Textationship ಬಗ್ಗೆ ನಿಮಗೆಷ್ಟು ಗೊತ್ತು? ಬನ್ನಿ ತಿಳಿದುಕೊಳ್ಳೋಣ

New Relationship Textationship: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಿಳಿದೋ ತಿಳಿಯದೆಯೋ ಟೆಕ್ಸ್ಟೇಶನ್ ಶಿಪ್ ಗೆ ಬಲಿಯಾಗುತ್ತಿದ್ದಾರೆ. ಆದರೆ ಈ ಟೆಕ್ಸ್ಟೇಶನ್ ಶಿಪ್ ಅಂದರೆ ಏನು ಎಂಬುದು ನಿಮಗೆ ತಿಳಿದಿದೆಯಾ. ಇಲ್ಲ ಎಂದಾದಲ್ಲಿ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Mar 15, 2023, 05:54 PM IST
  • ಆಧುನಿಕ ಡೇಟಿಂಗ್ ಕುರಿತು ಹೇಳುವುದಾದರೆ,
  • ಸಂಬಂಧವು ಸಂದೇಶಗಳಲ್ಲಿ ಮಾತನಾಡುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು
  • ಅನೇಕ ಬಾರಿ ಯಾರೊಬ್ಬರ ಸಂಪೂರ್ಣ ಸಂಬಂಧದ ಆಧಾರವು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಸಂದೇಶ ವಿಭಾಗವಾಗುತ್ತದೆ.
Textationship ಬಗ್ಗೆ ನಿಮಗೆಷ್ಟು ಗೊತ್ತು? ಬನ್ನಿ ತಿಳಿದುಕೊಳ್ಳೋಣ title=
ಟೆಕ್ಸ್‌ಟೇಶನ್‌ಶಿಪ್ ಕುರಿತು ನಿಮಗೆಷ್ಟು ಗೊತ್ತು?

What Is Textationship: ಸಂಬಂಧಗಳು ಹಲವು ವಿಧಗಳಾಗಿರಬಹುದು ಮತ್ತು ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ವಿಭಿನ್ನ ಪದಗಳನ್ನು ಸಹ ಬಳಸಲಾಗುತ್ತದೆ. ಸೀರಿಯಸ್ ರಿಲೇಶನ್‌ಶಿಪ್, ಫ್ಲಿಂಗ್ ರಿಲೇಶನ್‌ಶಿಪ್, ಫ್ರೆಂಡ್ಸ್ ವಿಥ್ ಬೆನಿಫಿಟ್ಸ್, ಸಿಚುಯೇಶನ್‌ಶಿಪ್ ಇತ್ಯಾದಿಗಳು. ಏತನ್ಮಧ್ಯೆ, ಇದೀಗ ಹೊಸ ಟೆಕ್ಸ್ಟೇಶನ್ ಶಿಪ್ ಎಂಬ ಪದವೊಂದು ಈ ಪಟ್ಟಿಗೆ ಶಾಮೀಲಾಗಿದೆ. ಇದೊಂದು ರೀತಿಯ ಸಂಬಂಧವಾಗಿದ್ದು, ಇದರಲ್ಲಿ ಜೋಡಿಗಳು ತಿಳಿದೋ ಅಥವಾ ತಿಳಿಯದೆಯೋ ಪರಸ್ಪರ ಮಾತನಾಡಲು ಪ್ರಾರಂಭಿಸುತ್ತಾರೆ. ಆದರೆ,  ಟೆಕ್ಸ್ಟೇಶನ್ ಶಿಪ್ ಎಂದರೇನು? ಬನ್ನಿ ತಿಳಿದುಕೊಳ್ಳೋಣ.

ವಾಸ್ತವದಲ್ಲಿ, ಫ್ರೆಂಡ್ ಶಿಪ್, ಪ್ರಣಯ, ನಿಕಟತೆ  ಅಥವಾ ಲೈಂಗಿಕ ಸಂಬಂಧದಲ್ಲಿ ಪಠ್ಯ ಸಂದೇಶಗಳು ಸಂಭಾಷಣೆಯ ಮುಖ್ಯ ಮೂಲವಾಗಿರುತ್ತದೆ ಅದನ್ನೇ  ಟೆಕ್ಸ್ಟೇಶನ್ ಶಿಪ್ ಎಂದು ಕರೆಯಲಾಗುತ್ತದೆ. ಜನರು ತಮ್ಮ ಅನಿಸಿಕೆಗಳನ್ನು  ಅಥವಾ ಭಾವನೆಗಳನ್ನು ಯಾರ ಮುಂದೆಯೂ ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ ಸಂದೇಶ ರೂಪದಲ್ಲಿ ಅವುಗಳನ್ನು ಹಂಚಿಕೊಳ್ಳುವಲ್ಲಿ ಸಹಜತೆಯನ್ನು ಕಂಡುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ ...

ಇದನ್ನೂ ಓದಿ-Jio Big Dhamaka! ಮಾರುಕಟ್ಟೆಯನ್ನೆ ತಲ್ಲಣಗೊಳಿಸುವ ಜಬ್ಬರ್ದಸ್ತ್ ಫ್ಯಾಮಿಲಿ ರಿಚಾರ್ಜ್ ಯೋಜನೆ ಬಿಡುಗಡೆಗೊಳಿಸಿದ ಜಿಯೋ!

