ಸ್ಮಾರ್ಟ್‌ಫೋನ್‌ಗಳಲ್ಲಿ ಜನ ಹೆಚ್ಚಾಗಿ ಏನ್ ವೀಕ್ಷಿಸ್ತಾರಂತೆ ಗೊತ್ತಾ?
Smartphones: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಾಡಿ ಆಗಿರುವ ಸ್ಮಾರ್ಟ್‌ಫೋನ್ ಬಗ್ಗೆ ಅಧ್ಯಯನವೊಂದು ಕೆಲವು ಶಾಕಿಂಗ್ ಮಾಹಿತಿಗಳನ್ನು ಬಹಿರಂಗಗೊಳಿಸಿದೆ. ಈ ಅಧ್ಯಯನದಲ್ಲಿ ಯಾವ ದೇಶದವರು ಹೆಚ್ಚಾಗಿ ಸ್ಮಾರ್ಟ್‌ಫೋನ್ ಬಳಸುತ್ತಾರೆ? ಯಾವ ವಯಸ್ಸಿನವರು ಯಾವ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂಬಿತ್ಯಾದಿ ಮಾಹಿತಿಗಳು ಬಹಿರಂಗಗೊಂಡಿವೆ.
Smartphones: ಪ್ರಸ್ತುತ, ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ ಜೊತೆ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಸ್ನೇಹಿತರು, ಸಂಬಂಧಿಕರು ಅಷ್ಟೇ ಏಕೆ ತನ್ನ ಸ್ವಂತ ಕುಟುಂಬದವರಿಗಿಂತಲೂ ಎಲ್ಲರಿಗೂ ಬಹಳ ಮುಖ್ಯವಾದದ್ದು ಈ ಸ್ಮಾರ್ಟ್‌ಫೋನ್. ಅಷ್ಟಕ್ಕೂ, ಸ್ಮಾರ್ಟ್‌ಫೋನ್‌ಗಳಲ್ಲಿ ಜನರು ಹೆಚ್ಚಾಗಿ ಏನನ್ನು ವೀಕ್ಷಿಸುತ್ತಾರೆ ಗೊತ್ತಾ... ಈ ಕುರಿತಂತೆ ಅಧ್ಯಯನವೊಂದು ಶಾಕಿಂಗ್ ಮಾಹಿತಿಯನ್ನು ರಿವೀಲ್ ಮಾಡಿದೆ.
ಸ್ಮಾರ್ಟ್‌ಫೋನ್ ಸಂಬಂಧಿಸಿದಂತೆ ಇತ್ತೀಚಿನ ಅಧ್ಯಯನ ಡಿಜಿಟಲ್ ಸಲಹಾ ಸಂಸ್ಥೆ ಕ್ಯಾಪಿಯೋಸ್ ನೀಡಿರುವ ಅಂಕಿ ಅಂಶಗಳ ಪ್ರಕಾರ, ಇಡೀ ವಿಶ್ವದಲ್ಲಿ ಸುಮಾರು 60% ಜನರು ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಾರೆ. ಅಂದಾಜಿನ ಪ್ರಕಾರ , ಸುಮಾರು ಐದು ಶತಕೋಟಿಗಳಷ್ಟು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಂಕಿ-ಅಂಶಗಳಲ್ಲಿ 3.7% ಹೆಚ್ಚಳವಾಗಿದ್ದು, ಇಂಟರ್ನೆಟ್ ಬಳಸುವ ಜನರ ಸಂಖ್ಯೆ 5.19 ಶತಕೋಟಿ ತಲುಪಿದೆ. ಇದು ಇಡೀ ವಿಶ್ವದ ಜನಸಂಖ್ಯೆಯ ಸುಮಾರು 64.5% ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶಗಳಿವು
ವರದಿಯಲ್ಲಿ ಹೈಲೈಟ್ ಮಾಡಲಾದ ಪ್ರಮುಖ ವಿಷಯಗಳೆಂದರೆ:
>> ಕಳೆದ ಕೆಲವು ವರ್ಷಗಳಿಗೆ ಹೊಲಿಸಿದರೆ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ.
>> ಪ್ರಮುಖ ವಿಷಯವೆಂದರೆ ಈ ಸಾಮಾಜಿಕ ಮಾಧ್ಯಮಗಳ ಬಳಕೆಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ.
