ವೊಡಾಫೋನ್-ಐಡಿಯಾದ ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಎಲ್ಲವೂ ಅನ್ಲಿಮಿಟೆಡ್
Vi Recharge Plan: ವೊಡಾಫೋನ್-ಐಡಿಯಾದ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರಿಗೆ ಕರೆ ಮಾತ್ರವಲ್ಲ ಡೇಟಾ ಕೂಡ ಅನಿಯಮಿತವಾಗಿ ಲಭ್ಯವಿರಲಿದೆ. ಯಾವುದೀ ಯೋಜನೆ, ಇದರ ಪ್ರಯೋಜನಗಳೇನು ಎಂದು ತಿಳಿಯಿರಿ.
Vi Recharge Prepaid Plan: ವೊಡಾಫೋನ್-ಐಡಿಯಾ ಗ್ರಾಹಕರಿಗೆ ಗುಡ್ ನ್ಯೂಸ್ ಇದೆ. ವೊಡಾಫೋನ್-ಐಡಿಯಾದ ಈ ಪ್ರಿಪೇಯ್ಡ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ ನೀವು ಇಂಟರ್ನೆಟ್‌ಗಾಗಿ ಪರದಾಡುವ ಅಗತ್ಯವಿರುವುದಿಲ್ಲ. ವಾಸ್ತವವಾಗಿ, ಸಾಮಾನ್ಯ ರೀಚಾರ್ಜ್ ಯೋಜನೆಗಳಲ್ಲಿ ನಿತ್ಯ 1 ರಿಂದ 4 ಜಿಬಿವರೆಗೆ ಇಂಟರ್ನೆಟ್ ಲಭ್ಯವಿರುತ್ತದೆ. ಆದರೆ, ವೊಡಾಫೋನ್-ಐಡಿಯಾದ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಕರೆ ಮಾತ್ರವಲ್ಲ ಇಂಟರ್ನೆಟ್ ಕೂಡ ಅನ್ಲಿಮಿಟೆಡ್ ಆಗಿರಲಿದೆ.
ಯಾವುದೀ ಪ್ಲಾನ್, ಏನಿದರ ಪ್ರಯೋಜನಗಳು ಎಂದು ತಿಳಿಯೋಣ.
ವೊಡಾಫೋನ್-ಐಡಿಯಾದ ₹299 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್:
ವೊಡಾಫೋನ್-ಐಡಿಯಾ ಕಂಪನಿಯು ತನ್ನ ಗ್ರಾಹಕರಿಗಾಗಿ ಇಂಟರ್ನೆಟ್‌ನಿಂದ ಕರೆ ಮಾಡುವವರೆಗೆ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ಭರ್ಜರಿ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಅದುವೇ ಕೇವಲ 299 ರೂಪಾಯಿಗಳಲ್ಲಿ ನಿಮಗೆ ಈ ರಿಚಾರ್ಜ್ ಪ್ಲಾನ್ ಲಭ್ಯವಾಗಲಿದೆ.
ಇದನ್ನೂ ಓದಿ- ಮನೆಯಲ್ಲಿರುವ ಸ್ಮಾರ್ಟ್ ಟಿವಿ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆಯೇ? ತಕ್ಷಣ ಈ ಕೆಲಸ ಮಾಡಿ
ವೊಡಾಫೋನ್-ಐಡಿಯಾದ ₹299 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಪ್ರಯೋಜನಗಳು:
* ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ.
* ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಾಗಲಿದೆ.
* ಮಾತ್ರವಲ್ಲದೆ, ಈ ಯೋಜನೆಯೊಂದಿಗೆ, ನಿಮಗೆ ಪ್ರತಿದಿನ 1.5 GB ಇಂಟರ್ನೆಟ್ ಅನ್ನು ಸಹ ನೀಡಲಾಗುತ್ತದೆ. ಆದಾಗ್ಯೂ, ಇದೇ ಯೋಜನೆಯಲ್ಲಿ ನೀವು ಅನ್ಲಿಮಿಟೆಡ್ ಡೇಟಾ ಪ್ರಯೋಜನವನ್ನು ಸಹ ಪಡೆಯಬಹುದಾಗಿದೆ.
ಇದನ್ನೂ ಓದಿ- ಫುಲ್ ಚಾರ್ಜ್ನಲ್ಲಿ 7 ದಿನ ಬಾಳಿಕೆ ಬರುತ್ತಂತೆ ಈ Waterproof Smartphone
ವೊಡಾಫೋನ್-ಐಡಿಯಾದ ₹299 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನಲ್ಲಿ ಅನಿಯಮಿತ ಡೇಟಾ ಆಫರ್ ಕೂಡ ಲಭ್ಯವಿದೆ. ಆದರೆ, ಈ ಪ್ರಯೋಜನವೂ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 6 ಗಂಟೆವರೆಗೆ ಮಾತ್ರ ಲಭ್ಯವಾಗಲಿದೆ. ಈ ಸಮಯದಲ್ಲಿ ಹೆಚ್ಚಿನ ಡೇಟಾ ಬಳಸಲು ನೀವು ಪ್ರತ್ಯೇಕವಾಗಿ ಹಣ ಖರ್ಚು ಮಾಡುವ ಅಗತ್ಯವಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.