WhastsApp ಶೀಘ್ರದಲ್ಲೇ ಜಾರಿಗೆ ತರಲಿದೆ ಹೊಸ ಅವತಾರ್ ಪ್ರೈವೆಸಿ ವೈಶಿಷ್ಟ್ಯ, ಹೇಗೆ ಬಳಸಬೇಕು, ಲಾಭ ಏನು?

WhatsApp New Featrue: ವಿಶ್ವದ ಖ್ಯಾತ ತ್ವರಿತ ಸಂದೇಶ ರವಾನಿಸುವ ಆಪ್ ಆಗಿರುವ ವಾಟ್ಸ್ ಅಪ್ಪ್ ಗೌಪ್ಯತಾ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ಗೌಪ್ಯತಾ ವೈಶಿಷ್ಟ್ಯದ ಸಹಾಯದಿಂದ, ಸ್ಟಿಕ್ಕರ್‌ಗಳಲ್ಲಿ ನಿಮ್ಮ ಅವತಾರ್ ಅನ್ನು ಯಾರು ನೋಡಬಹುದು ಎಂಬುದನ್ನು ನೀವು ಆಯ್ಕೆ ಮಾಡಲು ಸಾಧ್ಯವಾಗಲಿದೆ. ಬನ್ನಿ ಈ ವೈಶಿಷ್ಟ್ಯದ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ (Technology News In Kannada).  

Written by - Nitin Tabib | Last Updated : Mar 9, 2024, 04:38 PM IST
  • ಈ ವೈಶಿಷ್ಟ್ಯದೊಂದಿಗೆ ಸ್ಟಿಕ್ಕರ್‌ಗಳಲ್ಲಿ ನಿಮ್ಮ ಅವತಾರವನ್ನು ಯಾವ ಜನರೊಂದಿಗೆ ನೀವು ಹಂಚಿಕೊಳ್ಳಬಹುದು ಎಂಬುದನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗಲಿದೆ.
  • ಇದರೊಂದಿಗೆ, ನಿಮ್ಮ ಫೋಟೋ ನೀವು ಇಚ್ಛೆ ಪಡುವ ಜನರಿಗೆ ಮಾತ್ರ ಹೋಗುತ್ತದೆ.
  • ಇದು ದುರುಪಯೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಗೌಪ್ಯತೆಯನ್ನು ಕಾಪಾಡುತ್ತದೆ.
WhastsApp ಶೀಘ್ರದಲ್ಲೇ ಜಾರಿಗೆ ತರಲಿದೆ ಹೊಸ ಅವತಾರ್ ಪ್ರೈವೆಸಿ ವೈಶಿಷ್ಟ್ಯ, ಹೇಗೆ ಬಳಸಬೇಕು, ಲಾಭ ಏನು? title=

WhatsApp Latest Update: ವಿಶ್ವದ ಜನಪ್ರೇಯ ತ್ವರಿತ ಸಂದೇಶ ರವಾನಿಸುವ ಆಪ್ ಆಗಿರುವ WhatsApp ಕೋಟ್ಯಾಂತರ ಜನರು ಬಳಸುತ್ತಿದ್ದಾರೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಅವರ ವಾಟ್ಸ್ ಆಪ್ ಬಳಕೆಯ ಅನುಭವವನ್ನು ಮತ್ತಷ್ಟು ಸುಧಾರಿಸಲು ಕಾಲಕಾಲಕ್ಕೆ ಉತ್ತಮ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಲೆ ಇರುತ್ತದೆ, ಅವು ಜನರಿಗೆ ತುಂಬಾ ಉಪಯುಕ್ತವಾಗಿರುತ್ತವೆ. (Technology News In Kannada)

WhatsApp ಕಳೆದ ವರ್ಷ ತನ್ನ ಬಳಕೆದಾರರಿಗೆ ಅವತಾರ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಇವುಗಳು ಬಳಕೆದಾರರ ಕಾರ್ಟೂನ್ ಆವೃತ್ತಿಗಳಾಗಿದ್ದು, ಅವುಗಳನ್ನು ಬಳಕೆದಾರರೆ ರಚಿಸಿಕೊಳ್ಳಬಹುದು ಮತ್ತು ತಮ್ಮ ಲುಕ್ ಅನ್ನು ಬದಲಾಯಿಸಿಕೊಳ್ಳಬಹುದು. ಆಪಲ್ ನ ಮೆಮೋಜೀ  ಅಥವಾ ಸ್ನ್ಯಾಪ್ ಚಾಟ್ ನ ಬಿಟ್ಮೋಜಿ ರೀತಿಯಲ್ಲಿ ಈ ಅವತಾರಗಳನ್ನು ಬಳಸಿಕೊಂಡು ನೀವು ಚಾಟ್‌ನಲ್ಲಿ ಮೋಜಿನ ರೀತಿಯಲ್ಲಿ ನಿಮ್ಮ ಲುಕ್ ಅನ್ನು ನೀವೇ ಬದಲಾಯಿಸಿಕೊಳ್ಳಬಹುದು.

