ಬೆಂಗಳೂರು : ಡಿಸೆಂಬರ್ 1 ರಂದು Xiaomi 13 ಸರಣಿ ಮತ್ತು MIUI 14 ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿಯು ಘೋಷಿಸಿದೆ. ಫೋನ್ ಬಿಡುಗಡೆಯ ಸುದ್ದಿ ಹಂಚಿಕೊಳ್ಳುತ್ತಿದ್ದಂತೆಯೇ Xiaomi ಸಿಇಒ ಲೀ ಜುನ್ ಫೋನ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಫೋನ್ ಅತ್ಯಂತ ತೆಳ್ಳಗಿದ್ದು, ಹಿಡಿದುಕೊಳ್ಳಲು ಆರಾಮದಾಯಕವಾಗಿರುತ್ತದೆ ಎಂದು ಹೇಳಲಾಗಿದೆ. ಮಾತ್ರವಲ್ಲ ನೀರಿನಲ್ಲಿ ಮುಳುಗಿದರೂ ಈ ಫೋನ್ ಹಾಳಾಗುವುದಿಲ್ಲ ಎನ್ನಲಾಗಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ ಪ್ರಬಲ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾವನ್ನು ಹೊಂದಿರಲಿದೆ.
Xiaomi 13 ವಿನ್ಯಾಸ :
Xiaomi 13 ನಲ್ಲಿನ ಬೆಜೆಲ್‌ಗಳು ತುಂಬಾ ತೆಳುವಾಗಿದ್ದು, ಫೋನ್‌ನ ಮೂರು ಬದಿಗಳಲ್ಲಿ 1.6mm ನ ಬೆಜೆಲ್ ಇದೆ. ಚಿನ್ ಭಾಗದಲ್ಲಿ ಕೇವಲ 1.8 ಎಂಎಂ ಬೆಜೆಲ್ ಇದೆ. ಫೋನ್‌ನ ಅಗಲ1.5 ಮಿಮೀ. ಇದ್ದು, ಅಲ್ಲದೆ ಈ ಫೋನ್ ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ : Instagram-Facebookಗೆ ಟಕ್ಕರ್ ನೀಡಲು ಸಜ್ಜಾಗಿದೆ ಜಿಯೋ .! 10 ಸೆಕೆಂಡುಗಳ ವೀಡಿಯೊಗೆ ಸಿಗುವುದು ಬಂಪರ್ ಹಣ
ವಾಟರ್ ಪ್ರೂಫ್ ಆಗಿರಲಿದೆ Xiaomi 13 :
Xiaomi 13 ವಾಟರ್ ಪ್ರೂಫ್ ಆಗಿರಲಿದೆ. ಸೀರೀಸ್ ನ ಎಲ್ಲಾ ಮಾದರಿಗಳು IP68 ಸರ್ಟಿಫಿಕೇಶನ್ ನೊಂದಿಗೆ ಬರುತ್ತಿದೆ. ಫೋನ್ ಅರ್ಧ ಘಂಟೆಯವರೆಗೆ 1 ಮೀಟರ್ ನೀರಿನಲ್ಲಿ ಮುಳುಗಿದ್ದರೂ ಫೋನ್‌ಗೆ ಏನೂ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. Xiaomi 13 ಮತ್ತು Xiaomi13 Proಅನ್ನು Snapdragon 8Gen 2 ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ನಡೆಸಲಾಗುವುದು.
Xiaomi 13 ನಿರೀಕ್ಷಿತ ವಿಶೇಷಣಗಳು :
Xiaomi 13 6.28-ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇನ್ನು ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಫೋನ್ 13MP ಮತ್ತು 5MP ಕ್ಯಾಮೆರಾ ಮತ್ತು 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಫೋನ್ 8GB RAM ಮತ್ತು 128GB ಸ್ಟೋರೇಜ್ ಹೊಂದಿರಲಿದೆ. ಫೋನ್ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 4,500mAh ಬ್ಯಾಟರಿಯನ್ನು ಪಡೆಯುತ್ತದೆ.
ಇದನ್ನೂ ಓದಿ : Nothing Phone 1: ಕೇವಲ ರೂ.9999 ಕ್ಕೆ ಖರೀದಿಸಿ ಪಾರದರ್ಶಕ ವಿನ್ಯಾಸದ ಈ ಸ್ಮಾರ್ಟ್ ಫೋನ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