ಬೇರೆ ಬೇರೆ ಚಾರ್ಜರ್‌ನಿಂದ ಫೋನ್ ಚಾರ್ಜ್ ಮಾಡುತ್ತೀರಾ! ಹಾಗಾದರೆ ಈ ಅಪಾಯ ಗ್ಯಾರಂಟಿ
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇರುವ ಬಾಕ್ಸ್‌ನಲ್ಲಿ ಚಾರ್ಜರ್ ಕೂಡ ಬರುವುದಿಲ್ಲ. ಐಫೋನ್ 13 ಸರಣಿ ಮತ್ತು ಸ್ಯಾಮ್‌ಸಂಗ್ ಎಸ್ ಸರಣಿಯ ಫೋನ್‌ಗಳಲ್ಲಿ ಚಾರ್ಜರ್ ಇರುವುದಿಲ್ಲ. ಪ್ರಮುಖ ಫೋನ್‌ಗಳೊಂದಿಗೆ ಚಾರ್ಜರ್‌ಗಳನ್ನು ಒದಗಿಸದ ಹಲವು ಕಂಪನಿಗಳಿವೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲದೆ, ಅನೇಕ ಮಂದಿ ದಿನದ ಬಹುಪಾಲು ಸಮಯವನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ಕಳೆಯುತ್ತಾರೆ. ಹೀಗೆ ಫೋನ್ ಬಳಸಿದರೆ ಬ್ಯಾಟರಿ ಎಷ್ಟು ಕಾಲದವರೆಗೆ ಉಳಿಯುತ್ತದೆ ಎನ್ನುವುದು ಪ್ರಶ್ನೆ. ಇನ್ನು ಚಾರ್ಜ್ ಖಾಲಿಯಾಗುತ್ತಿದ್ದಂತೆಯೇ ಕೈಗೆ ಸಿಕ್ಕ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡುವ ಅಭ್ಯಾಸ ಕೆಲವರದ್ದು. ಆದರೆ ಇದು ಎಷ್ಟರ ಮಟ್ಟಿಗೆ ತಪ್ಪು ಎಂಬುದು ಅನೇಕರಿಗೆ ತಿಳಿದಿಲ್ಲ.
ಇದನ್ನು ಓದಿ: Canara Bank: ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇರುವ ಬಾಕ್ಸ್‌ನಲ್ಲಿ ಚಾರ್ಜರ್ ಕೂಡ ಬರುವುದಿಲ್ಲ. ಐಫೋನ್ 13 ಸರಣಿ ಮತ್ತು ಸ್ಯಾಮ್‌ಸಂಗ್ ಎಸ್ ಸರಣಿಯ ಫೋನ್‌ಗಳಲ್ಲಿ ಚಾರ್ಜರ್ ಇರುವುದಿಲ್ಲ. ಪ್ರಮುಖ ಫೋನ್‌ಗಳೊಂದಿಗೆ ಚಾರ್ಜರ್‌ಗಳನ್ನು ಒದಗಿಸದ ಹಲವು ಕಂಪನಿಗಳಿವೆ. ಇಂಥಹ ಪರಿಸ್ಥಿತಿಯಲ್ಲಿ ಮನೆಯಲ್ಲಿರುವ ಯಾವುದೋ, ಚಾರ್ಜರ್ ಮೂಲಕ ಫೋನ್ ಚಾರ್ಜ್ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮೊದಲೇ ಹೇಳಿದ ಹಾಗೆ ತಮ್ಮ ಫೋನ್ ಅನ್ನು ಬೇರೆ ಯಾವುದೋ ಫೋನ್ ಚಾರ್ಜರ್‌ನಿಂದ ಚಾರ್ಜ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ನಮ್ಮದೇ ಚಾರ್ಜರ್‌ನಲ್ಲಿ ಫೋನ್ ಚಾರ್ಜ್ ಮಾಡಿದರೆ ನಿಧಾನವಾಗಿ ಚಾರ್ಜ್ ಆಗುತ್ತದೆ ಎಂದು ಬೇರೆ ಯಾವುದೇ ಚಾರ್ಜರ್‌ನಲ್ಲಿ ಚಾರ್ಜ್ ಮಾಡುವವರು ಅನೇಕರಿದ್ದಾರೆ. ಆದರೆ ನಿಧಾನವಾಗಿ ಚಾರ್ಜ್ ಆದರೂ ಫೋನ್ ಜೊತೆ ಬರುವ ಚಾರ್ಜರ್ ಬಳಸುವುದೇ ಸೂಕ್ತ. ನಿಮ್ಮ ಫೋನ್ 20 ವ್ಯಾಟ್ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ, ಅದು 120 ವ್ಯಾಟ್ ಅಥವಾ 65 ವ್ಯಾಟ್‌ನೊಂದಿಗೆ ಚಾರ್ಜ್ ಆಗುತ್ತದೆ. ಏಕೆಂದರೆ ಕಂಪನಿಯು 20 ವ್ಯಾಟ್‌ವರೆಗೆ ಚಾರ್ಜಿಂಗ್ ಬೆಂಬಲದ ಪ್ರಕಾರ ಫೋನ್ ಅನ್ನು ಸಿದ್ಧಪಡಿಸಿರುತ್ತದೆ.
ಕಂಪನಿಯಿಂದ ಚಾರ್ಜರ್ ಅನ್ನು ನೀಡದ ಸ್ಮಾರ್ಟ್‌ಫೋನ್ ಅನ್ನು ನೀವು ತೆಗೆದುಕೊಂಡಿದ್ದರೆ, ಕಂಪನಿಯು ಶಿಫಾರಸು ಮಾಡುವಷ್ಟೇ ಸಾಮರ್ಥ್ಯದ ಚಾರ್ಜರ್ ಅನ್ನು ಖರೀದಿಸಿ. ಅದೇ ಚಾರ್ಜ್‌ನೊಂದಿಗೆ, ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡುವುದು ಸಾಧ್ಯವಾಗುತ್ತದೆ. ನಿಮ್ಮ ಚಾರ್ಜರ್ ಹಾಳಾಗಿದ್ದರೆ ಅಥವಾ ಮುರಿದಿದ್ದರೆ ಅದೇ ಕಂಪನಿ ಅಥವಾ ಉತ್ತಮ ಕಂಪನಿಯಿಂದ ಚಾರ್ಜರ್ ಖರೀದಿಸಿ.
ಇದನ್ನು ಓದಿ: Vitamin D Deficiency: ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ
ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, ಫೋನ್‌ನ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು. ಆದರೆ ಇದು ಕೆಲವು ಅನಾನುಕೂಲಗಳನ್ನು ಹೊಂದಿದೆ. ವೇಗದ ಚಾರ್ಜಿಂಗ್ ಬ್ಯಾಟರಿಯ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ಬ್ಯಾಟರಿ ಅವಧಿಯನ್ನು ತ್ವರಿತವಾಗಿ ಕೊನೆಗೊಳಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹಲವು ಕಂಪನಿಗಳು ಸ್ಮಾರ್ಟ್ ಫೋನ್ ಗಳಲ್ಲಿ ಎರಡು ಬ್ಯಾಟರಿಗಳನ್ನು ಅಳವಡಿಸುತ್ತಿವೆ. ಶಿಯೋಮಿ 11 ಐ ಹೈಪರ್ಚಾರ್ಜ್, ಶಿಯೋಮಿ 11ಐ, ವನ್‌ಪ್ಲಸ್ 9 ಪ್ರೊ ಮತ್ತು ಸ್ಯಾಮ್‌ಸಂಗ್ ಝಡ್ ಫೋಲ್ಡ್ ಅನ್ನು ಒಳಗೊಂಡಿರುವ ಎರಡು ಬ್ಯಾಟರಿಗಳನ್ನು ಹೊಂದಿರುತ್ತವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