ನವದೆಹಲಿ: ಫೇಸ್‌ಬುಕ್‌ನಲ್ಲಿ ಈಗ ಡಾಟಾ ಹೆಚ್ಚು ಸುರಕ್ಷಿತವಾಗಿರುತ್ತದೆ. ಬಳಕೆದಾರರ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯ ಬಗ್ಗೆ ತೀವ್ರ ಸಂಶೋಧನೆ ನಡೆಸುತ್ತಿರುವ ಫೇಸ್‌ಬುಕ್ (Facebook), ನಾವೀನ್ಯತೆಗಾಗಿ ಸಂಶೋಧನೆಯನ್ನು ಮುಂದುವರಿಸುವುದಾಗಿ ಹೇಳಿದೆ. ಗೌಪ್ಯತೆ ಮತ್ತು ಸುರಕ್ಷಿತ ಉತ್ಪನ್ನಗಳನ್ನು ರಚಿಸುವ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಡೇಟಾವನ್ನು ಪ್ರಕ್ರಿಯೆಗೊಳಿಸಲು ಇದು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.
ಫೇಸ್‌ಬುಕ್‌ನಲ್ಲಿ ಫೆಡರಲ್ ಆಂಟಿಟ್ರಸ್ಟ್ ತನಿಖೆ ಅಂತಿಮ ಹಂತದಲ್ಲಿದೆ ಮತ್ತು ಯುಎಸ್ (US) ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ಸದಸ್ಯರು ಫೇಸ್‌ಬುಕ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಬಹುದೇ ಎಂದು ಏಜೆನ್ಸಿಯ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದರ ನಂತರ ಫೇಸ್‌ಬುಕ್ ಮೇಲಿನ ಹೇಳಿಕೆ ನೀಡಿದೆ.
ವಾಟ್ಸಾಪ್‌ನಲ್ಲಿನ ಹೊಸ ವೈಶಿಷ್ಟ್ಯ, ಈಗ ಅನಗತ್ಯ ಮೆಸೇಜ್‌ಗಳಿಗೆ ಹೇಳಿ ಗುಡ್ ಬೈ
ಕಳೆದ ಹಲವು ತಿಂಗಳುಗಳಲ್ಲಿ ಇದು ಪಬ್ಲಿಕ್ ಗ್ರೂಪ್ ನಲ್ಲಿ ಬದಲಾವಣೆಗಳನ್ನು ಮಾಡಿದೆ ಎಂದು ಫೇಸ್‌ಬುಕ್ ಹೇಳಿದೆ. ಎಫ್‌ಬಿ ಮತ್ತು ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ ಕ್ಯಾಂಪಸ್ ಮತ್ತು ಅಕೌಂಟ್ಸ್ ಸೆಂಟರ್‌ನಲ್ಲಿನ ಸ್ಟೋರ್ ಗಳಂತಹ ಹೊಸ ಉತ್ಪನ್ನಗಳನ್ನು ರಚಿಸಿದೆ.
ಉತ್ಪನ್ನದ ಮುಖ್ಯ ಗೌಪ್ಯತೆ ಅಧಿಕಾರಿ ಮಿಚೆಲ್ ಪ್ರೊಟಿ, ಎಫ್‌ಬಿ ಯಲ್ಲಿ ಅನೇಕ ತಂಡಗಳ ಪರಿಣಾಮಕಾರಿ ಸಹಾಯಕ್ಕೆ ಧನ್ಯವಾದಗಳು ಎಂದು ಹೇಳಿದರು. ಈ ಉತ್ಪನ್ನಗಳು ಜನರಿಗೆ ಅವರ ಗೌಪ್ಯತೆಯನ್ನು ಗೌರವಿಸುವಾಗ ಉತ್ತಮ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ವೀಡಿಯೊಗಳನ್ನು ಹುಡುಕುವುದು ತುಂಬಾ ಸುಲಭ, ಈ ವಿಧಾನ ಅನುಸರಿಸಿ
ಈ ಮೊದಲು ಎಫ್‌ಬಿ ಮೆಸೆಂಜರ್‌ನಲ್ಲಿ ಆಪ್ ಲಾಕ್ ಎಂಬ ವೈಶಿಷ್ಟ್ಯವನ್ನು ನೀಡಲಾಗುತ್ತಿತ್ತು, ಇದು ಬಳಕೆದಾರರು ತಮ್ಮ ಖಾಸಗಿ ಸಂದೇಶಗಳನ್ನು ಇತರರು ಓದುವುದನ್ನು ತಡೆಯಲು ಅನುವು ಮಾಡಿಕೊಡುತ್ತದೆ.
ಅಪ್ಲಿಕೇಶನ್ ಲಾಕ್ ಸಹಾಯದಿಂದ ಖಾಸಗಿ ಸಂದೇಶಗಳು ಉತ್ತಮ ರಕ್ಷಣೆ ಪಡೆಯುತ್ತವೆ, ಉದಾಹರಣೆಗೆ ಯಾರಾದರೂ ನಿಮ್ಮ ಫೋನ್ ಅನ್ನು ಸ್ವಲ್ಪ ಸಮಯದವರೆಗೆ ಕೇಳಿದರೆ, ನಂತರ ಅಪ್ಲಿಕೇಶನ್ ಲಾಕ್ ಅನ್ನು ಬಳಸುವುದರಿಂದ ಅವರು ನಿಮಗೆ ತಿಳಿಯದೆಯೇ ನಿಮ್ಮ ಖಾತೆಗಳಲ್ಲಿ ಚಾಟ್ ಮಾಡಲು ಸಾಧ್ಯವಿಲ್ಲ ಎಂದು ನೀವು ಖಚಿತವಾಗಿ ಹೇಳಬಹುದು.
ಮೆಸೆಂಜರ್ ಗೌಪ್ಯತೆ ಮತ್ತು ಸುರಕ್ಷತೆ, ಉತ್ಪನ್ನ ನಿರ್ವಹಣೆಯ ನಿರ್ದೇಶಕ ಜೆ. ಸುಲ್ಲಿವಾನ್ ಅವರ ಪ್ರಕಾರ, ಮೆಸೆಂಜರ್‌ನಲ್ಲಿ ಗೌಪ್ಯತೆ ಪ್ರಮುಖ ಪಾತ್ರ ವಹಿಸುತ್ತದೆ. ಅದು ಮೆಸೇಜಿಂಗ್ ಅಥವಾ ವಿಡಿಯೋ ಚಾಟ್, ಕರೆ ಅಥವಾ ಮೆಸೆಂಜರ್ ರೂಂ ಯಾವುದೇ ಆಗಿರಲಿ ಇವುಗಳಲ್ಲಿ ಗ್ರಾಹಕರ ಗೌಪ್ಯತೆಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.