Elon Musk : ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ : ಎಲೋನ್ ಮಸ್ಕ್ ಮಹತ್ವದ ಟ್ವೀಟ್
ಅಮೇರಿಕನ್ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಆಮದು ಮಾಡಿದ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಲು ಬಹಳ ಸಮಯದಿಂದ ಒತ್ತಾಯಿಸಲಾಗುತ್ತಿದೆ.
Elon Musk On Tesla India : ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕವನ್ನ ಕಂಪನಿ ತೆರೆಯಲಿದೆ ಎಂದು ಬಹಳ ದಿನಗಳಿಂದ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲೋನ್ ಮಸ್ಕ್ ಸ್ಪಷ್ಟನೆ ನೀಡಿದ್ದಾರೆ.
ಟ್ವಿಟ್ಟರ್ ಬಳಕೆದಾರನೊಬ್ಬ ಮೇ 27 ರಂದು, ಎಲೋನ್ ಮಸ್ಕ್ ಅವರಿಗೆ, 'ಟೆಸ್ಲಾ ಬಗ್ಗೆ ಏನು? ಭವಿಷ್ಯದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನ ಭಾರತದಲ್ಲಿ ತಯಾರಿಸುತ್ತಿದೆಯೇ' ಎಂದು ಪ್ರಶ್ನಿಸಿದ್ದರು. ಇದಕ್ಕೆ ಎಲೋನ್ ಉತ್ತರಿಸಿದ್ದು, ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಹೀಗಾದ್ರೆ, ಮುಂದಿನ ದಿನಗಳಲ್ಲಿ ಸರ್ಕಾರ ಒಂದು ವೇಳೆ ಅನುಮತಿ ನೀಡಿದರೆ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಭಾರತದ ರಸ್ತೆಗಳಲ್ಲಿ ಓಡಾಡಲಿವೆ.
New Feature In Two Wheelers - ಇನ್ಮುಂದೆ ದ್ವಿಚಕ್ರ ವಾಹನಗಳಲ್ಲಿಯೂ ಕೂಡ 'ಟೈಯರ್ ಮಾನಿಟರಿಂಗ್ ಸಿಸ್ಟಮ್' ಅಳವಡಿಸಬಹುದು
ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ?
ಅಮೇರಿಕನ್ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಆಮದು ಮಾಡಿದ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಲು ಬಹಳ ಸಮಯದಿಂದ ಒತ್ತಾಯಿಸಲಾಗುತ್ತಿದೆ, ಈ ಬಗ್ಗೆ ಕಂಪನಿಯು ಭಾರತದಲ್ಲಿ ವಿಧಿಸಲಾದ ಅಬಕಾರಿ ಸುಂಕವು ವಿಶ್ವದಲ್ಲೇ ಅತಿ ಹೆಚ್ಚು ಎಂದು ಉಲ್ಲೇಖಿಸಿದೆ. ಈ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರವು ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಗೆ ಹೇಳಿದೆ. ಟೆಸ್ಲಾ ಮತ್ತು ಅಂತಹ ಇತರ ಕಂಪನಿಗಳ ಬೇಡಿಕೆಯನ್ನು ಸರ್ಕಾರವು ಸ್ಪಷ್ಟವಾಗಿ ಹೇಳಿದೆ, ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಸುಧಾರಿಸಲು ಹೂಡಿಕೆ ಮಾಡಿ ಎಂದು ಹೇಳಿದೆ.
ಚೀನಾ ಮತ್ತು ಅಮೆರಿಕದಿಂದ ಕಾರುಗಳ ಆಮದು
ಟೆಸ್ಲಾ ಪ್ರಸ್ತುತ ಭಾರತದಲ್ಲಿನ ತನ್ನ ಸಾಗರೋತ್ತರ ಮಾರ್ಗದ ಮೂಲಕ ಟೆಸ್ಲಾ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ, ಗ್ರಾಹಕರ ವ್ಯಾಪ್ತಿಯನ್ನು ವಿಸ್ತರಿಸಲು ನೋಡುತ್ತಿದೆ, ಇದಕ್ಕಾಗಿ ಕಂಪನಿಯು ಚೀನಾ ಮತ್ತು ಅಮೆರಿಕದ ಉತ್ಪಾದನಾ ಘಟಕಗಳ ತಯಾರಿಸಿದ ವಾಹನಗಳನ್ನು ಆಮದು ಮಾಡಿಕೊಳ್ಳುತ್ತದೆ. ಇಲ್ಲಿ ಉತ್ಪಾದನಾ ಘಟಕವನ್ನು ತೆರೆಯುವ ಬದಲು, ಆಮದು ತೆರಿಗೆಯನ್ನು ಕಡಿಮೆ ಮಾಡಲು ಎಲೋನ್ ಮಸ್ಕ್ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ವಿಷಯದ ಬಗ್ಗೆ, ಭಾರತದಲ್ಲಿನ ವಿರೋಧವು ಸರ್ಕಾರದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಮತ್ತು ಅಂತಹ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಭಾರತದಲ್ಲಿ ಹೂಡಿಕೆ ಮತ್ತು ಉತ್ಪಾದನೆಯಲ್ಲಿ ಕುಸಿತಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : Electricity: ಮತ್ತೆ ಮತ್ತೆ ಪವರ್ ಕಟ್ ಆಗ್ತೀದ್ಯಾ? ಈ ಕೆಲಸ ಮಾಡಿ ಕರೆಂಟ್ ಇಲ್ಲದೆಯೂ ಓಡುತ್ತೆ ಎಸಿ-ಕೂಲರ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.