ನಿಮ್ಮ ಫೋನಿನಲ್ಲಿ ಇರಲಿ ಈ ಐದು Govt. App ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ

ಪ್ರಯಾಣದಿಂದ ಹಿಡಿದು ಯಾವುದೇ ಸರ್ಕಾರಿ ಕಚೇರಿಯ ಆವರಣಕ್ಕೆ ಪ್ರವೇಶಿಸುವವರೆಗೂ, ಈ ಆರೋಗ್ಯ ಸೇತು ಆಪ್ ಕಡ್ದಾಯ. ಅಲ್ಲದೆ, ಈಗ ಕರೋನಾ ಲಸಿಕಾ ಅಭಿಯಾನ ಕೂಡಾ ಆರಂಭವಾಗಿದೆ. 

Written by - Ranjitha R K | Last Updated : Apr 8, 2021, 11:07 AM IST
  • ಸರ್ಕಾರಿ ಆಪ್ ಗಳು ಬಹಳ ಮುಖ್ಯ
  • ಪ್ರಯಾಣದಿಂದ ಹಿಡಿದು, ದಾಖಲೆ ಇಟ್ಟುಕೊಳ್ಳುವವರೆಗೆ ಸಹಕಾರಿ
  • ಈ ಆಪ್ ಗಳ ಅಗತ್ಯ ತಿಳಿಯಿರಿ
ನಿಮ್ಮ ಫೋನಿನಲ್ಲಿ ಇರಲಿ ಈ ಐದು Govt. App ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ title=
ಸರ್ಕಾರಿ ಆಪ್ ಗಳು ಬಹಳ ಮುಖ್ಯ (File photo)

ನವದೆಹಲಿ : ನಮ್ಮ ಯಾವುದೋ ಕೆಲಸಕ್ಕಾಗಿ  ಸರ್ಕಾರಿ ಕಚೇರಿಗಳಿಗೆ ಹೋಗಬೇಕಾಗಿ ಬಂದರೆ ಸಾಮಾನ್ಯವಾಗಿ ಅದು ಎಲ್ಲರಿಗೂ ಕಿರಿಕಿರಿಯಾಗುತ್ತದೆ.  ಅಲ್ಲಿ ಸೇರಿರುವ ಜನದಟ್ಟಣೆ, ನಿಧಾನಗತಿಯ ಕೆಲಸ  ಎಂಥವರಿಗೂ ಅಸಮಾಧಾನ ತರುತ್ತದೆ. ಆದರೆ, ಈಗ ಪ್ರತಿಯೊಂದು ಸರ್ಕಾರಿ ಕೆಲಸಗಳಿಗೆ ಕಚೇರಿಗೆ ಹೋಗಬೇಕೆಂದಿಲ್ಲ. ಕೆಲವೊಂದು ಅಪ್ಲಿಕೇಶನ್‌ಗಳ (App) ಮೂಲಕ ಕೆಲಸಗಳು ಬಹಳ ಬೇಗ ನಡೆದುಹೋಗುತ್ತದೆ.  

ಆರೋಗ್ಯ ಸೇತು (Arogya Setu) :
ಕರೋನಾ ವೈರಸ್ (Coronavirus)ಸೋಂಕು ಹರಡುತ್ತಿರುವ ಈ ಸಮಯದಲ್ಲಿ ನಿಮ್ಮ ಫೋನ್ ನಲ್ಲಿ ಇರಬೇಕಾದ ಪ್ರಮುಖ ಅಪ್ಲಿಕೇಶನ್ ಅಂದರೆ  ಅರೋಗ್ಯ ಸೇತು. ಪ್ರಯಾಣದಿಂದ ಹಿಡಿದು ಯಾವುದೇ ಸರ್ಕಾರಿ ಕಚೇರಿಯ ಆವರಣಕ್ಕೆ ಪ್ರವೇಶಿಸುವವರೆಗೂ, ಈ ಆರೋಗ್ಯ ಸೇತು (Arogya Setu) ಆಪ್ ಕಡ್ದಾಯ. ಅಲ್ಲದೆ, ಈಗ ಕರೋನಾ ಲಸಿಕಾ ಅಭಿಯಾನ ಕೂಡಾ ಆರಂಭವಾಗಿದೆ. ನಿಮ್ಮ ಕುಟುಂಬ ಸದಸ್ಯರಿಗೆ ವ್ಯಾಕ್ಸಿನೇಷನ್ ಗಾಗಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕೆಂದರೆ ಈ ಆಪ್ ಸಹಕಾರಿಯಾಗಿದೆ. 

