Excellent Recharge Plan By Jio - ಸಾಮಾನ್ಯವಾಗಿ ಜಿಯೋ ನೆಟ್‌ವರ್ಕ್‌ನ ಸಿಮ್ ಬಳಸುವ ಬಳಕೆದಾರರು ಯಾವಾಗಲೂ ರಿಲಯನ್ಸ್ ಜಿಯೋದಿಂದ ಅಗ್ಗದ ಮತ್ತು ಉತ್ತಮ ಯೋಜನೆಯನ್ನು ನಿರೀಕ್ಷಿಸುತ್ತಾರೆ. ಪ್ರತಿದಿನ ಹೆಚ್ಚಿನ ಇಂಟರ್ನೆಟ್ ಡೇಟಾ ಅಗತ್ಯವಿರುವ ಅನೇಕ ಜಿಯೋ ಬಳಕೆದಾರರಿದ್ದಾರೆ. ಈ ಲೇಖನದಲ್ಲಿ, ನಾವು ಬಳಕೆದಾರರಿಗೆ ನಿತ್ಯ 3GB ಡೇಟಾ ಒದಗಿಸುವ ಜಿಯೋ ಕಂಪನಿಯ ಎಲ್ಲಾ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಕುರಿತು ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಜಿಯೋ ರೂ 419 ಪ್ಲಾನ್ ವಿವರಗಳು
ಜಿಯೋ ಕಂಪನಿಯ ಈ ಯೋಜನೆಯಲ್ಲಿ, ಬಳಕೆದಾರರು 28 ದಿನಗಳ ಮಾನ್ಯತೆಯೊಂದಿಗೆ ನಿತ್ಯ 3GB ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಅಂದರೆ, ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 84GB ಹೈ ಸ್ಪೀಡ್ ಡೇಟಾವನ್ನು ಪಡೆಯುತ್ತಾರೆ ಎಂದರೆ ತಪ್ಪಾಗಲಾರದು. ಇದಲ್ಲದೆ, ಜಿಯೋ ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಧ್ವನಿ ಕರೆ ಮತ್ತು ಜಿಯೋ ಸಿನಿಮಾ ಸೇರಿದಂತೆ ಹಲವು ಅಪ್ಲಿಕೇಶನ್‌ಗಳ ಉಚಿತ ಪ್ರವೇಶ ನೀಡುತ್ತದೆ. 


ಜಿಯೋ ರೂ 601 ಪ್ಲಾನ್ ವಿವರಗಳು
ಈ ಪಟ್ಟಿಯಲ್ಲಿ ಎರಡನೇ ಯೋಜನೆ ಎಂದರೆ ಅದು 601 ರೂ.ಗಳ ಯೋಜನೆ. ಜಿಯೋದ ಈ ಯೋಜನೆಯಲ್ಲಿ, ಬಳಕೆದಾರರು 28 ದಿನಗಳ ಮಾನ್ಯತೆಯೊಂದಿಗೆ ನಿತ್ಯ 3GB ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಈ ಯೋಜನೆಯಲ್ಲಿ ಬಳಕೆದಾರರು 6GB ಹೆಚ್ಚುವರಿ ಡೇಟಾವನ್ನು ಸಹ ಪಡೆದುಕೊಳ್ಳಬಹುದು. ಅಂದರೆ, ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 90GB ಹೈ ಸ್ಪೀಡ್ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಜಿಯೋ ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಧ್ವನಿ ಕರೆ ಮತ್ತು ಜಿಯೋ ಸಿನಿಮಾ ಸೇರಿದಂತೆ ಹಲವು ಅಪ್ಲಿಕೇಶನ್‌ಗಳ ಉಚಿತ ಪ್ರವೇಶವನ್ನು ಕೂಡ ನೀಡುತ್ತದೆ. ಈ ಯೋಜನೆಯ ವಿಶೇಷತೆಯೆಂದರೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯೂ ಇದರಲ್ಲಿ ಲಭ್ಯವಿದೆ. 


ಇದನ್ನೂ ಓದಿ-Jio-V ಗೆ ಇದುವರೆಗೆ ಸಾಧ್ಯವಾಗದ ಈ ಪ್ರಯೋಜನಗಳನ್ನು ನೀಡುತ್ತದೆ Airtel


ಜಿಯೋ ರೂ 1199 ಯೋಜನೆ ವಿವರಗಳು
ಜಿಯೋ ಕಂಪನಿಯ ಈ ಯೋಜನೆಯಲ್ಲಿ, ಬಳಕೆದಾರರು 84 ದಿನಗಳ ಮಾನ್ಯತೆಯೊಂದಿಗೆ ನಿತ್ಯ 3GB ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಅಂದರೆ, ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 252GB ಹೈ ಸ್ಪೀಡ್ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಜಿಯೋ ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಧ್ವನಿ ಕರೆ ಮತ್ತು ಜಿಯೋ ಸಿನಿಮಾ ಸೇರಿದಂತೆ ಹಲವು ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ನೀಡುತ್ತದೆ.


ಇದನ್ನೂ ಓದಿ-Mobile Wallpaper Vastu: ಮೊಬೈಲ್ ನಲ್ಲಿ ಯಾವ ವಾಲ್ ಪೇಪರ್ ಬಳಸಿದರೆ ಯಶಸ್ಸು ನಿಮ್ಮದಾಗುತ್ತದೆ?


ಜಿಯೋ ರೂ 4199 ಪ್ಲಾನ್ ವಿವರಗಳು
ಜಿಯೋದ 3GB ದೈನಂದಿನ ಪ್ರಿಪೇಯ್ಡ್ ಪ್ಲಾನ್‌ನ ಪಟ್ಟಿಯಲ್ಲಿ ಇದು ಅತಿ ದೊಡ್ಡ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ಬಳಕೆದಾರರು 365 ದಿನಗಳವರೆಗೆ ಪ್ರತಿ ನಿತ್ಯ 3GB ಡೇಟಾವನ್ನು ಪಡೆಯುತ್ತಾರೆ. ಅಂದರೆ, ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 1095GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಜಿಯೋ ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಧ್ವನಿ ಕರೆ ಮತ್ತು ಜಿಯೋ ಸಿನಿಮಾ ಸೇರಿದಂತೆ ಹಲವು ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಕೂಡ ನೀಡುತ್ತದೆ. ಈ ಯೋಜನೆಯ ವಿಶೇಷತೆಯೆಂದರೆ ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ರೀಮಿಯಂ ಯೋಜನೆಯ ಒಂದು ವರ್ಷದ ಉಚಿತ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.