WhatsApp ಅವತಾರ್ ನಲ್ಲಿ ಹೊಸ ಗೌಪ್ಯತಾ ವೈಶಿಷ್ಟ್ಯವನ್ನು ಜಾರಿಗೆ ತರುತ್ತಿದೆ
ಪ್ರಸ್ತುತ  ವಾಟ್ಸಾಪ್ ಹೊಸ ಪ್ರೈವೆಸಿ ಫೀಚರ್ (WhatsApp Avatar Privacy Feature) ಮೇಲೆ ಕೆಲಸ ಮಾಡುತ್ತಿದ್ದು, ಈ ಗೌಪ್ಯತೆ ವೈಶಿಷ್ಟ್ಯದ ಸಹಾಯದಿಂದ, ಸ್ಟಿಕ್ಕರ್‌ಗಳಲ್ಲಿನ ನಿಮ್ಮ ಅವತಾರ್ (WhatsApp Avatar) ಅನ್ನು ಯಾರು ನೋಡಬಹುದು ಅಥವಾ ಬಳಸಬಹುದು ಎಂಬುದನ್ನು ನಿಮಗೆ ಆಯ್ಕೆಮಾಡಲು ಸಾಧ್ಯವಾಗಲಿದೆ. WABetaInfo ವರದಿಯ ಪ್ರಕಾರ, ಪ್ರಸ್ತುತ ಈ ವೈಶಿಷ್ಟ್ಯವು ಅಂಡ್ರಾಯಿಡ್  ಬೀಟಾ ಪರೀಕ್ಷಕರಿಗೆ (Android Beta Users) ಮಾತ್ರ ಲಭ್ಯವಿದೆ.

ಬಳಕೆದಾರರು ಒಟ್ಟು ಮೂರು ಆಯ್ಕೆಗಳನ್ನು ಪಡೆಯಲಿದ್ದಾರೆ (whatsapp new avatar privacy feature )
ಹೊಸ ವೈಶಿಷ್ಟ್ಯದಲ್ಲಿ (WhatsApp Latest Feature) ಬಳಕೆದಾರರಿಗೆ ಒಟ್ಟು ಮೂರು ಆಯ್ಕೆಗಳು ಲಾಭ ಇರಲಿವೆ.  "ನನ್ನ ಸಂಪರ್ಕಗಳು", "ಆಯ್ದ ಸಂಪರ್ಕಗಳು", ಅಥವಾ "ಯಾರೂ ಇಲ್ಲ". ಬಳಕೆದಾರರು ಮತ್ತು ಅವರ ಸಂಪರ್ಕಗಳಲ್ಲಿ ಒಬ್ಬರು ಈ ವೈಶಿಷ್ಟ್ಯವನ್ನು ಆನ್ ಮಾಡಿದರೆ, ನಂತರ ಇಬ್ಬರ ಅವತಾರಗಳನ್ನು ಹೊಂದಿರುವ ಸ್ಟಿಕ್ಕರ್‌ಗಳು ಚಾಟ್‌ನಲ್ಲಿ ಗೋಚರಿಸುತ್ತವೆ. ಇದು ಸಾಕಷ್ಟು ಸುಲಭ ಮತ್ತು ಮೊಜಿನಿಂದ ಕೂಡಿರುತ್ತದೆ.

ಇದನ್ನೂ ಓದಿ-Translation Tips: ಗೂಗಲ್ ಲೆನ್ಸ್ ಬಳಸಿ ರಿಯಲ್ ಟೈಮ್ ಪಠ್ಯವನ್ನು ಹೇಗೆ ಅನುವಾದಿಸಬೇಕು?

ಅವತಾರ್ ಅನ್ನು ವಿಶ್ವಾಸಾರ್ಹ ಸಂಪರ್ಕಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು
ಈ ವೈಶಿಷ್ಟ್ಯದೊಂದಿಗೆ ಸ್ಟಿಕ್ಕರ್‌ಗಳಲ್ಲಿ ನಿಮ್ಮ ಅವತಾರವನ್ನು ಯಾವ ಜನರೊಂದಿಗೆ ನೀವು ಹಂಚಿಕೊಳ್ಳಬಹುದು ಎಂಬುದನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗಲಿದೆ. ಇದರೊಂದಿಗೆ, ನಿಮ್ಮ ಫೋಟೋ ನೀವು ಇಚ್ಛೆ ಪಡುವ ಜನರಿಗೆ ಮಾತ್ರ ಹೋಗುತ್ತದೆ. ಇದು ದುರುಪಯೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಗೌಪ್ಯತೆಯನ್ನು ಕಾಪಾಡುತ್ತದೆ.

ಇದನ್ನೂ ಓದಿ-Facebook Insta Outage: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಫೆಸ್ಬುಕ್, ಇನ್ಸ್ಟಾ, ಖಾತೆ ತನ್ನಷ್ಟಕ್ಕೆ ತಾನೇ ಲಾಗ್ಔಟ್ ಆಗುತ್ತಿವೆ

ಇತ್ತೀಚೆಗಷ್ಟೇ ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸಾಪ್ "ಸರ್ಚ್ ಬೈ ಡೇಟ್" ವೈಶಿಷ್ಟ್ಯವನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಈ ವೈಶಿಷ್ಟ್ಯವು ಈಗಾಗಲೇ ಐಒಎಸ್, ಮ್ಯಾಕ್ ಡೆಸ್ಕ್‌ಟಾಪ್ ಮತ್ತು WhatsApp ವೆಬ್‌ನಲ್ಲಿ ಮಾತ್ರ ಲಭ್ಯವಿದೆ. ಈ ವೈಶಿಷ್ಟ್ಯದೊಂದಿಗೆ, ನಿರ್ದಿಷ್ಟ ದಿನಾಂಕದಂದು ಕಳುಹಿಸಲಾದ ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ನೀವು ಸುಲಭವಾಗಿ ಹುಡುಕಾಟ ನಡೆಸಬಹುದು. ಇದಕ್ಕಾಗಿ ನೀವು ಸಂದೇಶವನ್ನು ಹುಡುಕಲು ಬಯಸುವ ದಿನದ ದಿನಾಂಕವನ್ನು ನಮೂದಿಸಬೇಕು. ಇದರ ಬಳಿಕ, ಆ ದಿನದ ಎಲ್ಲಾ ಚಾಟ್‌ಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News