ಸ್ಯಾನ್ಫ್ರಾನ್ಸಿಸ್ಕೋ: ಜನರನ್ನು ಸಂಪರ್ಕಿಸುವ ಮತ್ತು ಸಾಮಾಜಿಕ ಜಾಲತಾಣಗಳನ್ನು ಸುಧಾರಿಸುವ ಉದ್ದೇಶದಿಂದ ಫೇಸ್‌ಬುಕ್ (Facebook) ರಚಿಸಲಾಗಿದೆ. ಆದರೆ ಇದೀಗ ಈ ವೇದಿಕೆಯಲ್ಲಿ ನಕಲಿ ಮತ್ತು ಸುಳ್ಳು ಖಾತೆಗಳಿವೆ. ಫೇಸ್‌ಬುಕ್ ಇಂತಹ ನಕಲಿ ಖಾತೆಗಳ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದೆ. ಫೇಸ್‌ಬುಕ್ 1,196 ಖಾತೆಗಳನ್ನು, 994 ದುರುದ್ದೇಶಪೂರಿತ ಖಾತೆಗಳನ್ನು ಇನ್‌ಸ್ಟಾಗ್ರಾಮ್‌ನಿಂದ ತೆಗೆದುಹಾಕಿದೆ, ಜೊತೆಗೆ ನಕಲಿ 7,947 ಪುಟಗಳು ಮತ್ತು 110 ಗುಂಪುಗಳನ್ನು ತೆಗೆದುಹಾಕಿದೆ. ಅಕ್ಟೋಬರ್ ನಲ್ಲಿ ಫೇಸ್ಬುಕ್ ಖಾತೆಗಳು, ಪುಟಗಳು ಮತ್ತು ಗುಂಪುಗಳ 14 ನೆಟ್ವರ್ಕ್ ಗಳನ್ನು ತೆಗೆದುಹಾಕಿದೆ. ಅವುಗಳಲ್ಲಿ ಎಂಟು - ಜಾರ್ಜಿಯಾ, ಮ್ಯಾನ್ಮಾರ್, ಉಕ್ರೇನ್ ಮತ್ತು ಅಜೆರ್ಬೈಜಾನ್ ದೇಶಗಳಿಗೆ ಸಂಬಂಧಪಟ್ಟಿವೆ. ತಮ್ಮ ದೇಶಗಳಲ್ಲಿನ ದೇಶೀಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಆರು ನೆಟ್‌ವರ್ಕ್‌ಗಳಿಂದ ಇವುಗಳನ್ನು ತೆಗೆದುಹಾಕಲಾಗಿದೆ - ಇವು ಇರಾನ್, ಈಜಿಪ್ಟ್, ಯುನೈಟೆಡ್ ಸ್ಟೇಟ್ಸ್ ಮತ್ತು ಮೆಕ್ಸಿಕೊ ತಮ್ಮ ದೇಶಗಳ ಹೊರಗಿನ ಜನರ ಮೇಲೆ ಕೇಂದ್ರೀಕರಿಸಿ ನಿರ್ಮಾಣಗೊಂಡಿದ್ದವು.


