Bengaluru Lockdown! ಐಟಿ ಕಂಪನಿಗಳಿಗೆ ಸಿಕ್ಕಿದೆಯಾ ಸುಳಿವು..?

ಬೆಂಗಳೂರು: Will Bengaluru Lockdown? - ಜನಸಾಮಾನ್ಯರ ನೆಮ್ಮದಿಗೆ ಮತ್ತೊಮ್ಮೆ ಡೆಡ್ಲಿ ವೈರಸ್ (Omicron) ಕೊಳ್ಳಿ ಇಟ್ಟಿದೆ. ಅತ್ತ ಕೊರೊನಾ (Coronavirus) ಹಾವಳಿ, ಇತ್ತ ಲಾಕ್ ಡೌನ್ (Lockdown) ಭೀತಿ ಆವರಿಸಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಐಟಿ ಕಂಪನಿ (IT Company Employees) ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಂ' (Work From Home) ಸುದ್ದಿ ಖುಷಿ ಕೊಟ್ಟಿದೆ‌. 

Edited by - Nitin Tabib | Last Updated : Jan 14, 2022, 01:21 PM IST
  • ಜನಸಾಮಾನ್ಯರ ನೆಮ್ಮದಿಗೆ ಮತ್ತೊಮ್ಮೆ ಡೆಡ್ಲಿ ವೈರಸ್ ಕೊಳ್ಳಿ ಇಟ್ಟಿದೆ.
  • ಅತ್ತ ಕೊರೊನಾ ಹಾವಳಿ, ಇತ್ತ ಲಾಕ್ ಡೌನ್ ಭೀತಿ ಆವರಿಸಿದೆ.
  • ಇಷ್ಟೆಲ್ಲಾ ಗೊಂದಲದ ನಡುವೆ ಐಟಿ ಕಂಪನಿ ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಂ' ಸುದ್ದಿ ಖುಷಿ ಕೊಟ್ಟಿದೆ‌.
Bengaluru Lockdown! ಐಟಿ ಕಂಪನಿಗಳಿಗೆ ಸಿಕ್ಕಿದೆಯಾ ಸುಳಿವು..? title=
Will Bengaluru Lockdown Again? (Representational Image)

ಬೆಂಗಳೂರು: Will Bengaluru Lockdown? - ಜನಸಾಮಾನ್ಯರ ನೆಮ್ಮದಿಗೆ ಮತ್ತೊಮ್ಮೆ ಡೆಡ್ಲಿ ವೈರಸ್ (Omicron) ಕೊಳ್ಳಿ ಇಟ್ಟಿದೆ. ಅತ್ತ ಕೊರೊನಾ (Coronavirus) ಹಾವಳಿ, ಇತ್ತ ಲಾಕ್ ಡೌನ್ (Lockdown) ಭೀತಿ ಆವರಿಸಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಐಟಿ ಕಂಪನಿ (IT Company Employees) ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಂ' (Work From Home) ಸುದ್ದಿ ಖುಷಿ ಕೊಟ್ಟಿದೆ‌. ಈಗಾಗಲೇ ಬೆಂಗಳೂರಿನ ಬಹುತೇಕ ಐಟಿ ಕಂಪನಿಗಳು ತಮ್ಮ ತಮ್ಮ ಸಂಸ್ಥೆಗಳ ಉದ್ಯೋಗಿಗಳಿಗೆ ಈ ಬಗ್ಗೆ ನೋಟಿಫಿಕೇಷನ್ ನೀಡಿದ್ದು, ಲಾಕ್ ಡೌನ್ ಬಗ್ಗೆ ಐಟಿ ವಲಯಕ್ಕೆ ಈಗಾಗಲೇ ಸುಳಿವು ಸಿಕ್ಕಿದೆಯಾ ಎಂಬ ಅನುಮಾನ ಕಾಡುತ್ತಿದೆ.