>> ಪೂರ್ವ ಮತ್ತು ಮಧ್ಯ ಆಫ್ರಿಕಾದಂತಹ ದೇಶಗಳಲ್ಲಿ ಸುಮಾರು 11 ಜನರಲ್ಲಿ ಒಬ್ಬರು ಮಾತ್ರ ಸಾಮಾಜಿಕ ಮಾಧ್ಯವನ್ನು ಬಳಸುತ್ತಾರೆ.
>> ನಮ್ಮ ಭಾರತದಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬರು ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಯಾವ ದೇಶದ ಜನರು ಎಷ್ಟು ಸಮಯ ಕಳೆಯುತ್ತಾರೆ?
ಈ ವರದಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಯಾವ ದೇಶದ ಜನರು ಎಷ್ಟು ಸಮಯ ಕಳೆಯುತ್ತಾರೆ ಎಂಬ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಈ ಸಮಯವು ದಿನದಲ್ಲಿ ಎರಡು ನಿಮಿಷಗಳಿಂದ ಸುಮಾರು 26 ನಿಮಿಷಗಳವರೆಗೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಉದಾಹರಣೆಗೆ:
- ಬ್ರೆಜಿಲ್ ದೇಶದವರು ದಿನಕ್ಕೆ ಸರಾಸರಿ 3 ಗಂಟೆಗಳ 49 ನಿಮಿಷಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಾರೆ.
- ಜಪಾನ್ ದೇಶದ ಜನರು ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ಗಂಟೆಗೂ ಸಹ ಕಡಿಮೆ ಸಮಯವನ್ನು ವ್ಯಯಿಸುತ್ತಾರೆ ಎನ್ನಲಾಗಿದೆ.
ವಿಶ್ವದಾದ್ಯಂತ ಜನಪ್ರಿಯವಾಗಿರುವ ಮೂರು ಅಪ್ಲಿಕೇಶನ್‌ಗಳು:
ಇನ್ನೂ ವರದಿಯ ಪ್ರಕಾರ, ವಿಶ್ವದಾದ್ಯಂತ ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp), ಇನ್ಸ್ಟಾಗ್ರಾಂ (Instagram) ಮತ್ತು ಫೇಸ್ಬುಕ್ (Facebook) ಅಪ್ಲಿಕೇಶನ್‌ಗಳಲ್ಲಿ ಜನರು ಹೆಚ್ಚು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- Smartphone Tips: ದೀರ್ಘ ಬಾಳಿಕೆಗಾಗಿ ವಾರಕ್ಕೆ ಎಷ್ಟು ಬಾರಿ ಫೋನ್ ರೀಸ್ಟಾರ್ಟ್ ಮಾಡ್ಬೇಕು?
ಯೂಟ್ಯೂಬ್‌ನಲ್ಲಿ ಸಕ್ರಿಯರಾಗಿರುವ ಜನರು ಹೆಚ್ಚಾಗಿ ವೀಕ್ಷಿಸುವುದೇನು?
ಅಧ್ಯಯನದ ಪ್ರಕಾರ, ಸ್ಮಾರ್ಟ್‌ಫೋನ್ ಬಳಕೆದಾರರು ಯೂಟ್ಯೂಬ್‌ನಲ್ಲಿಯೂ ಕೂಡ ಅತಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಯುಎಸ್ ನಿಖರವಾದ ಜಾಹೀರಾತುದಾರರ ವರದಿಯ ಪ್ರಕಾರ, ಕಿಡ್ಸ್ (ಪಾರ್ಕ್-ಪಾರ್ಕ್) ಟಿಕ್‌ಟಾಕ್‌ನ ಜನಪ್ರಿಯತೆಯ ಹೊರತಾಗಿಯೂ ಯುಎಸ್‌ನಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಯೂಟ್ಯೂಬ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಇಲ್ಲಿನ ಹತ್ತರಲ್ಲಿ ಒಂಬತ್ತು ಮಕ್ಕಳು ಯೂಟ್ಯೂಬ್‌ನಲ್ಲಿ ಕಂಟೆಂಟ್ ಅನ್ನು ಪ್ರವೇಶಿಸುತ್ತಾರೆ. ಇದೇ ವೇಳೆ 10ರಲ್ಲಿ ನಾಲ್ಕು ಮಕ್ಕಳು ಮಾತ್ರ ಟಿಕ್‌ಟಾಕ್‌ಗೆ ಪ್ರವೇಶಿಸುತ್ತಾರೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.