Dosa Making Machine: ನೀವು ಫೋಟೋ ಕಾಪಿ ಮಾಡುವ ಪ್ರಿಂಟರ್, ಪೇಪರ್ ಪ್ರಿಂಟರ್ ಮತ್ತು ಸೀರೆ ಪ್ರಿಂಟರ್ ಅನ್ನು ನೋಡಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ವಿಚಿತ್ರ ಪ್ರಿಂಟರ್ ಮಾರುಕಟ್ಟೆಗೆ ಬಂದಿದ್ದು ಅದರ ಹೆಸರು 'ದೋಸಾ ಪ್ರಿಂಟರ್'. ಹೌದು, ಇದೀಗ ದೋಸೆ ಪ್ರಿಂಟ್ ಮಾಡುವ ಮಷಿನ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಂದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಹಾಗೆ ನೋಡಿದರೆ ಈ ಯಂತ್ರವು ಬ್ರೆಡ್ ಮತ್ತು ಪಾಪಡ್ ಮಾಡುವ ಯಂತ್ರದಂತೆಯೇ ಇದೆ. ಈ ಯಂತ್ರವು ದೋಸೆ ಮುದ್ರಕದಲ್ಲಿ ದೋಸೆ ಹಿಟ್ಟನ್ನು ಸುರಿದ ನಂತರ ದೋಸೆ ತಯಾರಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Honor 70 5G: ಉತ್ತಮ ಕ್ಯಾಮೆರಾ & ಬ್ಯಾಟರಿ ಹೊಂದಿರುವ ಸ್ಟೈಲಿಶ್ 5G ಸ್ಮಾರ್ಟ್‌ಫೋನ್!


ದೋಸೆ ಪ್ರಿಂಟರ್ ಹೇಗೆ ಕೆಲಸ ಮಾಡುತ್ತದೆ?
ದೋಸೆ ಮಾಡುವುದು ತುಂಬಾ ಕಷ್ಟದ ಕೆಲಸ. ಕೆಲವೊಮ್ಮೆ ದೋಸೆಯು ಬಾಣಲೆಗೆ ಅಂಟಿಕೊಂಡರೆ ಮತ್ತು ಮತ್ತೆ ಕೆಲವೊಮ್ಮೆ ಅದು ತಿರುಗಿಸುವಾಗ ಮಧ್ಯದಿಂದ ಹಾಳಾಗುತ್ತದೆ. ಈ ಯಂತ್ರದಲ್ಲಿ ದೋಸೆ ಹಿಟ್ಟನ್ನು ಸುರಿದ ನಂತರ ಯಾವುದೇ ವಿಶೇಷ ಪರಿಶ್ರಮವಿಲ್ಲದೆ ನೀವು ದೋಸೆಯನ್ನು ತಯಾರಿಸಬಹುದು.  ಈ ಯಂತ್ರವು ದೋಸೆ ಮಾಡುವ ಕೆಲಸವನ್ನು ಮತ್ತಷ್ಟು ಸುಲಭವಾಗಿಸಿದೆ. ಆದರೆ ನಾವು ಅದನ್ನು ಖರೀದಿಸಲು ಹೋದರೆ, ಅದು ನಮ್ಮ ಬಜೆಟ್ ಗೆ ದುಬಾರಿಯಾಗಿ ಪರಿಣಮಿಸಲಿದೆ. ದೋಸೆ ಪ್ರಿಂಟರ್ ಬೆಲೆ 15-16 ಸಾವಿರ ರೂ.ಗಳ ಮಧ್ಯೆ ಇದೆ ಎನ್ನಲಾಗುತ್ತಿದೆ.


ಇದನ್ನೂ ಓದಿ-ಈ ದಿನದಂದು ಭಾರತದಲ್ಲಿ 5G ಸೇವೆ ಲಭ್ಯ : ಕೇಂದ್ರ ಸರ್ಕಾರ ನೀಡಿದೆ ಮಹತ್ವದ ಮಾಹಿತಿ


ಏಕೆ ಇಷ್ಟೊಂದು ಚರ್ಚೆ?
ಕೆಲವು ದಿನಗಳ ಹಿಂದೆ ಕಂಪನಿಯೊಂದು ಈ ಯಂತ್ರವನ್ನು ದೋಸಾ ಪ್ರಿಂಟರ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ದೋಸಾ ಪ್ರಿಂಟರ್ ಯಂತ್ರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಪ್ರಚಂಡ ಪ್ರತಿಕ್ರಿಯೆಗಳು ಮುನ್ನೆಲೆಗೆ ಬಂದಾಗ ಈ ಯಂತ್ರ ಬೆಳಕಿಗೆ ಬಂದಿದೆ. ಈ ಯಂತ್ರದ ಆಸಕ್ತಿದಾಯಕ ಹೆಸರಿನ ಕಾರಣ, ಇದು ಚರ್ಚೆಯ ವಿಷಯವಾಗಿ ಉಳಿದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.