Jio Double Dhamaka: ರಿಲಯನ್ಸ್ ಜಿಯೋ 5G ಸೇವೆ ಹಾಗೂ ಅಗ್ಗದ 5G ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

JioPhone 5G Launch Date: ಶೀಘ್ರದಲ್ಲಿಯೇ ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿ ತನ್ನ ಅತ್ಯಂತ ಅಗ್ಗದ 5ಜಿ ಸ್ಮಾರ್ಟ್ ಫೋನ್ ಹಾಗೂ 5ಜಿ ಸೇವೆಯನ್ನು ಬಿಡುಗಡೆ ಮಾಡಲಿದೆ. ಹೌದು, ಜಿಯೋ ತನ್ನ 5ಜಿ ಸೇವೆಗಳ ರೊಲ್ ಔಟ್ ಹಾಗೂ JioPhone 5G ಏಕಕಾಲದಲ್ಲಿಯೇ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ.  

Written by - Nitin Tabib | Last Updated : Aug 25, 2022, 07:39 PM IST
  • ಕಳೆದ ಕೆಲ ದಿನಗಳಿಂದ ಭಾರತದಲ್ಲಿ 5ಜಿ ಸೇವೆಗಳ ಆರಂಭದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
  • ಇತ್ತೀಚಿಗೆ ನಡೆದ 5G ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಎಲ್ಲ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳು ಭಾಗವಹಿಸಿದ್ದ ಕಾರಣ,
  • ಕಂಪನಿಯಲು ಯಾವಾಗ ಈ ಸೇವೆ ಆರಂಭಿಸುತ್ತಿವೆ ಎಂಬುದನ್ನು ಇದೀಗ ಗ್ರಾಹಕರು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.
Jio Double Dhamaka: ರಿಲಯನ್ಸ್ ಜಿಯೋ 5G ಸೇವೆ ಹಾಗೂ ಅಗ್ಗದ 5G ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್! title=
Jiophone 5G and Jio 5G Service

JioPhone 5G Launch Date Jio 5G Services Rollout Date: ಕಳೆದ ಕೆಲ ದಿನಗಳಿಂದ ಭಾರತದಲ್ಲಿ 5ಜಿ ಸೇವೆಗಳ ಆರಂಭದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತ್ತೀಚಿಗೆ ನಡೆದ 5G ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಎಲ್ಲ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳು ಭಾಗವಹಿಸಿದ್ದ ಕಾರಣ, ಕಂಪನಿಯಲು ಯಾವಾಗ ಈ ಸೇವೆಯನ್ನು ಆರಂಭಿಸುತ್ತಿವೆ ಎಂಬುದನ್ನು ಇದೀಗ ಗ್ರಾಹಕರು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿದ ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿ ಭಾರತದಲ್ಲಿ ಆಗಸ್ಟ್ ತಿಂಗಳಿನಲ್ಲಿಯೇ ತನ್ನ ಅತ್ಯಂತ ಅಗ್ಗದ 5ಜಿ ಸ್ಮಾರ್ಟ್ ಫೋನ್ ಹಾಗೂ 5ಜಿ ಸೇವೆಯನ್ನು ಆರಂಭಿಸುವುದಾಗಿ ಹೇಳಿತ್ತು. ಈ ಕುರಿತು ಹೊಸ ಅಪ್ಡೇಟ್ ಪ್ರಕಟವಾಗಿದ್ದು, ವರದಿಗಳ ಪ್ರಕಾರ ಜಿಯೋ ತನ್ನ 5ಜಿ ಸ್ಮಾರ್ಟ್ ಫೋನ್ ಹಾಗೂ 5ಜಿ ಸೇವೆಯನ್ನು ಒಂದೇ ದಿನ ಆರಂಭಿಸಲಿದೆ ಎನ್ನಲಾಗಿದೆ. ಈ ಕುರಿತು ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಜಿಯೋಫೋನ್ 5ಜಿ ಬಿಡುಗಡೆ ದಿನಾಂಕ!
ಆಗಸ್ಟ್ 29, 2022 ರಂದು ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ಆಯೋಜಿಸುವುದಾಗಿ ಜಿಯೋ ಇತ್ತೀಚಗಷ್ಟೇ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಸಭೆಯಲ್ಲಿ, ರಿಲಯನ್ಸ್ ಜಿಯೋ ತನ್ನ ಹೊಸ ಮತ್ತು ಅಗ್ಗದ 5G ಫೋನ್, JioPhone 5G ಅನ್ನು ಸಹ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ವರದಿಯ ಹಿನ್ನೆಲೆ ಜಿಯೋ 5ಜಿ ಫೋನ್ ಆಗಸ್ಟ್ 29ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಜಿಯೋ 5ಜಿ ಸೇವೆಗಳ ಬಿಡುಗಡೆ ದಿನಾಂಕ!
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, 5G ಫೋನ್‌ಗಳ ಜೊತೆಗೆ, Jio (Jio AGM 2022) ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 5G ಫೋನ್‌ಗಳ ಜೊತೆಗೆ ದೇಶಾದ್ಯಂತ 5G ಸಹ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ದೇಶದಲ್ಲಿ 5G ಸೇವೆ ಆರಂಭವೇ ಈ ಸಭೆಯ ಪ್ರಮುಖ ಆಕರ್ಷಣೆ ಎಂದು ಹೇಳಲಾಗುತ್ತದೆ.  ದೆಹಲಿ, ಬೆಂಗಳೂರು, ಚಂಡೀಗಢ, ಗಾಂಧಿನಗರ, ಅಹಮದಾಬಾದ್, ಗುರುಗ್ರಾಮ್, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಜಾಮ್‌ನಗರ, ಕೋಲ್ಕತ್ತಾ ಮತ್ತು ಲಖನೌ, ಈ 13 ನಗರಗಳಲ್ಲಿ 5G ಸೇವೆಗಳನ್ನು ಜಿಯೋ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

