Elon Musk On Indian Food: ಎಲೋನ್ ಮಸ್ಕ್ ಯಾವಾಗಲೂ ತಮ್ಮ ಸ್ವಾರಸ್ಯಕರ ಪೋಸ್ಟ್‌ ಹಾಗೂ ಕಾಮೆಂಟ್ ಗಳಿಂದ ಟ್ವಿಟರ್ ಬಳಕೆದಾರರನ್ನು ಪ್ರೇರೇಪಿಸುತ್ತಾರೆ, ಇತ್ತೀಚೆಗೆ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ ಭಾರತೀಯ ಆಹಾರದ ಚಿತ್ರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಬಟರ್ ಚಿಕನ್ ಮತ್ತು ನಾನ್ ಚಿತ್ರವನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರರೊಬ್ಬರು, "ನಾನು ಬೇಸಿಕ್ b***h ಭಾರತೀಯ ಆಹಾರವನ್ನು ಪ್ರೀತಿಸುತ್ತೇನೆ, ಅದು ತುಂಬಾ ಚೆನ್ನಾಗಿರುತ್ತದೆ" ಎಂದು ಬರೆದಿದ್ದಾರೆ. ಇದಕ್ಕೆ ಸ್ಪೇಸ್‌ಎಕ್ಸ್‌ನ ಬಿಲಿಯನೇರ್ ಸಿಇಒ ಮತ್ತು ಪ್ರಸ್ತುತ ಟ್ವಿಟರ್ ಸಿಇಒ "ನಿಜ" ಎಂದು ಉತ್ತರಿಸಿದ್ದಾರೆ ಮತ್ತು ಈ ಉತ್ತರ ಬಂದ ನಂತರ ಟ್ವಿಟರ್‌ನಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ.


COMMERCIAL BREAK
SCROLL TO CONTINUE READING

ಬಟರ್ ಚಿಕನ್, ನಾನ್, ರೈಸ್, ಶಾಂಪೇನ್, ಬಿಯರ್ ಮತ್ತು ಒಂದು ಲೋಟ ನೀರನ್ನು ಒಳಗೊಂಡಿರುವ ಬಾಯಲ್ಲಿ ನೀರೂರಿಸುವ ಡಿಷ್  ಪೋಸ್ಟ್ ಗೆ ಸಾವಿರಾರು ಲೈಕ್‌ಗಳು ಮತ್ತು ರೀಟ್ವೀಟ್‌ ಗಳು ಬಂದಿವೆ. ಅಷ್ಟೇ ಅಲ್ಲ ಅದನ್ನು 3.5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಏತನ್ಮಧ್ಯೆ, ಮಸ್ಕ್ ಅವರ ಪ್ರತಿಕ್ರಿಯೆಯನ್ನು 3 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಸಾವಿರಾರು ಬಳಕೆದಾರರು ನಿರಂತರವಾಗಿ ರಿಟ್ವೀಟ್ ಮಾಡುತ್ತಿದ್ದಾರೆ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ-Rummy: 'ರಮ್ಮಿ ಆಡುವುದು ಜೂಜಾಟವಲ್ಲ': ಕರ್ನಾಟಕ ಹೈಕೋರ್ಟ್


ಮಸ್ಕ್ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ, ಮತ್ತೊಬ್ಬ ಬಳಕೆದಾರರು ಜಮ್ಮುವಿನಿಂದ ರಾಜ್ಮಾ ಅಕ್ಕಿಯನ್ನು ಸೂಚಿಸಿದರೆ, ಮತ್ತೊಬ್ಬರು ಚಿತ್ರದಲ್ಲಿ ಆಲ್ಕೋಹಾಲ್ ಇಲ್ಲದಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ, ಭಾರತೀಯರು ಸಾಮಾನ್ಯವಾಗಿ ತಮ್ಮ ಊಟದೊಂದಿಗೆ ನೀರು, ಮಜ್ಜಿಗೆ ಅಥವಾ ಲಸ್ಸಿಯನ್ನು ಸೇವಿಸುತ್ತಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-Google Facts: ನೀವೂ ಗೂಗಲ್ ಬಳಸುತ್ತೀರಾ? ಹಾಗಾದರೆ ಗೂಗಲ್ ಕುರಿತಾದ ಈ ಸಂಗತಿಗಳು ನಿಮಗೆ ಗೊತ್ತಿರಬೇಕಲ್ಲ!


ಭಾರತೀಯ ಆಹಾರದ ಹೊಗಳಿಕೆಯ ಅರ್ಥವೇನು?
ಎಲೋನ್ ಮಸ್ಕ್ ಭಾರತದಲ್ಲಿ ತಮ್ಮ ಟೆಸ್ಲಾ ಕಾರನ್ನು ಬಿಡುಗಡೆ ಮಾಡಲು ಸಾಕಷ್ಟು ಸಮಯದಿಂದ ತಯಾರಿ ನಡೆಸುತ್ತಿದ್ದಾರೆ. ಆದರೆ ಕೆಲವು ಕಾರಣಗಳಿಂದ ಅದು ಅವರಿಗೆ ಸಾಧ್ಯವಾಗುತ್ತಿಲ್ಲ. ಭಾರತೀಯ ಬಳಕೆದಾರರಲ್ಲಿ ತನ್ನ ಹಿಡಿತ ಸಾಧಿಸಲು ಮಸ್ಕ್ ಈ ರೀತಿ ಮಾಡುತ್ತಿದ್ದಾರೆ ಎಂದು ಊಹಿಸಲಾಗಿದೆ. ಕಾರಣ ಏನೇ ಇರಲಿ, ಆದರೆ ಈ ಉತ್ತರದಿಂದಾಗಿ ಅವರು ಖಂಡಿತವಾಗಿಯೂ ಭಾರತೀಯ ಬಳಕೆದಾರರ ಗಮನವನ್ನು ಸೆಳೆದಿದ್ದಾರೆ. ಮಸ್ಕ್ ಕಾಮೆಂಟ್ ಮಾಡುತ್ತಿರುವ ರೀತಿ, ಭಾರತೀಯ ಬಳಕೆದಾರರಲ್ಲಿ ಅವರ ಜನಪ್ರಿಯತೆ ಖಂಡಿತವಾಗಿಯೂ ಹೆಚ್ಚಿಸಲಿದೆ ಮತ್ತು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಬಿಡುಗಡೆ ಮಾಡುವ ಮಾರ್ಗವನ್ನು ಅವರ ಪಾಲಿಗೆ ಸುಗಮಗೊಳಿಸಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