ಫೋನ್‌ನಿಂದ 6 ತಿಂಗಳ ಕಾಲ್ ಹಿಸ್ಟರಿ ಪಡೆಯುವ ಸುಲಭ ಮಾರ್ಗ
Call History: ಕೆಲವೊಮ್ಮೆ ಯಾವುದೋ ಕಾರಣಕ್ಕಾಗಿ ನಿಮಗೆ ಕರೆ ಇತಿಹಾಸ ಬೇಕಾಗಬಹುದು. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನೀವು ಸುಲಭವಾಗಿ 6 ತಿಂಗಳ ಕರೆ ಇತಿಹಾಸವನ್ನು ಪಡೆಯಬಹುದು.
How To Get Call History: ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಕೇವಲ ಒಂದೇ ಒಂದು ತಿಂಗಳ ಕರೆ ಇತಿಹಾಸ ಲಭ್ಯವಿರುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ನಿಮಗೆ ಮೂರ್ನಾಲ್ಕು ತಿಂಗಳ ಹಿಂದಿನ ಕಾಲ್ ಹಿಸ್ಟರಿ ಅವಶ್ಯಕತೆ ಇದ್ದಾಗ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನೀವು ನಿಮ್ಮ ಫೋನ್‌ನಿಂದ ಬಹಳ ಸುಲಭವಾಗಿ 6 ತಿಂಗಳ ಕರೆ ಇತಿಹಾಸವನ್ನು ಪಡೆಯಬಹುದು.
ನೀವು ಎರಡು ರೀತಿಯಲ್ಲಿ ಕರೆ ಇತಿಹಾಸವನ್ನು ಪಡೆಯಬಹುದು. ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ನೀವು ಈ ಬಗ್ಗೆ ಮಾಹಿತಿ ಪಡೆಯಬಹುದು. ಇನ್ನೊಂದು ಮಾರ್ಗವೆಂದರೆ ನಿಮ್ಮ ಮೊಬೈಲ್ ಆಪರೇಟರ್‌ನಿಂದ ನೀವು ಕರೆ ಇತಿಹಾಸವನ್ನು ಪಡೆಯಬಹುದು.
ಇದನ್ನೂ ಓದಿ- ಇನ್ಮುಂದೆ ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಉಚಿತ ಬಳಸುವ ಹಾಗಿಲ್ಲ,2024ರಲ್ಲಿ ಅದಕ್ಕೆ ಹಣ ಪಾವತಿಸಬೇಕು!
ಸ್ಮಾರ್ಟ್‌ಫೋನ್‌ನಲ್ಲಿ ಕಾಲ್ ಹಿಸ್ಟರಿ ಪಡೆಯುವ ಹಂತ-ಹಂತದ ಪ್ರಕ್ರಿಯೆ:-
ಹಂತ 1: ನಿಮ್ಮ ಫೋನ್‌ನ "Call" ಅಪ್ಲಿಕೇಶನ್ ತೆರೆಯಿರಿ.
ಹಂತ 2: "ಹಿಸ್ಟರಿ" ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ 3: "ಔಟ್ ಗೋಯಿಂಗ್", "ಇನ್ ಕಮಿಂಗ್" ಅಥವಾ "ಮಿಸ್ಡ್" ಕಾಲ್ ಗಳಲ್ಲಿ ಒಂದನ್ನು ಟ್ಯಾಪ್ ಮಾಡಿ.
ಹಂತ 4: "ಕ್ಯಾಲೆಂಡರ್" ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ 5: "ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ" ನಂತರ ಅದನ್ನು ಟ್ಯಾಪ್ ಮಾಡಿ.
ಹಂತ 6: ಕಾಲ್ ಹಿಸ್ಟರಿಯನ್ನು ಆಯ್ಕೆ ಮಾಡಿ.
ಹಂತ 7: ಇದರಲ್ಲಿ ಆರು ತಿಂಗಳ ಕಾಲ್ ಹಿಸ್ಟರಿಯನ್ನು ಪಡೆಯಬಹುದು.
ಒಂದೊಮ್ಮೆ ನಿಮ್ಮ ಫೋನ್ ಹೊಸದಾಗಿದ್ದರೆ, ಇಲ್ಲವೇ ಡಾಟಾ ಅಳಿಸಿ ಹೋಗಿದ್ದರೆ ಅಂತಹ ಸಂದರ್ಭದಲ್ಲಿಯೂ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ಆಪರೇಟರ್‌ನಿಂದ ನೀವು ಕರೆ ಇತಿಹಾಸವನ್ನು ಪಡೆಯಬಹುದು.
ಇದನ್ನೂ ಓದಿ- ಗೂಗಲ್ ಮ್ಯಾಪ್ಸ್ ನಲ್ಲೂ ಬಂತು ವಾಟ್ಸ್ ಆಪ್ ನಂತಹ ಲೋಕೇಶನ್ ಶೇರಿಂಗ್ ವೈಶಿಷ್ಯ!
ಮೊಬೈಲ್ ಆಪರೇಟರ್‌ನಿಂದ ಕಾಲ್ ಹಿಸ್ಟರಿ ಪಡೆಯಲು ಏನು ಮಾಡಬೇಕು?
ನೀವು ನಿಮ್ಮ ಮೊಬೈಲ್ ಆಪರೇಟರ್‌ನಿಂದ ಕಾಲ್ ಹಿಸ್ಟರಿ ಪಡೆಯಲು ಅದಕ್ಕಾಗಿ ಮೊದಲು ನಿಮ್ಮ ಮೊಬೈಲ್ ಆಪರೇಟರ್‌ನ ವೆಬ್‌ಸೈಟ್ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸಬೇಕಾಗುತ್ತದೆ.
ಮೊಬೈಲ್ ಆಪರೇಟರ್‌ನಿಂದ ಕಾಲ್ ಹಿಸ್ಟರಿ ಪಡೆಯಲು, ನೀವು ಈ ಕೆಳಗಿನ ಮಾಹಿತಿಯನ್ನು ಒದಗಿಸಬೇಕು:
* ನಿಮ್ಮ ಮೊಬೈಲ್ ಸಂಖ್ಯೆ
* ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ
* ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ
* ಒಮ್ಮೆ ನೀವು ಈ ಮಾಹಿತಿಯನ್ನು ನಿಮ್ಮ ಮೊಬೈಲ್ ಆಪರೇಟರ್‌ಗೆ ನೀಡಿದರೆ, ಅವರು ನಿಮ್ಮ ಫೋನ್‌ನ 6 ತಿಂಗಳ ಕರೆ ಇತಿಹಾಸವನ್ನು ನಿಮಗೆ ಒದಗಿಸುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.