Alert! ವಿವಾಹಿತ ಪುರುಷರೇ ಎಚ್ಚರ! ಈ 5 ಆಹಾರ-ಪಾನೀಯಗಳು ನಿಮ್ಮ ಫಲವತ್ತತೆಗೆ ಮಾರಕ

Male Fertility: ಸಾಮಾನ್ಯವಾಗಿ ಭಾರತದಲ್ಲಿ ಕೆಲ ಪುರುಷರಿಗೆ ತಮ್ಮ ಆಹಾರ-ಪಾನೀಯಗಳ ಅಭ್ಯಾಸವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಇದು ಅವರಲ್ಲಿ ಅನೇಕ ಕಾಯಿಲೆಗಳನ್ನು ಉಂಟುಮಾಡುತ್ತದೆ, ಅಷ್ಟೇ ಅಲ್ಲ ಅವು ಅವರ ಫಲವತ್ತತೆಯ ಮೇಲೂ ಕೂಡ ಪರಿಣಾಮವನ್ನುಂಟು ಮಾಡುತ್ತವೆ.   

Written by - Nitin Tabib | Last Updated : Jul 3, 2023, 03:39 PM IST
  • ನಮ್ಮ ಹಾಳಾದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಸಹ ಇದಕ್ಕೆ ಕಾರಣವಾಗಿವೆ. ಈ ಕಾರಣದಿಂದಾಗಿ, ಪುರುಷರಿಗೆ ತಂದೆಯಾಗಲು ಸಾಧ್ಯವಾಗುತ್ತಿಲ್ಲ
  • ಮತ್ತು ಅದು ಅವರ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣು ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುವುದರಿಂದ
  • ವಿವಾಹಿತ ಪುರುಷರು ತಕ್ಷಣವೇ ಅಂತಹ ಆಹಾರ-ಪಾನೀಯಗಳನ್ನು ಸೇವಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು.
Alert! ವಿವಾಹಿತ ಪುರುಷರೇ ಎಚ್ಚರ! ಈ 5 ಆಹಾರ-ಪಾನೀಯಗಳು ನಿಮ್ಮ ಫಲವತ್ತತೆಗೆ ಮಾರಕ title=

Male Fertility: ಕಳೆದ ಕೆಲವು ದಶಕಗಳಲ್ಲಿ ಪುರುಷರ ಫಲವತ್ತತೆ ಕ್ರಮೇಣ ಕಡಿಮೆಯಾಗುತ್ತಿದೆ, ಅದರ ಹಿಂದೆ ಕೆಲ ಆನುವಂಶಿಕ ಕಾರಣಗಳಿರಬಹುದು, ಆದರೆ ನಮ್ಮ ಹಾಳಾದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಸಹ ಇದಕ್ಕೆ ಕಾರಣವಾಗಿವೆ. ಈ ಕಾರಣದಿಂದಾಗಿ, ಪುರುಷರಿಗೆ ತಂದೆಯಾಗಲು ಸಾಧ್ಯವಾಗುತ್ತಿಲ್ಲ ಮತ್ತು ಅದು ಅವರ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣು ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುವುದರಿಂದ ವಿವಾಹಿತ ಪುರುಷರು ತಕ್ಷಣವೇ ಅಂತಹ ಆಹಾರ-ಪಾನೀಯಗಳನ್ನು ಸೇವಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಬನ್ನಿ ಆ ಪದಾರ್ಥಗಳು ಯಾವುವು ತಿಳಿದುಕೊಳ್ಳೋಣ.

ಪುರುಷ ಫಲವತ್ತತೆಗೆ ಮಾರಕ ಈ 5 ಸಂಗತಿಗಳು
1. ಸಂಸ್ಕರಿಸಿದ ಮಾಂಸ ಸೇವನೆ

ನೀವು ಮಾಂಸ ಸೇವನೆಯ ಮೂಲಕ ನಿಮ್ಮ ಪ್ರೋಟೀನ್‌ನ ಅಗತ್ಯವನ್ನು ಪೂರೈಸಲು ಬಯಸುತ್ತಿದ್ದರೆ , ಆದಷ್ಟು ತಾಜಾ ಮಾಂಸವನ್ನು ಸೇವಿಸಲು ಪ್ರಯತ್ನಿಸಿ, ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಂಸ್ಕರಿಸಿದ ಮಾಂಸವನ್ನು ಸೇವಿಸಿದರೆ, ಅದು ನಿಮ್ಮ ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ತಂದೆಯಾಗ ಬಯಸುವ ನಿಮ್ಮ ಬಯಕೆಗೆ ಅಡ್ಡಿಪಡಿಸುತ್ತದೆ.

