ಬೆಂಗಳೂರು : ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಫೋನ್ ಹ್ಯಾಕಿಂಗ್ ಮೂಲಕ ಡೇಟಾ ಕದಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ, ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ಕೆಲವು ಬದಲಾವಣೆಗಳನ್ನು ಕಂಡ ತಕ್ಷಣ ನೀವು ಪತ್ತೆ ಹಚ್ಚಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಬದಲಾವಣೆಗಳು ಕಂಡು ಬಂದರೆ ತಕ್ಷಣ ನಿಮ್ಮ ಫೋನ್ ಆಫ್ ಮಾಡಿಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಪಾಸ್‌ವರ್ಡ್ ಬದಲಾಗಿದ್ದರೆ ಅಥವಾ ಪಾಸ್‌ವರ್ಡ್ ತಪ್ಪಾಗಿದ್ದರೆ, ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದ್ದಕ್ಕಿದ್ದಂತೆ ಫೋನ್ ಬ್ಲಿಂಕ್ ಆಗುತ್ತಿದ್ದರೆ, ಅಥವಾ ತನ್ನಷ್ಟಕ್ಕೆ ಫೋನ್ ಲಾಕ್ ಅನ್ ಲಾಕ್ ಆದರೆ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರುವ ಸಾಧ್ಯತೆಯಿದೆ.
ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಎಂದು ತಿಳಿದುಕೊಳ್ಳುವ ಇನ್ನೊಂದು ವಿಧಾನವೆಂದರೆ, ಸ್ಮಾರ್ಟ್‌ಫೋನ್‌ನಲ್ಲಿರುವ ಮೆಸೇಜ್ ಗಳು ಡಿಲೀಟ್ ಆಗುವುದು ಅಥವಾ ಮೆಸೇಜ್ ಗಳು ರೀಡ್ ಆಗುವುದು. ನಿಮಗೆ ಗೊತ್ತಿಲ್ಲದಂತೆ ಬೇರೆಯವರು ರಿಮೋಟ್ ಮೂಲಕ ನಿಮ್ಮ ಫೋನ್ ಅಕ್ಸೆಸ್ ಮಾಡುತ್ತಿರುವುದೇ ಹೀಗಾಗುವುದಕ್ಕೆ ಕಾರಣ.
ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಗೊತ್ತಿಲ್ಲದೆ ಕಾಲ್ ಡಯಲ್ ಆಗಿದ್ದರೆ, ಅದು ಕೂಡಾ ಎಚ್ಚರಿಕೆಯ ಗಂಟೆ. ತಾಂತ್ರಿಕ ದೋಷದಿಂದ ಫೋನ್ ನಲ್ಲಿ ತನ್ನಷ್ಟಕ್ಕೆ ಡಯಲ್ ಆಗುವುದು ಅಪರೂಪ. ಹ್ಯಾಕ್ ಆಗಿದ್ದಾಗ ಮಾತ್ರ ಹೀಗಾಗುವುದು ಸಾಧ್ಯ.
ಸ್ಮಾರ್ಟ್‌ಫೋನ್ ಅಕ್ಸೆಸ್ ನೀಡದೆ ವೈಫೈಗೆ ಕನೆಕ್ಟ್ ಆಗುತ್ತಿದ್ದರೆ, ಇದನ್ನು ನಿರ್ಲಕ್ಷಿಸಬಾರದು. ಸ್ಮಾರ್ಟ್‌ಫೋನ್ ಹ್ಯಾಕ್ ಆದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಮೇಲೆ ಹೇಳಿದ ಎಲ್ಲಾ ಈ ಸಂದರ್ಭದಲ್ಲಿ ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಆಫ್ ಮಾಡಬೇಕು.