ಇದನ್ನೂ ಓದಿ : Extra Validity Offer - Jio ಗ್ರಾಹಕರಿಗೊಂದು ಸಂತಸದ ಸುದ್ದಿ, ಇದೀಗ 30 ದಿನ ಹೆಚ್ಚು ನಡೆಯಲಿದೆ ಈ ಪ್ಲಾನ್

MyGov App :
ಇನ್ನು  MyGov App ಕೂಡಾ ನಿಮ್ಮ ಮೊಬೈಲ್ ನಲ್ಲಿರುವುದು ಬಹಳ ಮುಖ್ಯ. ಈ ಅಪ್ಲಿಕೇಶನ್‌ನಲ್ಲಿ ಸರ್ಕಾರಿ ಇಲಾಖೆಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಅಲ್ಲದೆ, ಸರ್ಕಾರಿ ಕೆಲಸಗಳಿಗೆ ಅಗತ್ಯವಾದ ಮಾಹಿತಿಯೂ ಇದರಲ್ಲಿ ಲಭ್ಯವಿರುತ್ತದೆ. 

ಉಮಾಂಗ್ ಅಪ್ಲಿಕೇಶನ್ (Umang App) : 
ಇನ್ನೊಂದು ಪ್ರಮುಖ ಆಪ್  ಅಂದರೆ ಉಮಾಂಗ್ ಅಪ್ಲಿಕೇಶನ್ (Unified Mobile Application For New-Age Governance). ಈ ಅಪ್ಲಿಕೇಶನ್‌ನಲ್ಲಿ, ಹೆಲ್ತ್ ಕೇರ್,  ಹಣಕಾಸು ಮತ್ತು ವಸತಿಗಳಿಗೆ ಸಂಬಂಧಿಸಿದ ಮಾಹಿತಿಗಳು ಸಿಗುತ್ತವೆ. ಇದಲ್ಲದೆ, ಪಿಎಫ್‌ಗೆ (EPF)ಸಂಬಂಧಿಸಿದ ಮಾಹಿತಿಯೂ ಇಲ್ಲಿ ಲಭ್ಯವಿರುತ್ತದೆ. ಅಷ್ಟು ಮಾತ್ರವಲ್ಲ ಸರ್ಕಾರದಿಂದ ಸಿಗುವ ಹಣಕಾಸಿನ ನೆರವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯೂ ಈ ಒಂದು ಅಪ್ಲಿಕೇಶನ್‌ನಲ್ಲಿ ಸಿಗುತ್ತದೆ. 

ಇದನ್ನೂ ಓದಿ : ಮಕ್ಕಳಿಗಾಗಿಯೇ ಮಾರುಕಟ್ಟೆಗೆ ಬಂದಿದೆ ಅಗ್ಗದ laptop, ತಿಳಿಯಿರಿ HP Chromebook 11a ವೈಶಿಷ್ಟ್ಯ

ಡಿಜಿಲಾಕರ್ ಅಪ್ಲಿಕೇಶನ್ (Digilocker App) : 
ಹೆಚ್ಚುತ್ತಿರುವ ಡೇಟಾ ಸೋರಿಕೆ ಮತ್ತು ಗೌಪ್ಯತೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು,  ಡಿಜಿಲಾಕರ್ (Digilocker ಅನ್ನುವ ವಿಶೇಷ ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ವಿಶೇಷ ಲಾಕರ್‌ನಲ್ಲಿ, ಎಲ್ಲಾ ಪ್ರಮುಖ ದಾಖಲೆಗಳ ಡಿಜಿಟಲ್ ಕಾಪಿಯನ್ನು (Digital copy) ಇಟ್ಟುಕೊಳ್ಳಬಹುದು.  

mParivahan ಅಪ್ಲಿಕೇಶನ್ :
ಇದು ಬಹಳ ಮುಖ್ಯವಾದ ಸರ್ಕಾರಿ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ನಿಮ್ಮ ಕಾರು ಮತ್ತು ಬೈಕ್‌ನ ವಿವರಗಳನ್ನು ತಿಳಿದುಕೊಳ್ಳಬಹುದು. ಅಲ್ಲದೆ, ನಿಮ್ಮ ಕಾರು (Car)  ಅಥವಾ ಬೈಕ್‌ನ ಅಗತ್ಯ ದಾಖಲೆಗಳನ್ನು ಇಲ್ಲಿ ಇಟ್ಟುಕೊಳ್ಳಬಹುದು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News