Google Pay: ಜೂನ್‌ನಿಂದ ಈ ದೇಶದಲ್ಲಿ ಕಾರ್ಯನಿರ್ವಹಿಸಲ್ಲ Gpay

Google Pay: ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಹಿವಾಟುಗಳಿಗಾಗಿ ಹೆಚ್ಚು ಜನಪ್ರಿಯವಾಗಿರುವ ಗೂಗಲ್ ಪೇ ಶೀಘ್ರದಲ್ಲೇ ಈ ರಾಷ್ಟ್ರದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ. 

Written by - Yashaswini V | Last Updated : Mar 1, 2024, 11:22 AM IST
  • GPay ಜೂನ್ 4, 2024 ರಿಂದ ಅಮೇರಿಕಾದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
  • ಆದಾಗ್ಯೂ, ಭಾರತ ಮತ್ತು ಸಿಂಗಾಪುರದಲ್ಲಿರುವ GPay ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ.
  • ಈ ರಾಷ್ಟ್ರಗಳಲ್ಲಿ ಗೂಗಲ್ ಪೇ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ.
Google Pay: ಜೂನ್‌ನಿಂದ ಈ ದೇಶದಲ್ಲಿ ಕಾರ್ಯನಿರ್ವಹಿಸಲ್ಲ Gpay title=

Google Pay: ಪ್ರಸ್ತುತ ಆನ್‌ಲೈನ್ ವಹಿವಾಟುಗಳಿಗಾಗಿ ಜನಪ್ರಿಯ ಮಾಧ್ಯಮಗಳಲ್ಲಿ ಒಂದಾಗಿರುವ ಗೂಗಲ್ ಪೇ ಅಪ್ಲಿಕೇಶನ್ ಭಾರತ, ಸಿಂಗಾಪುರ ಮತ್ತು ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಹೆಚ್ಚಾಗಿ ವ್ಯಾಪಿಸಿದೆ. ಆದರೀಗ ಗೂಗಲ್ ಪೇ ಸಂಬಂಧಿಸಿದಂತೆ ಗೂಗಲ್ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು  ಈ ಆ್ಯಪ್ ಶೀಘ್ರದಲ್ಲೇ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. 

ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿರುವ ಗೂಗಲ್: 
ಈ ಕುರಿತಂತೆ ಗೂಗಲ್ ತನ್ನ ಬ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, GPay ಜೂನ್ 4, 2024 ರಿಂದ ಅಮೇರಿಕಾದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆದಾಗ್ಯೂ, ಭಾರತ ಮತ್ತು ಸಿಂಗಾಪುರದಲ್ಲಿರುವ GPay ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ. ಈ ರಾಷ್ಟ್ರಗಳಲ್ಲಿ ಗೂಗಲ್ ಪೇ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ. 

ವಾಸ್ತವವಾಗಿ, ಗೂಗಲ್ ಈಗ ಹಳೆಯ ಗೂಗಲ್ ಆಪ್ ಅನ್ನು ಮುಚ್ಚಲು ಹೊರಟಿದೆ.  Android ಹೋಮ್‌ಸ್ಕ್ರೀನ್‌ನಲ್ಲಿ ಗೋಚರಿಸುವ 'GPay' ಅಪ್ಲಿಕೇಶನ್ ಪಾವತಿಗಳು ಮತ್ತು ಹಣಕಾಸುಗಾಗಿ ಬಳಸಲಾಗುವ ಹಳೆಯ ಆವೃತ್ತಿಯಾಗಿದೆ. ಆದರೆ, ಅಮೆರಿಕಕ್ಕಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ- WhatsApp ಹೊಸ ವೈಶಿಷ್ಟ್ಯ: ಇನ್ಮುಂದೆ ಪ್ರೊಫೈಲ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ

ಗೂಗಲ್ ಪೇ ಆ್ಯಪ್‌ನ ಅನುಭವವನ್ನು ಸರಳಗೊಳಿಸಲು, ಸ್ಟ್ಯಾಂಡ್‌ಲೋನ್ ಗೂಗಲ್ ಪೇ ಆಪ್‌ನ ಅಮೇರಿಕನ್ ಆವೃತ್ತಿಯನ್ನು ಜೂನ್ 4 ರಿಂದ ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿಯು ಬ್ಲಾಗ್ ಮೂಲಕ ಈ ಮಾಹಿತಿಯನ್ನು ನೀಡಿದೆ.  

ಪೀರ್-ಟು-ಪೀರ್ ಪಾವತಿಯೂ ಕಾರ್ಯನಿರ್ವಹಿಸುವುದಿಲ್ಲ: 
ಲಭ್ಯವಿರುವ ಮಾಹಿತಿಯ ಪ್ರಕಾರ,  ಅಮೆರಿಕದಲ್ಲಿ ಗೂಗಲ್ ಪೇ ಆ್ಯಪ್‌ ಅನ್ನು ಸ್ಥಗಿತಗೊಳಿಸಿದ ಬಳಿಕ ಇಲ್ಲಿ ಗೂಗಲ್ ಪೀರ್-ಟು-ಪೀರ್ ಪಾವತಿಗಳ ಕಾರ್ಯಾಚರಣೆಯೂ ಕೂಡ ಸ್ಥಗಿತಗೊಳ್ಳಲಿದೆ. ಅರ್ಥಾತ್, ಅಮೆರಿಕದ ಜನರು ಇನ್ನು ಮುಂದೆ ಹಳೆಯ ಗೂಗಲ್ ಪೇ ಆ್ಯಪ್ ಮೂಲಕ ಹಣವನ್ನು ಬೇರೆಯವರಿಗೆ ಕಳುಹಿಸುವುದಾಗಲಿ, ಇಲ್ಲವೇ, ಇತರರಿಂದ ಹಣ ಸ್ವೀಕರಿಸುವುದಾಗಲಿ ಮಾಡಲು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ- Online Shopping: ಆನ್‌ಲೈನ್ ಶಾಪಿಂಗ್ ಕ್ರೇಜ್ ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು! ಇಲ್ಲಿದೆ ವರದಿ

Google Wallet ಅಪ್ಲಿಕೇಶನ್‌ಗೆ ಬದಲಾಗಲು ಸಲಹೆ: 
ಗಮನಾರ್ಹವಾಗಿ, ಅಮೆರಿಕದಲ್ಲಿ ಗೂಗಲ್ ಪೇ ಸ್ಥಗಿತಗೊಳಿಸಲು ಮುಂದಾಗಿರುವ ಕಂಪನಿಯು ಅಮೆರಿಕದಲ್ಲಿರುವ ಗೂಗಲ್ ಪೇ ಬಳಕೆದಾರರಿಗೆ Google Wallet ಅಪ್ಲಿಕೇಶನ್‌ಗೆ ಬದಲಾಗುವಂತೆ ಸಲಹೆ ನೀಡಿದೆ. ಇದರೊಂದಿಗೆ ಗೂಗಲ್ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ಹೊಸ ನವೀಕರಣಗಳನ್ನು ನೀಡುವುದನ್ನು ಮುಂದುವರೆಸುವುದಾಗಿ ಭರವಸೆಯನ್ನು ಸಹ ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News