Monkeypox in India : ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗನ ಕಾಯಿಲೆ ದೊಡ್ಡ ಪ್ರಮಾಣದಲ್ಲಿ ಹರಡುವ ಅಪಾಯವಿದೆಯೇ ಎಂಬ ಹಲವು ಪ್ರಶ್ನೆಗಳು ಇದೀಗ ಕಾಡುತ್ತಿದೆ. ದೆಹಲಿಯ ರೋಗಿಯೊಬ್ಬರಲ್ಲೂ ಈ ಸೋಂಕು ಪತ್ತೆಯಾಗಿದೆ. ರೋಗಿಯು 34 ವರ್ಷದ ವ್ಯಕ್ತಿಯಾಗಿದ್ದು, ಯಾವುದೇ ವಿದೇಶಿ ಪ್ರಯಾಣವನ್ನು ಬೆಳೆಸಿಲ್ಲ. ಇಂಥಹ ಸುದ್ದಿಗಳು ವಿಶ್ವ ಆರೋಗ್ಯ ಸಂಸ್ಥೆಯ (ಕಳವಳವನ್ನೂ ಹೆಚ್ಚಿಸಿವೆ. WHO ಮಂಕಿಪಾಕ್ಸ್ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಮಂಕಿಪಾಕ್ಸ್ ಅನ್ನು ತಪ್ಪಿಸಲು WHO ನ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇಲ್ಲಿ ನೀವು ಮಂಕಿಪಾಕ್ಸ್ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಈ ಅಪ್ಲಿಕೇಶನ್‌ ಮೂಲಕ ಮಂಕಿಪಾಕ್ಸ್ ಸೋಂಕಿತರ ಬಗ್ಗೆ  ತಿಳಿದುಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ಅಲ್ಲದೆ ಈ ಸೋಂಕಿನಿಂದ  ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಸಹ ಈ ಅಪ್ಲಿಕೇಶನ್‌ನಲ್ಲಿ ಹೇಳಲಾಗಿದೆ.


ಇದನ್ನೂ ಓದಿ : ನೀವು ಆನ್‌ಲೈನ್‌ನಲ್ಲಿರುವುದು ಯಾರಿಗೂ ತಿಳಿಯಬಾರದೇ? ವಾಟ್ಸಾಪ್ ಪರಿಚಯಿಸಲಿದೆ ಹೊಸ ವೈಶಿಷ್ಟ್ಯ


ಭಾರತದಲ್ಲಿ ಮಂಕಿಪಾಕ್ಸ್ ವೈರಸ್: 
ಮಂಕಿಪಾಕ್ಸ್ ಒಂದು ಝೂನೋಟಿಕ್ ಕಾಯಿಲೆಯಾಗಿದೆ. ಇದು ಚಿಕನ್ ಪಾಕ್ಸ್ ನಂತೆಯೇ ಇರುತ್ತದೆ. ಆದರೆ ಇದು ಚಿಕನ್ ಪಾಕ್ಸ್ ಅಲ್ಲ. ಹಾಗಿದ್ದರೆ ಮಂಕಿಪಾಕ್ಸ್ ಅನ್ನು ಗುರುತಿಸುವುದು ಹೇಗೆ? ಮಂಕಿಪಾಕ್ಸ್ ರೋಗಲಕ್ಷಣಗಳ ಬಗ್ಗೆ ಮಾಹಿತಿ ಇಲ್ಲಿದೆ. 


ಮಂಕಿಪಾಕ್ಸ್ ಲಕ್ಷಣಗಳು: 
ಸಿಡಿಸಿ ಪ್ರಕಾರ, ಮಂಕಿಪಾಕ್ಸ್ ವೈರಸ್ನ ಲಕ್ಷಣಗಳು ಚಿಕನ್ ಪಾಕ್ಸ್ ನಂತೆಯೇ ಇರುತ್ತವೆ. 
- ಜ್ವರ
- ತಲೆನೋವು
- ದುಗ್ಧರಸ ಗ್ರಂಥಿಗಳ ಊತ
- ಸ್ನಾಯು ನೋವು ಮತ್ತು ಬೆನ್ನು ನೋವು
- ಶೀತ
- ವಿಪರೀತ ಆಯಾಸ
- ಮುಖದ ಮೇಲೆ  ಬಾಯಿಯ ಒಳಗೆ, ಕೈಗಳು, ಪಾದಗಳು, ಎದೆ, ಜನನಾಂಗ, ಗುದದ್ವಾರಗಳಲ್ಲಿ ಮೊಡವೆ ಅಥವಾ ಗುಳ್ಳೆಗಳಂತಹ ದದ್ದು. 


ಇದನ್ನೂ ಓದಿ : ಬಜೆಟ್ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೋ, ಇಲ್ಲಿದೆ ಇದರ ವೈಶಿಷ್ಟ್ಯ


ಮಂಕಿಪಾಕ್ಸ್ ವೈರಸ್ ತಡೆಗಟ್ಟುವುದು ಹೇಗೆ ? 
1.ಮಂಕಿಪಾಕ್ಸ್‌ನಂತಹ ದದ್ದುಗಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ನಿಕಟ  ಸಂಪರ್ಕವನ್ನು ಮಾಡಬೇಡಿ .
2.ಮಂಕಿಪಾಕ್ಸ್ ರೋಗಲಕ್ಷಣಗಳನ್ನು ತೋರಿಸುವ ವ್ಯಕ್ತಿ ಉಪಯೋಗಿಸಿದ  ಟವೆಲ್  ಅಥವಾ ಬಟ್ಟೆಗಳಂತಹ ವೈಯಕ್ತಿಕ ವಸ್ತುಗಳನ್ನು ಮುಟ್ಟಬೇಡಿ.
3. ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ. 
4. ಮಂಕಿಪಾಕ್ಸ್‌ನ ಲಕ್ಷಣ ಗೋಚರಿಸುತ್ತಿದ್ದರೆ, ಮನೆಯಲ್ಲಿಯೇ ಇರಿ
5. ಸಾಕುಪ್ರಾಣಿಗಳಿಂದಲೂ ಅಂತರ ಕಾಯ್ದುಕೊಳ್ಳಿ .


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.