ಇದನ್ನೂ ಓದಿ-Diffuse Batteries Recycle: ನಿಮ್ಮ ಬಳಿಯೂ ಕೂಡ ಹಾಳಾದ ಬ್ಯಾಟರಿಗಳಿವೆಯಾ? ಎಸೆಯುವ ಮುನ್ನ ಒಮ್ಮೆ ಈ ಸುದ್ದಿ ಓದಿ

JioPhone 5G ಬೆಲೆ ಮತ್ತು ವೈಶಿಷ್ಟ್ಯಗಳು
Jio ತನ್ನ ಅತ್ಯಂತ ಅಗ್ಗದ 5G ಫೋನ್, JioPhone 5G ಬೆಲೆಯನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ, ಆದರೆ ವರದಿಗಳ ಪ್ರಕಾರ, ಅದರ ಬೆಲೆ 10,000 ರೂ.ಗಿಂತ ಕಡಿಮೆ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. JioPhone 5G 6.5-ಇಂಚಿನ HD + IPS LCD ಡಿಸ್ಪ್ಲೇ ಮತ್ತು 60Hz ರಿಫ್ರೆಶ್ ದರವನ್ನು ಹೊಂದಿರಲಿದೆ. 

ಇದನ್ನೂ ಓದಿ-ಮೊಟೊರೊಲಾದ ಮತ್ತೊಂದು ಅದ್ಭುತ ಸ್ಮಾರ್ಟ್‌ಫೋನ್: ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

ಸ್ಮಾರ್ಟ್ಫೋನ್ Qualcomm Snapdragon 480 5G ಚಿಪ್ ಸೆಟ್ ನಲ್ಲಿ ಕಾರ್ಯನಿರ್ವಹಿಸಬಹುದು, ಇದರಲ್ಲಿ 4GB RAM ಮತ್ತು 32GB ಆಂತರಿಕ ಸಂಗ್ರಹಣೆಯನ್ನು ಇರಲಿದೆ ಎನ್ನಲಾಗಿದೆ. ಇದು ಹಿಂಭಾಗದಲ್ಲಿ 13MP ಪ್ರಾಥಮಿಕ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆಯಿದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಬೆಂಬಲವನ್ನು ಕೂಡ JioPhone 5G ಪಡೆಯುವ ಸಾಧ್ಯತೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News