Facebook Instagram Down Reason And Impact on Meta: ನಿನ್ನೆ ರಾತ್ರಿ (ಮಾರ್ಚ್ 5, 2024) ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್-ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ಗಳು ಕೆಲ ಕಾಲ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಈ  ಆ್ಯಪ್‌ಗಳು ಅಮೇರಿಕಾದಲ್ಲಿ(ಅಲ್ಲಿನ ಕಾಲಮಾನ ಬೆಳಿಗ್ಗೆ 10 ಗಂಟೆ) ಮತ್ತು ಭಾರತದಲ್ಲಿ (ಕಾಲಮಾನ ರಾತ್ರಿ 8ಗಂಟೆ) ಸುಮಾರಿಗೆ ಸ್ಥಗಿತಗೊಂಡಿದ್ದವು. ಇದರಿಂದಾಗಿ,  ಶತಕೋಟಿ ಬಳಕೆದಾರರು ಪರದಾಡಿದ್ದು ಮಾತ್ರವಲ್ಲದೆ, ಇದು ಮೆಟಾ ಕಂಪನಿಯ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.  ಜಾಗತಿಕವಾಗಿ ಫೇಸ್‌ಬುಕ್-ಇನ್‌ಸ್ಟಾಗ್ರಾಮ್ ಸ್ಥಗಿತಗೊಳ್ಳಲು ಕಾರಣವೇನು? ಇದರಿಂದಾಗಿ ಮೆಟಾ ಕಂಪನಿಯ ಒಡೆಯ ಜುಕರ್‌ಬರ್ಗ್ ಗೆ ಆದ ನಷ್ಟವೆಷ್ಟು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಜಾಗತಿಕವಾಗಿ ಫೇಸ್‌ಬುಕ್-ಇನ್‌ಸ್ಟಾಗ್ರಾಮ್ ಸ್ಥಗಿತಕ್ಕೆ ಇದೇ ಪ್ರಮುಖ ಕಾರಣ? 
ಜಾಗತಿಕವಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸ್ಥಗಿತವನ್ನು ಮೆಟಾ ಕಂಪನಿ ಒಪ್ಪಿಕೊಂಡಿದ್ದು, ಲಕ್ಷಾಂತರ ಜನರು ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗದೇ ಇರುವುದಕ್ಕೆ  ಅನಿರ್ದಿಷ್ಟ  "ತಾಂತ್ರಿಕ ದೋಷ"ವೇ ಪ್ರಮುಖ ಕಾರಣ ಎಂದು ತಿಳಿಸಿದೆ.  


ಇದನ್ನೂ ಓದಿ- Google Maps ನಲ್ಲೂ ಬಂತು ಈ ವೈಶಿಷ್ಟ್ಯ, ಸ್ಕ್ರೀನ್ ಲಾಕ್ ಆದರೂ ರಸ್ತೆ ಕಾಣಿಸಲಿದೆ!


ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದ  ಮೆಟಾ ವಕ್ತಾರ ಆಂಡಿ ಸ್ಟೋನ್, ನಿನ್ನೆ ಯುಎಸ್ ನಲ್ಲಿ ಬೆಳಿಗ್ಗೆ 10:17ರ ಸುಮಾರಿಗೆ 'ಫೇಸ್‌ಬುಕ್ ಲಾಗಿನ್‌ನಲ್ಲಿ ಕೆಲವು ಸಮಸ್ಯೆ ಕಂಡು ಬಂದಿದೆ.' ಈ ಸಂದರ್ಭದಲ್ಲಿ ಬಳಕೆದಾರರು ನಿಗೂಢವಾಗಿ ಲಾಗ್ ಔಟ್ ಆಗಿದ್ದಾರೆ ಮತ್ತು ಮತ್ತೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ಕೆಲವರಿಗೆ ಆ್ಯಪ್ ಅನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದುಬಂದಿರುವುದಾಗಿ ಮಾಹಿತಿ ನೀಡಿದ್ದರು. ಜೊತೆಗೆ ಈ ಸಮಸ್ಯೆಯಿಂದ ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸಿದ್ದರು. 


ಜುಕರ್‌ಬರ್ಗ್ ಮಾಲೀಕತ್ವದ ಮೆಟಾ ಕಂಪನಿಗೆ ಭಾರೀ ನಷ್ಟ: 
ಕೆಲ ಗಂಟೆಗಳ ಕಾಲ ಶತಕೋಟಿ ಫೇಸ್‌ಬುಕ್-ಇನ್‌ಸ್ಟಾಗ್ರಾಮ್ ಬಳಕೆದಾರರ ಸಂಪರ್ಕ ಕಡಿತದಿಂದ ಜುಕರ್‌ಬರ್ಗ್ ಮಾಲೀಕತ್ವದ ಮೆಟಾ ಕಂಪನಿಯ ಮೇಲೆ ಪ್ರಮುಖ ಆರ್ಥಿಕ ಪರಿಣಾಮವನ್ನೂ ಬೀರಿದೆ.  ವರದಿಯ ಪ್ರಕಾರ, ಮೆಟಾದ ಷೇರು ಬೆಲೆ 1.5 % ರಷ್ಟು ಕುಸಿದಿದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ-  Windows 11 ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿದೆ, ಮೈಕ್ರೋಸಾಫ್ಟ್ ನಿಂದ ಹೊಸ ಅಪ್ಡೇಟ್ ಬಿಡುಗಡೆ!


ವೆಡ್‌ಬುಶ್ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾನ್ ಐವ್ಸ್, ಡೈಲಿಮೇಲ್.ಕಾಮ್‌ ಪ್ರಕಾರ, ಫೇಸ್‌ಬುಕ್-ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಉಂಟಾಗಿದ್ದ ಸ್ಥಗಿತದಿಂದಾಗಿ  ಮಾರ್ಕ್ ಜುಕರ್‌ಬರ್ಗ್ಅಂದಾಜು ಸುಮಾರು $100 ಮಿಲಿಯನ್ ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.