Telecom Regulatory Authority of India : ಇತ್ತೀಚಿನ ದಿನಗಳಲ್ಲಿ ಪದೇ ಪದೇ ಅಪರಿಚಿತ ಸಂಖ್ಯೆಗಳಿಂದ  ಬರುವ ಕ್ಕರೆಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಫೋನ್ ಬಳಸುವ ಬಹುತೇಕರ ದೂರು.  ಇದೀಗ ಅಂತಹ ಫೋನ್ ಕರೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಮೊಬೈಲ್‌ನಲ್ಲಿ ಕರೆ ಮಾಡಿದವರ ನಿಖರ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆಗೆ ಸಂಬಂಧಿಸಿದಂತೆ TRAI ಸಾರ್ವಜನಿಕ ಸಮಾಲೋಚನೆಯನ್ನು ಪ್ರಾರಂಭಿಸಿದೆ. ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಕಾಲರ್ ನೇಮ್ ಡಿಸ್‌ಪ್ಲೇ ಸಿಸ್ಟಮ್ (ಅಳವಡಿಕೆಗೆ ಸಂಬಂಧಿಸಿದಂತೆ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ವಿಷಯವನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ  ಪ್ರಕಟಣೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 27ರೊಳಗೆ ಸಲಹೆಗಳನ್ನು ಕಳುಹಿಸುವಂತೆ ಸೂಚನೆ :  
ಈ ವ್ಯವಸ್ಥೆ ಜಾರಿಯಾದರೆ ಮೊಬೈಲ್ ಗೆ ಯಾರು ಕರೆಮಾಡುತ್ತಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗುತ್ತದೆ.  ಕರೆ ಮಾಡುವ ನಂಬರ್ ಯಾರ ಹೆಸರಿನಲ್ಲಿದೆ? ಆ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ ಎಂಬ ಮಾಹಿತಿ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಡಿಸೆಂಬರ್ 27 ರೊಳಗೆ ಈ ವಿಷಯಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ವಿಭಾಗಗಳು ಸಲಹೆ ನೀಡುವಂತೆ ಸಮಾಲೋಚನಾ ಪತ್ರದಲ್ಲಿ ಹೇಳಲಾಗಿದೆ.  ಹೀಗೆ ಸ್ವೀಕರಿಸಿದ ಪ್ರಶ್ನೆಗಳಿಗೆ ಜನವರಿ 10, 2023 ರವರೆಗೆ ಉತ್ತರಗಳನ್ನು ನೀಡಬಲಾಗುವುದು. 


ಇದನ್ನೂ ಓದಿ : iPhone 15: ಹೀಗಿರುತ್ತೆ ನೋಡಿ ಐಫೋನ್ 15, ಮೊದಲ ಫೋಟೋ ರಿವೀಲ್ ಮಾಡಿದ ಆ್ಯಪಲ್!


 ಪ್ರಸ್ತುತ ಈ ಸೌಲಭ್ಯವು ಈ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದೆ :
ಇಲ್ಲಿಯವರೆಗೆ ಟ್ರೂಕಾಲರ್ ಮತ್ತು ಭಾರತ್ ಕಾಲರ್ ಐಡಿ ಮತ್ತು ಆಂಟಿ-ಸ್ಪ್ಯಾಮ್‌ನಂತಹ ಮೊಬೈಲ್ ಅಪ್ಲಿಕೇಶನ್‌ಗಳ ಸಹಾಯದಿಂದ ಫೋನ್ ಮಾಡುವ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಬಹುದಾಗಿತ್ತು. ಆದರೆ ಈ ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಳ್ಳುವ ಹೆಸರುಗಳು ಸಂಪೂರ್ಣವಾಗಿ ವಿಶ್ವಾಸಾರ್ಹ ಎಂದು ಹೇಳಲು ಸಾಧ್ಯವಿಲ್ಲ. 


ಫೀಚರ್ ಫೋನ್‌ಗಳಲ್ಲಿಯೂ  ಇರಲಿದೆ ಈ ಸೌಲಭ್ಯ :
TRAI ಪ್ರಕಾರ, CNAP ಸೌಲಭ್ಯವನ್ನು ಪರಿಚಯಿಸುವ ಮೂಲಕ ೇ ಮೊಬೈಲ್ ಫೋನ್ ಗ್ರಾಹಕರು ಕರೆ ಮಾಡುವವರ ಮಾಹಿತುಇ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ಸ್ಮಾರ್ಟ್‌ಫೋನ್‌ಗಳ ಜೊತೆಗೆ ಫೀಚರ್ ಫೋನ್‌ಗಳಲ್ಲಿ ಈ ಸೌಲಭ್ಯವನ್ನು ಒದಗಿಸಲು ಪ್ರಯತ್ನ ನಡೆಯುತ್ತಿದೆ. 


ಇದನ್ನೂ ಓದಿ : ಫೆಬ್ರವರಿ 2023 ರಲ್ಲಿ ಈ ಕಾರುಗಳನ್ನು ಸ್ಥಗಿತಗೊಳಿಸಲಿದೆ ಹೋಂಡಾ !


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.