ವಿದ್ಯುತ್ ಉಳಿತಾಯಕ್ಕಾಗಿ ಸಲಹೆ: ಬದಲಾಗುತ್ತಿರುವ ಜಗತ್ತಿನೊಂದಿಗೆ ನಾವು ಬದಲಾಗುವುದು ಬಹಳ ಮುಖ್ಯ. ಇದು ತಂತ್ರಜ್ಞಾನದ ಯುಗ. ಈ ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಎಷ್ಟರ ಮಟ್ಟಿಗೆ ಎಲೆಕ್ಟ್ರಿಕ್ ಸಾಧನಗಳಿಗೆ ಒಗ್ಗಿಕೊಂಡಿದ್ದೇವೆ ಎಂದರೆ ಕೆಲವು ಸಾಧನಗಳು ನಮಗೆ ನೀರು, ಆಹಾರದಷ್ಟೇ ಮುಖ್ಯವಾಗಿವೆ. ಅವುಗಳಲ್ಲಿ ಫ್ಯಾನ್, ಕೂಲರ್, ಎಸಿಗಳೂ ಸೇರಿವೆ. ಮೊದಲೆಲ್ಲ ಬಿಸಿಲಿನ ತಾಪ ಹೆಚ್ಚಾದಾಗ ದಿನದಲ್ಲಿ ಕೆಲ ಸಮಯವಾದರೂ ಬೀಸಣಿಗೆ ಬಳಸುತ್ತಿದ್ದರು. ಆದರೀಗ ಯಾರಿಗೂ ಸಹ ಅಷ್ಟು ಸಮಯವೂ ಇರುವುದಿಲ್ಲ, ಆ ತಾಳ್ಮೆಯೂ ಇರುವುದಿಲ್ಲ. ಹಾಗಾಗಿಯೇ ಮನೆಯಲ್ಲಿ ಸದಾ ಫ್ಯಾನ್, ಕೂಲರ್ ಓಡುತ್ತಲೇ ಇರುತ್ತದೆ. ಆದರೆ, ವಿದ್ಯುತ್ ಬಿಲ್ ನೋಡಿದಾಗ ಆಘಾತವೇ ಆಗುತ್ತದೆ. ನಿಮಗೂ ಕೂಡ ವಿದ್ಯುತ್ ಬಿಲ್ ಭಾರವಾಗಿದೆಯೇ? ನೀವೂ ಸಹ ಅಧಿಕ ವಿದ್ಯುತ್ ಬಿಲ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದೀರಾ... ಹಾಗಿದ್ದರೆ, ಮನೆಯಲ್ಲಿ ಒಂದು ಸಾಧನವನ್ನು ಅಳವಡಿಸಿದರೆ ಸಾಕು,  ನೀವು ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.


COMMERCIAL BREAK
SCROLL TO CONTINUE READING

ಹೌದು, ಮನೆಯಲ್ಲಿ  ವಿದ್ಯುತ್ ಉಳಿತಾಯ ಸಾಧನವನ್ನು ಬಳಸುವ ಮೂಲಕ ನೀವು ಅಧಿಕವಾಗಿ ಬರುವ ವಿದ್ಯುತ್ ಬಿಲ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಇನ್ನೊಂದು ಪ್ರಮುಖ ವಿಷಯವೆಂದರೆ ನೀ ಈ ಸಾಧನವನ್ನು ಮನೆಯ ಯಾವುದೇ ಮೂಲೆಯಲ್ಲಿ ಅಳವಡಿಸಬಹುದಾಗಿದೆ. ಇದರ ನಂತರ ನೀವು ಸಾಕಷ್ಟು ವಿದ್ಯುತ್ ಉಳಿಸುತ್ತೀರಿ. 


ಇದನ್ನೂ ಓದಿ- AC ಬಳಸುವಾಗ ಈ ಟ್ರಿಕ್ ಅನುಸರಿಸಿದರೆ ನಿಮ್ಮ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಆಗುತ್ತೆ!


MD ಪ್ರೊಎಲೆಕ್ಟ್ರಾ ಪವರ್ ಸೇವರ್ ವಿದ್ಯುತ್ ಉಳಿತಾಯ ಸಾಧನ:
MD Proelektra ಪವರ್ ಸೇವರ್ ವಿದ್ಯುತ್ ಉಳಿತಾಯ ಸಾಧನವು ಸಾಕಷ್ಟು ಜನಪ್ರಿಯವಾಗಿದೆ. ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ನೀವು ಮನೆಯಲ್ಲಿ ಎಸಿ ಅಥವಾ ಇತರ ಉಪಕರಣಗಳನ್ನು ಬಳಸುತ್ತಿದ್ದರೆ, ಈ ಸಾಧನವನ್ನು ಬಳಸಿಕೊಂಡು ನೀವು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. ವಿದ್ಯುತ್ ಬಳಕೆಗೆ ಅನುಗುಣವಾಗಿ ವಿವಿಧ ರೀತಿಯ ಸಾಧನಗಳು ಲಭ್ಯವಿದೆ. 


MD Proelectra ಪವರ್ ಸೇವರ್- ಭಾರತದಲ್ಲಿ ವಿದ್ಯುತ್ ಉಳಿತಾಯ ಸಾಧನ ಬೆಲೆ:-
MD Proelektra ಪವರ್ ಸೇವರ್ ವಿದ್ಯುತ್ ಉಳಿತಾಯ ಸಾಧನದ ಬೆಲೆ 2,200 ರೂ. ಆದರೆ ಅಮೇಜಾನ್ನಲ್ಲಿ 799 ರೂ.ಗೆ ಲಭ್ಯವಿದೆ. ಸಾಧನದ ಮೇಲೆ ಶೇಕಡಾ 64 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ, ನಿಮ್ಮ ವಿದ್ಯುತ್ ಬಿಲ್‌ನ ಟೆನ್ಷನ್ 700 ರೂಪಾಯಿಗಳಲ್ಲಿ ಕೊನೆಗೊಳ್ಳುತ್ತದೆ. 


ಇದನ್ನೂ ಓದಿ- Zero Electricity Bill: ಈ ಉಪಾಯ ಅನುಸರಿಸಿದರೆ ಎಸಿ, ಕೂಲರ್ ಬಳಸಿದರೂ ವಿದ್ಯುತ್ ಬಿಲ್ ಬರುತ್ತೆ ಶೂನ್ಯ


ಗಮನಾರ್ಹ ಸಂಗತಿ ಎಂದರೆ, ಇದು ತುಂಬಾ ಕಾಂಪ್ಯಾಕ್ಟ್ ಸಾಧನವಾಗಿದೆ. ಇದನ್ನು ಸುಲಭವಾಗಿ ಸ್ಥಾಪಿಸಬಹುದು. ಇದನ್ನು ಮನೆಯ ಯಾವುದೇ ಸಾಕೆಟ್‌ನಲ್ಲಿ ಸ್ಥಾಪಿಸಬಹುದು. ಅದರ ನಂತರ ಸಾಧನದಿಂದ ವಿದ್ಯುತ್ ಬಳಕೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.