ಸಂದೇಶ ಕಳುಹಿಸುವುದು ಹೊಸ ಟ್ರೆಂಡ್ ಅಲ್ಲ
ಆಧುನಿಕ ಡೇಟಿಂಗ್ ಕುರಿತು ಹೇಳುವುದಾದರೆ, ಸಂಬಂಧವು ಸಂದೇಶಗಳಲ್ಲಿ ಮಾತನಾಡುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಅನೇಕ ಬಾರಿ ಯಾರೊಬ್ಬರ ಸಂಪೂರ್ಣ ಸಂಬಂಧದ ಆಧಾರವು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಸಂದೇಶ ವಿಭಾಗವಾಗುತ್ತದೆ. ಪ್ರೇಮವಿರಲಿ, ಜಗಳವಿರಲಿ ಇದೀಗ ಎಲ್ಲವೂ ಪಠ್ಯದ ಮೇಲೆಯೇ ನಡೆಯುತ್ತಿದೆ. ಇಂದಿನ ಕಾಲದಲ್ಲಿ ಟೆಕ್ಸ್‌ಟೇಶನ್‌ಶಿಪ್ ಹೆಚ್ಚು ಕಂಡುಬರುತ್ತದೆ, ಆದರೆ ವಾಸ್ತವದಲ್ಲಿ ಇದು ದೀರ್ಘ ಕಾಲದಿಂದ ನಡೆಯುತ್ತಿದೆ. ಆದರೆ, ಅದಕ್ಕೆ ಹೆಸರು ಬಂದಿರಲಿಲ್ಲ. ನಿಮ್ಮ ಮನಸ್ಸಿನಲ್ಲಿರುವುದನ್ನು ಪರಸ್ಪರರ ಮುಂದೆ ಹೇಳಲು ಸಾಧ್ಯವಾಗದಿದ್ದರೂ ಅದನ್ನು ಸಂದೇಶದಲ್ಲಿ ಹೇಳುವುದನ್ನು ಟೆಕ್ಸ್‌ಟೇಶನ್‌ಶಿಪ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ-BSNL ಅಂತ್ಯಂತ ಅಗ್ಗದ ಮತ್ತು ಬಂಬಾಟ್ ರಿಚಾರ್ಜ್ ಯೋಜನೆ, 65 ದಿನಗಳ ವ್ಯಾಲಿಡಿಟಿ, ಹಲವು ಪ್ರಯೋಜನಗಳು!

ನೀವು ಸಹ ಟೆಕ್ಸ್‌ಟೇಶನ್‌ಶಿಪ್ ಬಲಿಯಾಗಿದ್ದೀರಾ?
ಇತ್ತೀಚಿನ ದಿನಗಳಲ್ಲಿ ಅನೇಕ ಡೇಟಿಂಗ್ ಪದಗಳನ್ನು ಬಳಸಲಾಗುತ್ತಿದೆ. ಈ ಡೇಟಿಂಗ್ ನಿಯಮಗಳನ್ನು ತಿಳಿದ ನಂತರ, ಒಬ್ಬ ವ್ಯಕ್ತಿಯು ನನ್ನ ಸಂಬಂಧವೂ ಹೀಗಿತ್ತು ಎಂದು ಭಾವಿಸಲು ಪ್ರಾರಂಭಿಸುತ್ತಾನೆ. ಅಂತೆಯೇ, ನೀವು ಟೆಕ್ಸ್‌ಟೇಶನ್‌ಶಿಪ್ ನಲ್ಲಿ ತೊಡಗಿರಬಹುದು, ನೀವು ಅದನ್ನು ಇನ್ನೂ ಅರಿತುಕೊಂಡಿಲ್ಲ ಅಷ್ಟೇ. ಆದಾಗ್ಯೂ, ಸಂದೇಶ ಕಳುಹಿಸುವಿಕೆಯು ಹೆಣ್ಣು-ಗಂಡಿನ  ನಡುವೆ ಮಾತ್ರವಲ್ಲದೆ ಸ್ನೇಹಿತರು ಮತ್ತು ಕೆಲಸದ ಸಹೋದ್ಯೋಗಿಗಳ ನಡುವೆಯೂ ಸಂಭವಿಸಬಹುದು. ನೀವಿಬ್ಬರೂ ಮೆಸೇಜ್‌ನಲ್ಲಿ ಎಲ್ಲವನ್ನೂ ಮಾತನಾಡುತ್ತಿದ್ದು ಮತ್ತು ಕಡಿಮೆ ಭೇಟಿಯಾದರೆ, ನೀವಿಬ್ಬರೂ ಸಂದೇಶದ ಮೇಲೆ ಪ್ರತಿ ಯೋಜನೆಯನ್ನು ಮಾಡಿದರೆ, ಸಂದೇಶಗಳೊಂದಿಗೆ ಪರಸ್ಪರರ ಸಂತೋಷ ಮತ್ತು ದುಃಖವನ್ನು ಹಂಚಿಕೊಂಡರೆ ಮತ್ತು ಒಟ್ಟಿಗೆ ಸುತ್ತಾಡುವುದಕ್ಕಿಂತ ಹೆಚ್ಚಾಗಿ, ನೀವು ಟೆಕ್ಸ್ಟ್ ಮಾತನಾಡಲು ಇಷ್ಟಪಡುತ್ತಿದ್ದರೆ, ಆಗ ನೀವು ಟೆಕ್ಸ್‌ಟೇಶನ್‌ಶಿಪ್ ತೊಡಗಿರುವಿರಿ ಎಂದರ್ಥ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News