COMMERCIAL BREAK
SCROLL TO CONTINUE READING

ಇದನ್ನು ಓದಿ- Fake News ತಡೆಗೆ Facebook ನಲ್ಲಿ ಬರಲಿದೆ WhatsAppನ ಈ ವೈಶಿಷ್ಟ್ಯ


ಚುನಾವಣೆಗೂ ಮುನ್ನ ಮ್ಯಾನ್ಮಾರ್ ನ ಹಲವು ಖಾತೆಗಳನ್ನು ತೆಗೆದುಹಾಕಲಾಗಿದೆ
ಮ್ಯಾನ್ಮಾರ್ ನಲ್ಲಿ ಒಟ್ಟು 36 ಫೇಸ್ ಬುಕ್ ಖಾತೆಗಳನ್ನು, 6 ಪುಟಗಳನ್ನು, ಎರಡು ಗುಂಪುಗಳನ್ನು ಹಾಗೂ ಒಂದು ಇನ್ಸ್ಟಾಗ್ರಾಮ್ ಖಾತೆಯನ್ನು ತೆಗೆದುಹಾಕಲಾಗಿದ್ದು, ಇವು ಓಪನ್ ಮೈಂಡ್ ಹೆಸರಿನ ಪಿಆರ್ ಏಜೆನ್ಸಿ ಜೊತೆಗೆ ಸಂಪರ್ಕ ಹೊಂದಿದ್ದವು ಎನ್ನಲಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫೇಸ್ಬುಕ್, " ಮ್ಯಾನ್ಮಾರ್ ನಲ್ಲಿ ನವೆಂಬರ್ ಚುನಾವಣೆಗೂ ಮುನ್ನ ಶಂಕಿತ, ಸಂಘಟಿತ ಹಾಗೂ ಅಸಮರ್ಪಕ ನಡುವಳಿಕೆಯ ಕುರಿತು ಇವುಗಳನ್ನು ನಮ್ಮ ಸಕ್ರೀಯ ತನಿಖಾ ತಂಡ ಪತ್ತೆಹಚ್ಚಿದೆ' ಎಂದು ಹೇಳಿದೆ. ಅಷ್ಟೇ ಅಲ್ಲ ಮ್ಯಾನ್ಮಾರ್ ಜನಸಾಮಾನ್ಯರಿಂದ ಸಂಚಾಲಿತ 10 ಫೇಸ್ ಬುಕ್ ಖಾತೆಗಳು , 8 ಪುಟಗಳು, 2 ಗುಂಪುಗಳು ಹಾಗೂ 2 ಇನ್ಸ್ಟಾಗ್ರಾಮ್ ಖಾತೆಗಳನ್ನು ಕೂಡ ತೆಗೆದುಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣ ಸಂಸ್ಥೆ ಹೇಳಿಕೊಂಡಿದೆ. ಇವು ದೇಸೀಯ ಆಡಿಯನ್ಸ್ ಗಳನ್ನು ಗುರಿಯಾಗಿಸಿದ್ದವು ಎಂದು ಸಂಸ್ಥೆ ತಿಳಿಸಿದೆ.


ಇದನ್ನು ಓದಿ- Facebook ಖಾತೆಯಲ್ಲಿ ಆಗಲಿರುವ ಈ ಬದಲಾವಣೆಗಳ ಬಗ್ಗೆ ತಪ್ಪದೇ ತಿಳಿಯಿರಿ


ಯುಎಸ್ನಲ್ಲಿ, ಫೇಸ್ಬುಕ್ 202 ಫೇಸ್ಬುಕ್ ಖಾತೆಗಳನ್ನು, 54 ಪುಟಗಳು ಮತ್ತು 76 ಇನ್ಸ್ಟಾಗ್ರಾಮ್ ಖಾತೆಗಳನ್ನು ತೆಗೆದುಹಾಕಿದೆ. ಅವುಗಳು ಅಮೆರಿಕದ ಮಾರ್ಕೆಟಿಂಗ್ ಸಂಸ್ಥೆಯಾದ ರೈಲಿ ಫೋರ್ಜ್ ಗೆ ಸಂಬಂಧಿಸಿವೆ ಮತ್ತು ಅವು ಟರ್ನಿಂಗ್ ಪಾಯಿಂಟ್ ಯುಎಸ್ಎ ಮತ್ತು ಇನ್ಕ್ಲೂಸಿವ್ ಕನ್ಸರ್ವೇಶನ್ ಗ್ರೂಪ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದವು.


ಇದನ್ನು ಓದಿ- ಇನ್ಮುಂದೆ ನಿಮಗೆ ನಿಮ್ಮ ಭವಿಷ್ಯ ಕೂಡ ಹೇಳಿಕೊಡಲಿದೆಯಂತೆ Facebook


ಈ ಕುರಿತು ಹೇಳಿಕೆ ನೀಡಿರುವ ಫೇಸ್ ಬುಕ್ 'ನಾವು ನಮ್ಮ ವೇದಿಕೆಯ ದುರುಪಯೋಗ ತಡೆಗಟ್ಟುವಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಆದರೆ, ನಾವು ಈ ಮೊದಲು ಹೇಳಿದಂತೆ ಇದೊಂದು ನಿರಂತರ ಪ್ರಕ್ರಿಯೆಯಾಗಿದೆ ಮತ್ತು ಮುಂಚೂಣಿಯಲ್ಲಿರಲು ಮತ್ತು ಸುಧಾರಣೆ ತರಲು ನಾವು ಕಟಿಬದ್ಧರಾಗಿದ್ದೇವೆ" ಎಂದಿದೆ.