ನವದೆಹಲಿ : COVID-19 ಸಾಂಕ್ರಾಮಿಕ ರೋಗವು ಕಳೆದ ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಸಿಕಾ (Vaccination) ಅಭಿಯಾನವನ್ನು ಸರ್ಕಾರ ಚುರುಕುಗೊಳಿಸುತ್ತಿದೆ. ಕರೋನಾ ವೈರಸ್ ನಿಂದ (Coronavirus) ಕಾಪಾಡಿಕೊಳ್ಳಲು ಇರುವ ಏಕೈಕ ಅಸ್ತ್ರವೆಂದರೆ ಲಸಿಕೆ. ಪ್ರಸ್ತುತ, ಭಾರತದಲ್ಲಿ ಮೂರು ಲಸಿಕೆಗಳು ಲಭ್ಯವಿದೆ.  ಕೋವಾಕ್ಸಿನ್ (Covaxin) , ಕೋವಿಶೀಲ್ಡ್ (Covisheild)  ಮತ್ತು ಸ್ಪುಟ್ನಿಕ್ ವಿ ಭಾರತದಲ್ಲಿ ಲಭ್ಯವಿದೆ. ವ್ಯಾಕ್ಸಿನೇಷನ್ ನಂತರ, ಭಾರತ ಸರ್ಕಾರವು ಲಸಿಕೆ ಹಾಕಿಸಿಕೊಂಡವರಿಗೆ COVID-19 ಲಸಿಕೆ ಪ್ರಮಾಣಪತ್ರ ಪ್ರಮಾಣಪತ್ರವನ್ನು ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಮೊದಲ ಅಥವಾ ಎರಡನೆಯ ಡೋಸ್ ಲಸಿಕೆ (Vaccine) ಹಾಕಿಸಿಕೊಂಡವರಿಗೆ ಈ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಅನೇಕ ಜನರು COVID-19 ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಬಹಳ ಅಪಾಯಕಾರಿ. COVID-19 ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿರುವ ಬಗ್ಗೆ ಭಾರತ ಸರ್ಕಾರ ಟ್ವಿಟರ್‌ನಲ್ಲಿ (twitter) ಎಚ್ಚರಿಕೆ ನೀಡಿದೆ.  ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಪೋಸ್ಟ್ ಮಾಡುವುದರಿಂದ  ವೈಯಕ್ತಿಕ ವಿವರಗಳು ಸೋರಿಕೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ. 


ಇದನ್ನೂ ಓದಿ :  ನಿಮ್ಮ Smart Phone ಬೇರೆ ಅವರಿಗೆ ಮಾರುವ ಮುನ್ನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!


COVID-19 ಲಸಿಕೆ ಪ್ರಮಾಣಪತ್ರದ ಬಗ್ಗೆ ಸರ್ಕಾರ ಹೇಳಿರುವುದೇನು ? 
ಈ ಟ್ವೀಟ್ ಅನ್ನು ಸೈಬರ್ ಸೆಕ್ಯುರಿಟಿ ವಿಂಗ್, Cyber Dost ಶೇರ್ ಮಾಡಿದೆ. ಈ ಟ್ವಿಟರ್ ಹ್ಯಾಂಡಲ್ ಅನ್ನು ಭಾರತ ಸರ್ಕಾರ ಮತ್ತು ಗೃಹ ಸಚಿವಾಲಯ ನಿರ್ವಹಿಸುತ್ತದೆ. 'COVID-19 ಲಸಿಕೆ ಪ್ರಮಾಣಪತ್ರದಲ್ಲಿ ವ್ಯಕ್ತಿಯ ಹೆಸರು ಸೇರಿದಂತೆ ಅನೇಕ ವೈಯಕ್ತಿಕ ವಿವರಗಳಿವೆ ಎಂದು Cyber Dost ಟ್ವೀಟ್‌ನಲ್ಲಿ ಹೇಳಿದೆ. ಸೈಬರ್ ವಂಚಕರು ನಿಮ್ಮನ್ನು ಮೋಸಗೊಳಿಸಲು ಇದನ್ನು ಬಳಸುವುದರಿಂದ ಈ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳದಂತೆ ಸರ್ಕಾರ ಹೇಳಿದೆ. 


ಈ ಪ್ರಮಾಣಪತ್ರವು ಹೆಸರು, ವಯಸ್ಸು, ಲಿಂಗ ಸೇರಿದಂತೆ ಅನೇಕ ಮಾಹಿತಿಯನ್ನು ಒಳಗೊಂಡಿದೆ. ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ನಂತರ, ಭಾರತ ಸರ್ಕಾರವು ಪ್ರಮಾಣಪತ್ರವನ್ನು (Vaccination certificate) ನೀಡುತ್ತದೆ. ಇದರಲ್ಲಿ ವೈಯಕ್ತಿಕ ಮಾಹಿತಿಯೊಂದಿಗೆ ಎರಡನೇ ಡೋಸ್ ದಿನಾಂಕವನ್ನು ಕೂಡಾ ನೀಡಲಾಗಿರುತ್ತದೆ. ಎರಡನೇ ಡೋಸ್ ನ ನಂತರ ಅಂತಿಮ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಭವಿಷ್ಯದಲ್ಲಿ ಈ ಪ್ರಮಾಣಪತ್ರವು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ವಿದೇಶ ಪ್ರವಾಸದ ಸಮಯದಲ್ಲಿ ಇದು ಅಗತ್ಯವಾಗಿದೆ. ಈ ಸರ್ಟಿಫಿಕೇಟನ್ನು  ಆರೋಗ್ಯ ಸೇತು (arogya setu) ಅಪ್ಲಿಕೇಶನ್‌ನಿಂದ ಅಥವಾ ಕೋವಿನ್ (CoWin) ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. 


ಇದನ್ನೂ ಓದಿ :  Smartphone: 10,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಿ ಉತ್ತಮ ಸ್ಮಾರ್ಟ್‌ಫೋನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.