ನವದೆಹಲಿ: How To Recognise Omicron Variant - ಕರೋನಾದ ಹೊಸ ರೂಪಾಂತರಿಯಾಗಿರುವ ಓಮಿಕ್ರಾನ್‌ನ (Omicron) ಹಾನಿಯಿಂದ ಪ್ರಸ್ತುತ ಜಗತ್ತು ತತ್ತರಿಸಿದೆ. ಈ ಹಿಂದೆ ವರದಿ ಮಾಡಲಾದ ಡೆಲ್ಟಾದ ಅಪಾಯಕಾರಿ ರೂಪಾಂತರಕ್ಕಿಂತ ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಆತಂಕಕಾರಿ ವಿಷಯವೆಂದರೆ ರೋಗಿಯು ಯಾವ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾನೆಂದು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂದು ನಾವು ನಿಮಗೆ ಹೇಳಲು ಹೊರಟಿರುವ ಕೆಲ ರೋಗಲಕ್ಷಣಗಳ ಸಹಾಯದಿಂದ ನೀವೂ ಕೂಡ ಮನೆಯಲ್ಲಿಯೇ ಕುಳಿತು ಯಾವ ಸೋಂಕು ಡೆಲ್ಟಾ ರೂಪಾಂತರಿಯ ಸೋಂಕು ಮತ್ತು ಯಾವುದು ಓಮಿಕ್ರಾನ್ ಸೋಂಕು ಎಂಬುದನ್ನು ಪತ್ತೆ ಹಚ್ಚಬಹುದು. .


COMMERCIAL BREAK
SCROLL TO CONTINUE READING

ಡೆಲ್ಟಾ ಮತ್ತು ಓಮಿಕ್ರಾನ್ ಗುಣಲಕ್ಷಣಗಳ (Symptoms Of Omicron) ನಡುವೆ ದೊಡ್ಡ ವ್ಯತ್ಯಾಸ
ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಕಡಿಮೆ ಅಪಾಯಕಾರಿ ಎಂದು ಹೇಳಲಾಗಿದ್ದರೂ, ಅದರ ಸಾಂಕ್ರಾಮಿಕತೆಯು ವಿನಾಶವನ್ನು ಉಂಟುಮಾಡುತ್ತಿದೆ. ಇದರಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಅದಕ್ಕಾಗಿಯೇ ಓಮಿಕ್ರಾನ್ ರೂಪಾಂತರಿಯ ಪರಿಚಯವಾದಾಗಿನಿಂದ ವಿಶ್ವಾದ್ಯಂತದ  ವಿಜ್ಞಾನಿಗಳು ಇದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ರೂಪಾಂತರದ ರೋಗಿಗಳು ನೋಯುತ್ತಿರುವ ಗಂಟಲು ಮತ್ತು ಸೌಮ್ಯವಾದ ಜ್ವರದ ಬಗ್ಗೆ ದೂರು ನೀಡಿದ್ದರು. ಇದು ಸುಲಭವಾಗಿ ಗುಣಮುಖವಾಗುತ್ತದೆ. ಇನ್ನೊಂದೆಡೆ ಡೆಲ್ಟಾ ರೂಪಾಂತರದಂತೆಯೇ (Delta Variant) ಸೋಂಕಿತ ಜನರಲ್ಲಿ ರುಚಿ ಮತ್ತು ವಾಸನೆಯ ಸಾಮರ್ಥ್ಯದ ಮೇಲೆ ಇದು ಗಮನಾರ್ಹ ಪರಿಣಾಮವನ್ನು ಬೀರುವುದಿಲ್ಲ.


ಇದನ್ನೂ ಓದಿ-Omicron Latest News: ಐದು ವರ್ಷಕ್ಕಿಂತ ಕೆಳಗಿರುವ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಓಮಿಕ್ರಾನ್ ನ ಈ ಲಕ್ಷಣ, ಕೂಡಲೇ ಎಚ್ಚೆತ್ತುಕೊಳ್ಳಿ!


ಪರೀಕ್ಷೆಗೆ 5 ದಿನಗಳ ಕಾಲಾವಕಾಶ ಬೇಕು
ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳ ಗುರುತಿಸುವಿಕೆಗೆ ಆನುವಂಶಿಕ ಅನುಕ್ರಮದ ಅಗತ್ಯವಿರುತ್ತದೆ, ಇದು ಸಾಮಾನ್ಯವಾಗಿ 4 ರಿಂದ 5 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದೇ ವೇಳೆ ರೋಗಿ ಯಾವುದೇ ರೂಪಾಂತರಿ ಸೋಂಕಿಗೆ ಒಳಗಾಗಿದ್ದರೂ ಕೂಡ, ಪ್ರತಿಜನಕ ಮತ್ತು ಆಣ್ವಿಕ ಪರೀಕ್ಷೆಗಳು ದೇಹದಲ್ಲಿ SARs-COV-2 ವೈರಸ್ ಇರುವಿಕೆಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಇನ್ನೊಂದೆಡೆ ಓಮಿಕ್ರಾನ್ ರೂಪಾಂತರವನ್ನು ಪತ್ತೆಹಚ್ಚಲು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್ ತಯಾರಿಸಿದ Omisure ಹೆಸರಿನ RT-PCR ಪರೀಕ್ಷಾ ಕಿಟ್ ಅನ್ನು ಅನುಮೋದಿಸಿದೆ. ಈ ಕಿಟ್‌ನೊಂದಿಗೆ ಹೊಸ ರೂಪಾಂತರಿಯನ್ನು ಪತ್ತೆಹಚ್ಚಬಹುದಾಗಿದೆ.


ಇದನ್ನೂ ಓದಿ-Bengaluru Lockdown! ಐಟಿ ಕಂಪನಿಗಳಿಗೆ ಸಿಕ್ಕಿದೆಯಾ ಸುಳಿವು..?


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮನೆ ಉಪಾಯಗಳು ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-ದೆಹಲಿಯಲ್ಲಿ ಒಂದೇ ದಿನದಲ್ಲಿ 28,867 ಕೊರೊನಾ ಪ್ರಕರಣಗಳ ವರದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.