ಬೆಂಗಳೂರು ಬಿಟ್ಟ ಉದ್ಯೋಗಿಗಳು..!
ಒಂದಲ್ಲ ಎರಡಲ್ಲ ಬೆಂಗಳೂರಿನಲ್ಲಿ ಸಾವಿರಾರು ಐಟಿ ಕಂಪನಿಗಳಿವೆ. ಅದರಲ್ಲೂ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸಿ 'ವರ್ಕ್ ಫ್ರಂ ಹೋಂ' ನೀಡಿವೆ. ಹೀಗಾಗಿ ಬೆಂಗಳೂರಿನಲ್ಲಿ ವಾಸವಿದ್ದ ಉದ್ಯೋಗಿಗಳು ಪಿಜಿ, ಮನೆಗಳನ್ನ ಖಾಲಿ ಮಾಡಿ ತಮ್ಮ ತಮ್ಮ ಊರಿನ ದಾರಿ ಹಿಡಿದಿದ್ದಾರೆ. ಹೀಗೆ ಕಳೆದ ಕೆಲವು ದಿನಗಳಿಂದ ಸಾವಿರಾರು ಉದ್ಯೋಗಿಗಳು ಮತ್ತೊಮ್ಮೆ ಬೆಂಗಳೂರು ತೊರೆದಿದ್ದಾರೆ. ತಮ್ಮ ಊರಿಂದ ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದವರು ಮತ್ತೆ ತಮ್ಮ ಊರಿಗೆ ತೆರಳಿದ್ದಾರೆ‌. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಲಕ್ಷ ಮುಟ್ಟಿದರೂ ಆಶ್ಚರ್ಯವಿಲ್ಲ.

ಲಾಕ್ ಡೌನ್ ಆಗುತ್ತಾ..?
ಲಾಕ್ ಡೌನ್ ಬಗ್ಗೆ ರಾಜ್ಯ ಸರ್ಕಾರ (State Government) ಇದುವರೆಗೂ ಕೂಡ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೂ ಸಹ ಐಟಿ ಕಂಪನಿಗಳ  'ವರ್ಕ್ ಫ್ರಂ ಹೋಂ' ನಿರ್ಧಾರ ಲಾಕ್ ಡೌನ್ ಗಾಳಿ ಸುದ್ದಿಗೆ ಬಲ ನೀಡಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳನ್ನ ಲಾಕ್ ಮಾಡಲು ತಯಾರಿ ನಡೆದಿದೆಯಾ ಎಂಬ ಅನುಮಾನ ಇದೀಗ ಜನರ ಮನದಲ್ಲಿ ಕಾಡತೊಡಗಿದೆ.

ಇದನ್ನೂಓದಿ-'ಮನೆ ಕೆಲಸದವರು, ಡ್ರೈವರ್ ಅಥವಾ ಡೆಲಿವರಿ ಬಾಯ್ ಗಳು ಲಿಫ್ಟ್ ಬಳಕೆ ಮಾಡಿದರೆ ರೂ.300 ದಂಡ'

ಮನೆ ಮಾಲೀಕರ ಆತಂಕ..!
ಬರೋಬ್ಬರಿ 2 ವರ್ಷಗಳಿಂದ ಬೆಂಗಳೂರಿನ ಮನೆ ಮಾಲೀಕರು ಸಾಲದ ಸುಳಿಗೆ ಸಿಲುಕಿದ್ದಾರೆ‌. ಅದರಲ್ಲೂ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ಪಿಜಿ ನಡೆಸುತ್ತಿದ್ದವರು ಗಂಟುಮೂಟೆ ಕಟ್ಟಿದ್ದಾರೆ‌. ಪರಿಸ್ಥಿತಿ ಇನ್ನೇನು ಸರಿ ಹೋಗುತ್ತಿದೆ ಎನ್ನುವಾಗಲೇ 3ನೇ ಅಲೆ ವಕ್ಕರಿಸಿದ್ದು, ಉದ್ಯೋಗಿಗಳು ಹಾಗೂ ವಲಸಿಗರು ರಾಜಧಾನಿ ತೊರೆಯುತ್ತಿದ್ದಾರೆ.

ಇದನ್ನೂ ಓದಿ-ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ಖಡಕ್ ಆದೇಶ!

ಸರ್ಕಾರದ ನಡೆ ಏನು..?
'ಕೊರೊನಾ' 3ನೇ ಅಲೆ (Covid-19 Third Wave) ವಕ್ಕರಿಸಿರೋದು ಬಹುತೇಕ ಕನ್ಫರ್ಮ್ ಆಗಿದ್ದು, ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗುವ ಭೀತಿ ಇದೆ. ಪರಿಸ್ಥಿತಿ ಹೀಗೆ ಕೈಮೀರಿದರೆ ಲಾಕ್ ಡೌನ್ ನಿರ್ಧಾರ ಅನಿವಾರ್ಯ ಎನ್ನಬಹುದು. ಪ್ರಸ್ತುತ ಸರ್ಕಾರ ಲಾಕ್ ಡೌನ್ ಆಯ್ಕೆಯನ್ನು ಇಟ್ಟುಕೊಂಡೇ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದನ್ನೂ ಓದಿ-Araga Jnanendra : 'ಕಾಂಗ್ರೆಸ್ ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News