X New Update: ಎಲೋನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್ X (ಟ್ವಿಟರ್) ಅನ್ನು ಖರೀದಿಸಿದಾಗಿನಿಂದ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಆದರೆ, ಅವರ ಬದಲಾವಣೆಗಳ ಹಂತವು ಇಲ್ಲಿಗೆ ನಿಂತಿಲ್ಲ. ಶೀಘ್ರದಲ್ಲೇ ಎಲೋನ್ ಮಸ್ಕ್ ಸ್ಮಾರ್ಟ್ ಟಿವಿಗಾಗಿ X (ಟ್ವಿಟರ್) ನ ಅಪ್ಲಿಕೇಶನ್ ಆವೃತ್ತಿಯನ್ನು ತರಲಿದ್ದಾರೆ. ಸೋರಿಕೆಯಾದ ಈ ಮಾಹಿತಿಯನ್ನು ಸ್ವತಃ ಎಲೋನ್ ಮಸ್ಕ್ ನೀಡಿದ್ದಾರೆ. ಈ ಹೊಸ ನವೀಕರಣದ ನಂತರ, ಶೀಘ್ರದಲ್ಲೇ ಬಳಕೆದಾರರು ತಮ್ಮ ಸ್ಮಾರ್ಟ್ ಟಿವಿಯಲ್ಲಿ ನೇರವಾಗಿ ಎಕ್ಸ್ ಪ್ಲಾಟ್‌ಫಾರ್ಮ್‌ನ ಲಾಂಗ್ ವೀಡಿಯೊಗಳನ್ನು ಸ್ಟ್ರೀಮ್ (X TV Application) ಮಾಡಲು ಸಾಧ್ಯವಾಗಲಿದೆ. ಮಸ್ಕ್ ಅವರ ಈ ಹೊಸ ಹೆಜ್ಜೆಯು ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ಗೆ (YouTube) ಕಠಿಣ ಪೈಪೋಟಿ ನೀಡಬಹುದು ಎಂದು ನಂಬಲಾಗಿದೆ. ಈ ಕುರಿತಾದ ಸಂಪೂರ್ಣ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ, (Business News In Kannada)


COMMERCIAL BREAK
SCROLL TO CONTINUE READING

ಇತ್ತೀಚೆಗೆ ಸೋರಿಕೆಯಾದ ಕೆಲ ವರದಿಗಳ ಪ್ರಕಾರ, ಶೀಘ್ರದಲ್ಲೇ ಬಳಕೆದಾರರು ತಮ್ಮ ಸ್ಮಾರ್ಟ್ ಟಿವಿಗಳಲ್ಲಿ X (ಟ್ವಿಟರ್) ನ ಲಾಂಗ್-ಫಾರ್ಮ್ಯಾಟ್ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗಲಿದೆ ಎನ್ನಲಾಗಿದೆ.  ಇದಕ್ಕಾಗಿ, ಕಂಪನಿಯು ಶೀಘ್ರದಲ್ಲೇ ಸ್ಮಾರ್ಟ್ ಟಿವಿ ಮೀಸಲಾದ ಎಕ್ಸ್ (ಟ್ವಿಟರ್) ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ.


ಎಲೋನ್ ಮಸ್ಕ್ ಅವರು DogeDesigner ನ ಈ ಸೋರಿಕೆಗಳ ಕುರಿತು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಶೀಘ್ರದಲ್ಲೇ ನೀವು ನಿಮ್ಮ ಸ್ಮಾರ್ಟ್ ಟಿವಿಯಲ್ಲಿ X (ಟ್ವಿಟರ್) ನ ಲಾಂಗ್ ಫಾರ್ಮ್ಯಾಟ್ ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಟಿಪ್‌ಸ್ಟರ್ ಸೋರಿಕೆಯಲ್ಲಿ ತಿಳಿಸಿದಾಗ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್ (Elon Musk) ಅವರು 'ಕಮಿಂಗ್ ಸೂನ್' ಎಂದು ಬರೆದಿದ್ದಾರೆ.


