರಣಯದಂತಹ ವಿಷಯಗಳು ನಮ್ಮ ಹೃದಯಕ್ಕೆ ಸಂಬಂಧಿಸಿದೆ ಎಂದು ನಾವೆಲ್ಲರೂ ಭಾವಿಸುತ್ತೇವೆ, ಆದರೆ ವಿಜ್ಞಾನವು ಅದನ್ನು ನಂಬುವುದಿಲ್ಲ. 'ಕುಚ್-ಕುಚ್ ಹೋತಾ ಹೈ' ಎಂಬ ಭಾವನೆಯು ನಮ್ಮ ಮನಸ್ಸಿನೊಂದಿಗೆ ಅಥವಾ ಮೆದುಳಿನ ಜೊತೆ ಸಂಪರ್ಕ ಹೊಂದಿದೆ ಎಂದು ವಿಜ್ಞಾನ ನಂಬುತ್ತದೆ. ಯಾರಾದರೂ ಪ್ರೀತಿಯಲ್ಲಿ ಬಿದ್ದಾಗ, ಆ ಭಾವನೆಯ ಹಿಂದೆ ಮೆದುಳಿನಿಂದ ಬಿಡುಗಡೆಯಾಗುವ ಹಾರ್ಮೋನ್ (ಲವ್ ಹಾರ್ಮೋನ್) ಇರುತ್ತದೆ ಎನ್ನಲಾಗುತ್ತದೆ. ಹೀಗಾಗಿ ವಿಜ್ಞಾನ ಕೂಡ ಪ್ರೀತಿಯನ್ನು ಮನಸ್ಸಿನ ಸಂಬಂಧವೆಂದು ಪರಿಗಣಿಸುತ್ತದೆ ಮತ್ತು ಹೃದಯದ ಸಂಬಂಧವಲ್ಲ ಎಂದು ಹೇಳುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Alert! ವಿವಾಹಿತ ಪುರುಷರೇ ಎಚ್ಚರ! ಈ 5 ಆಹಾರ-ಪಾನೀಯಗಳು ನಿಮ್ಮ ಫಲವತ್ತತೆಗೆ ಮಾರಕ
 
ಪ್ರೀತಿಯ ಹಾರ್ಮೋನ್ ಎಂದರೇನು?
ಯಾವುದೇ ಓರ್ವ ನಿರ್ಧಿಷ್ಟ ವ್ಯಕ್ತಿಯ ಮೇಲೆ ಪ್ರೀತಿ ಹುಟ್ಟಿದಾಗ, ಆ ಭಾವನೆಗೆ ಕಾರಣ ಆಕ್ಸಿಟೋಸಿನ್ ಹಾರ್ಮೋನ್. ಮಗುವಿನ ಮೇಲಿನ ತಾಯಿಯ ಈ ಪ್ರೀತಿಯಾಗಿರಲಿ, ಬಾಳಸಂಗಾತಿ ಮೇಲಿನ ಪ್ರೀತಿಯ ಭಾವನೆಯೇ ಆಗಿರಲಿ, ಪ್ರೇಮ ಜೋಡಿಗಳ ಪ್ರೀತಿಯೇ ಆಗಿರಲಿ, ಅದು ಯಾವುದೇ ರೀತಿಯ ಪ್ರೀತಿ ಹುಟ್ಟಿದಾಗ. ಅಂತಹ ಭಾವನೆಗಳ ನಂತರ, ಮೆದುಳಿನಲ್ಲಿನ ಹೈಪೋಥಾಲಮಸ್ನ ಕೆಳಗಿನ ಭಾಗದಲ್ಲಿರುವ ಪಿಟ್ಯುಟರಿ ಗ್ರಂಥಿಯಿಂದ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದೆ ಕಾರಣದಿಂದ  ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಲವ್ ಹಾರ್ಮೋನ್ ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ-Love Hormone: ಶರೀರದಲ್ಲಿ ನೈಸರ್ಗಿಕವಾಗಿ ಲವ್ ಹಾರ್ಮೋನನ್ನು ಹೆಚ್ಚಿಸುತ್ತವೆ ಈ ಹಣ್ಣುಗಳು!
 
ಯಾರನ್ನಾದರೂ ನೋಡಿದಾಗ ಹೃದಯ ಏಕೆ ಮಿಡಿಯುತ್ತದೆ
ಹೃದಯದ ಮುಖ್ಯ ಕೆಲಸವೆಂದರೆ ದೇಹದಲ್ಲಿ ರಕ್ತದ ಪರಿಚಲನೆಯನ್ನು ನಿರ್ವಹಿಸುವುದಾಗಿದೆ. ಆದರೂ ಅದರ ಎದೆಬಡಿತ ಇದ್ದಕ್ಕಿದ್ದಂತೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಯಾರೊಬ್ಬ ವಿಶಿಷ್ಟ ವ್ಯಕ್ತಿಯನ್ನು ಕಂಡರೆ ಹೃದಯ ಮತ್ತೆ ಮತ್ತೆ ಬಡಿದುಕೊಳ್ಳುತ್ತದೆ. ವಾಸ್ತವದಲ್ಲಿ  ನಾವು ಹೆಚ್ಚು ಭಯದಲ್ಲಿರುವಾಗ ಅಥವಾ ಸಂತೋಷಗೊಂಡಾಗ ಅಥವಾ ಉತ್ಸುಕರಾದಾಗ ಕ್ಯಾಟೆಕೊಲಮೈನ್ಸ್ ರಾಸಾಯನಿಕವು ದೇಹದಲ್ಲಿ ಸಕ್ರಿಯವಾಗುತ್ತದೆ. ಇದು ಮೂತ್ರಪಿಂಡದ ಬಳಿ ಇರುವ ಅಂತಃಸ್ರಾವಕ ಗ್ರಂಥಿಯಿಂದ ಹೊರಬರುತ್ತದೆ ಮತ್ತು ನರಗಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಹೃದಯ ಮತ್ತು ಮೆದುಳಿನ ಆರೋಗ್ಯವು ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂದು ಅನೇಕ ವರದಿಗಳಲ್ಲಿ ಕಂಡುಬಂದಿದೆ. ಮೆದುಳಿನಿಂದ ಸಿಗ್ನಲ್ ಪಡೆದ ತಕ್ಷಣ ಅದು ಹೃದಯ ಬಡಿತದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದೇ ಇದರ ಹಿಂದಿನ ಕಾರಣ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.