Twitter CEO : ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರು ಕಳೆದ ವರ್ಷ 44 ಶತಕೋಟಿ ಡಾಲರ್‌ಗೆ ಟ್ವೀಟರ್‌ನ್ನು ಖರೀದಿಸಿದ್ದರು. ಅವರು ಅದನ್ನು ಖರೀದಿಸಿದ ನಂತರ ಟ್ವೀಟರ್‌ ಬಳಕೆದಾರರಿಗೆ ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದರು. ಕೆಲವು ದಿನಗಳ ಹಿಂದೆ ಎಲಾನ್‌ ಮಸ್ಕ್‌ ಅವರು ಎಲ್ಲಾ ಬ್ಲೂ ಟಿಕ್‌ ಚೆಂದಾದರರಿಗೆ ಶಾಕ್‌ ನೀಡಿದ್ದರು.


COMMERCIAL BREAK
SCROLL TO CONTINUE READING

 ಜನಪ್ರಿಯ ನಟ ನಟಿಯರು, ರಾಜಕೀಯ ಮುಖಂಡರು ಎಲ್ಲರ ಖಾತೆಯ ಬ್ಲೂಟಿಕ್‌ನ್ನು ಹಿಂತೆಗೆದುಕೊಂಡಿದ್ದರು, ಏಕೆಂದರೆ ಬ್ಲೂಟಿಕ್‌ನ್ನು ಬಯಸುವವರು ವಾರ್ಷಿಕವಾಗಿ ಇಂತಿಷ್ಟು ಎಂದು ಟ್ವೀಟರ್‌ ಕಂಪನಿಗೆ ಹಣ ಪಾವತಿಸಬೇಕು ಎಂದು. ಇದನ್ನು ಪಾಲಿಸಿದವರೆಲ್ಲರ ಖಾತೆಯ ಬ್ಲೂಟಿಕ್‌ನ್ನು ಮರು ನೀಡಲಾಗಿತ್ತು. ಹೀಗೆ ಎಲಾನ್‌ ಮಸ್ಕ್‌ ಅವರು ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದ್ದರು.


ಇದನ್ನೂ ಓದಿ-ಇಮ್ರಾನ್ ಖಾನ್ ಬಂಧನ: ಅಲ್ - ಖಾದಿರ್ ಟ್ರಸ್ಟ್ ಪ್ರಕರಣ ನಡೆದು ಬಂದ ಹಾದಿ


ಎಲಾನ್‌ ಮಸ್ಕ್‌ ಅವರು ಕೆಲವು ದಿನಗಳ ಹಿಂದೆ ತಾವು ಟ್ವೀಟರ್‌ಗೆ ಹೊಸ ಸಿಇಒವನ್ನು ನೇಮಖ ಮಾಡುತ್ತೇನೆ ಎಂದು ಹೇಳಿದ್ದರು. ಇಧಿಗ ಅವರು ಟ್ವೀಟರ್‌ನ ಹೊಸ ಸಿಇಒ ನೇಮಖವಾಗಿರುವುದನ್ನು ಬಹಿರಂಗ ಪಡಿಸಿದ್ದಾರೆ. ಈ ವಿಚಾರವಾಗಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡ ಅವರು "ಇನ್ನು 6 ವಾರಗಳಲ್ಲಿ ಟ್ವೀಟರ್‌ನಲ್ಲಿ ಆಕೆ ಸಿಇಒ ಸ್ಥಾನವನ್ನು ಅಲಂಕರಿಸಲಿದ್ದಾರೆ. ಆ ನಂತರ ನನ್ನ ಪದವಿಯು ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಸಿಟಿಒ ಆಗಿ ಮುಂದುವರೆಯಲಿದೆ" ಎಂದು ತಿಳಿಸಿದ್ದಾರೆ.


ಟ್ವಿಟ್‌ ಮಾಡಿರುವ ಅವರು ಆ ಸಿಇಒ ಮಹಿಳೆಯ ಹೆಸರನ್ನು ಬಹಿರಂಗಪಡಿಸಿಲ್ಲ, ಆದರೆ ಆಕೆ ಯುನಿವರ್ಸಲ್‌ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೋ ಎಂದು ಸುದ್ದಿ ಮಾದ್ಯಮದ ಮೂಲಗಳು ವರದಿ ಮಾಡಿವೆ. 


ಇದನ್ನೂ ಓದಿ-RPC Singh Joins BJP: ಕೇಂದ್ರ ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಬಿಜೆಪಿಗೆ ಸೇರ್ಪಡೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.