ಎಲೋನ್ ಮಸ್ಕ್ ಅವರ ಈ ಉತ್ತರವು ಶೀಘ್ರದಲ್ಲೇ ಎಕ್ಸ್ (ಟ್ವಿಟರ್) ಪ್ಲಾಟ್‌ಫಾರ್ಮ್ ತನ್ನ ಟಿವಿಗಾಗಿ ಮೀಸಲಾದ ಅಪ್ಲಿಕೇಶನ್ (X application for smart tv) ಅನ್ನು ತರಲಿದೆ ಎಂಬುದನ್ನು  ಖಚಿತಪಡಿಸುತ್ತದೆ. ಈ ಅಪ್ಲಿಕೇಶನ್ ಮೂಲಕ ನಾವು YouTube ನಂತೆಯೇ ಟಿವಿಯಲ್ಲಿ X (ಟ್ವಿಟರ್) ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ, ಈ ಅಪ್ಲಿಕೇಶನ್ ಅನ್ನು ಯಾವಾಗ ಆರಂಭಿಸಲಾಗುತ್ತಿದೆ ಎಂಬುದರ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


ಇದನ್ನೂ ಓದಿ-WhatsApp New Feature: ಶೀಘ್ರದಲ್ಲೇ ವಾಟ್ಸ್ ಆಪ್ ನಲ್ಲಿ ಹೊಸ ವೈಶಿಷ್ಯ ಸೇರ್ಪಡೆ, ನಿಮ್ಮ ಚಾಟ್ ಎಷ್ಟು ಸುರಕ್ಷಿತ ಹೇಳಿಕೊಡಲಿದೆ!


ಮತ್ತೊಂದು ಸೋರಿಕೆ ವರದಿಯಲ್ಲಿ, ಕಂಪನಿಯು ಸ್ಯಾಮ್‌ಸಂಗ್ ಮತ್ತು ಅಮೆಜಾನ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್ ಟಿವಿಗಳಲ್ಲಿ ಎಕ್ಸ್ (ಟ್ವಿಟರ್) ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದೂ ಕೂಡ ಹೇಳಲಾಗುತ್ತಿದೆ. 


ಇದನ್ನೂ ಓದಿ-Bajaj CNG Bike: ಶೀಘ್ರದಲ್ಲೇ ಮಾರುಕಟ್ಟೆಗಿಳಿಯಲಿದೆ ವಿಶ್ವದ ಮೊಟ್ಟಮೊದಲ CNG Bike


ಶೀಘ್ರದಲ್ಲೇ X ನಲ್ಲಿ ದೀರ್ಘ ಲೇಖನಗಳನ್ನು ಬರೆಯಲು ಸಾಧ್ಯವಾಗಲಿದೆ
ಎಲೋನ್ ಮಸ್ಕ್ ಇತ್ತೀಚೆಗೆ ಎಕ್ಸ್ (twitter) ಗಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದ್ದಾರೆ. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ದೀರ್ಘ ಸ್ವರೂಪದ ಕಂಟೆಂಟ್  ಬರೆಯಲು ಸಾಧ್ಯವಾಗಲಿದೆ.  ಆದರೆ ಅವುಗಳನ್ನು ವಿನ್ಯಾಸಗೊಳಿಸಲು ಇತರ ಸಾಧನಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಬಳಕೆದಾರರು ತಮ್ಮ ವಿಷಯದಲ್ಲಿ ಬೋಲ್ಡ್, ಇಟಾಲಿಕ್, ಸ್ಟ್ರೈಕ್‌ಥ್ರೂ, ಬುಲೆಟ್ ಪಾಯಿಂಟ್‌ಗಳು ಮತ್ತು ಸಂಖ್ಯೆಯ ಪಟ್ಟಿಗಳನ್ನು ಒಳಗೊಂಡಂತೆ ಅನೇಕ ಮೂಲಭೂತ ಫಾರ್ಮ್ಯಾಟಿಂಗ್ ಆಯ್ಕೆಗಳನ್ನು ಬಳಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