2. ತಂಪು ಪಾನೀಯಗಳು
ಶಾಖದಿಂದ ನೆಮ್ಮದಿ ಪಡೆಯಲು ಮತ್ತು ಪಾರ್ಟಿಗಳಲ್ಲಿ ಮೋಜು ಮಾಡಲು, ನೀವು ತಂಪು ಪಾನೀಯಗಳನ್ನು ಕುಡಿಯಬೇಕು, ಆದರೆ ಈ ಹವ್ಯಾಸವು ವಿವಾಹಿತ ಪುರುಷರ ಫಲವತ್ತತೆಗೆ ಮಾರಕ ಸಾಬೀತಾಗಬಹುದು. ವಾಸ್ತವದಲ್ಲಿ, ಇದರಲ್ಲಿರುವ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ವೀರ್ಯದ ಗುಣಮಟ್ಟದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತವೆ.

3. ಟೀ-ಕಾಫಿ
ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಜನರು ಚಹಾ ಮತ್ತು ಕಾಫಿಯನ್ನು ಸೇವಿಸಲು ಇಷ್ಟಪಡುತ್ತಾರೆ, ಆದರೆ ಈ ಹವ್ಯಾಸವು ಪುರುಷರಿಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು, ಏಕೆಂದರೆ ಇದು ಪುರುಷರ ಸಂತಾನೋತ್ಪತ್ತಿ ಕೋಶಗಳ ಆರೋಗ್ಯವನ್ನು ಹಾನಿಗೊಳಿಸುತ್ತದೆ.

ಇದನ್ನೂ ಓದಿ-

4. ಜಂಕ್ ಫುಡ್
ಮಾರುಕಟ್ಟೆಯಲ್ಲಿ ಸಿಗುವ ಜಂಕ್‌ ಫುಡ್‌ನ ರುಚಿ ನಮ್ಮನ್ನು ತುಂಬಾ ಆಕರ್ಷಿಸಬಹುದು, ಆದರೆ ಸ್ವಾದದ ಈ ಅಭ್ಯಾಸವು ಪುರುಷರಿಗೆ ನಷ್ಟದ ವ್ಯವಹಾರ ಎಂದು ಸಾಬೀತಾಗುತ್ತದೆ, ಏಕೆಂದರೆ ಇದು ಅನೇಕ ರೋಗಗಳ ಜೊತೆಗೆ ಪುರುಷ ಬಂಜೆತನಕ್ಕೆ ಆಹ್ವಾನ ನೀಡುತ್ತದೆ.

ಇದನ್ನೂ ಓದಿ-Love Hormone: ಶರೀರದಲ್ಲಿ ನೈಸರ್ಗಿಕವಾಗಿ ಲವ್ ಹಾರ್ಮೋನನ್ನು ಹೆಚ್ಚಿಸುತ್ತವೆ ಈ ಹಣ್ಣುಗಳು!

5. ಸಿಗರೇಟ್-ಮದ್ಯ
ಮದ್ಯಪಾನ, ಸಿಗರೇಟು ಮನೆಯನ್ನು ಹಾಳು ಮಾಡುತ್ತದೆ ಎಂಬ ಮಾತನ್ನು ಹಿರಿಯರಿಂದ ನಾವು ಕೇಳುತ್ತಲೇ ಬಂದಿದ್ದೇವೆ. ಈ ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಿರುವ ಪುರುಷರು ತಮ್ಮ ಲೈಂಗಿಕ ಜೀವನವನ್ನು ಹಾಳುಮಾಡುವುದಲ್ಲದೆ, ತಂದೆಯಾಗುವ ಕನಾಶಿಗೂ ಕೂಡ ಧಕ್ಕೆ ತರುತ್ತಾನೆ, ಏಕೆಂದರೆ ಇದು ಪುರುಷರ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ-Relationship Tips: ನಿಮ್ಮಲ್ಲಿ ಈ ಗುಣಗಳಿದ್ದರೆ, ಹುಡುಗಿಯರಿಗೆ ಲವ್ ಅಟ್ ಫಸ್ಟ್ ಸೈಟ್ ಗ್ಯಾರಂಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News