ನವದೆಹಲಿ: Facebook, WhatsApp and Instagram Server Down- ಈಗ ಸೋಷಿಯಲ್ ಮೀಡಿಯಾ‌ (Social Media) ದುನಿಯಾ. ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾ ಅವಲಂಭಿತವಾಗಿಯೇ ಇವೆ. ಈ ಮಾತಿಗೆ ಪೂರಕ ಎನ್ನುವಂತೆ ನಿನ್ನೆ (ಸೋಮವಾರ) ಸಂಜೆ ಬರೀ 1 ಗಂಟೆ ಫೇಸ್​ಬುಕ್​ (Facebook) ವಾಟ್ಸ್​ಅಪ್ (Whatsapp) ಮತ್ತು ಇನ್​ಸ್ಟಾಗ್ರಾಮ್​ (Instagram) ಸರ್ವರ್​ ಸ್ಥಗಿತ ಆಗಿದ್ದರಿಂದ ಜಾಗತಿಕ ಆರ್ಥಿಕತೆ (Global Economy) ಭಾರೀ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ. 


COMMERCIAL BREAK
SCROLL TO CONTINUE READING

ಫೇಸ್​ಬುಕ್​, ವಾಟ್ಸ್​ಅಪ್​ ಮತ್ತು ಇನ್​ಸ್ಟಾಗ್ರಾಮ್​ ಗಳು ಡಿಜಿಟಲ್ ಮೀಡಿಯಾದಲ್ಲಿ (Digital Media) ಅಗ್ರಪಾಲನ್ನು ಹೊಂದಿವೆ. ಪರಿಣಾಮವಾಗಿಯೇ ಈ ಮೂರು ಸಾಮಾಜಿಕ ಜಾಲತಾಣಗಳ (Social Media Platforms) ಸರ್ವರ್​ ಗಳು ಒಂದೇ ಒಂದು ಗಂಟೆ ಬಂದಾಗಿದ್ದರಿಂದ ಮಿಲಿಯನ್​ ಡಾಲರ್ (Million Dollar) ಹಣ ನಷ್ಟವಾಗಿದೆ. ಇನ್ನೂ ಜಾಗತಿಕವಾಗಿ ಆಗಿರುವ ಸಂವಹನದ‌  ವ್ಯತ್ಯಯವೂ (Communication problem) ಕೂಡ ದೊಡ್ಡ ಪ್ರಮಾಣದ್ದು.


ಇದನ್ನೂ ಓದಿ- ಜಾಗತಿಕವಾಗಿ ಸ್ಥಗಿತಗೊಂಡ WhatsApp,Instagram ಮತ್ತು Facebook


ಭಾರತೀಯ ಕಾಲಮಾನದ (Indian Times) ಪ್ರಕಾರ ನಿನ್ನೆ ಸಂಜೆ ದಿಢೀರನೆ ಫೇಸ್​ಬುಕ್​, ವಾಟ್ಸ್​ಅಪ್​ (Whatsapp) ಮತ್ತು ಇನ್​ಸ್ಟಾಗ್ರಾಮ್​ ಗಳ ಸರ್ವರಗಳು ಒಂದು ಗಂಟೆ ಸ್ಥಗಿತಗೊಂಡಿದ್ದವು. ಪರಿಣಾಮವಾಗಿ ಈ ಮೂರು ಜಾಲತಾಣಗಳಿಂದ ಪರ್ಸನಲ್​ ಮೆಸೇಜಿಂಗ್ (Personal Massaging) ಮತ್ತು ಸೋಷಿಯಲ್ ಕಮ್ಯುನಿಕೇಷನ್​ (Social Communication) ಗಂಟೆಗಟ್ಟಲೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಬಳಕೆದಾರರು ಟ್ವಿಟರ್​ (Tweeter) ಮತ್ತು ಟೆಲಿಗ್ರಾಂ (Telegram) ಮೊರೆ ಹೋಗಿದ್ದರು. ಆದರೂ‌ ಫೇಸ್​ಬುಕ್​, ವಾಟ್ಸ್​ಅಪ್​ ಮತ್ತು ಇನ್​ಸ್ಟಾಗ್ರಾಮ್​ ಗಳ ರೀತಿಯಲ್ಲಿ ಸುಲಲಿತವಾದ ಕಮ್ಯುನಿಕೇಷನ್ (Easy Communication) ಸಾಧ್ಯವಾಗಿರಲಿಲ್ಲ.


ಇದೆಲ್ಲದರ ಪರಿಣಾಮವಾಗಿ ಫೇಸ್​ಬುಕ್​, ವಾಟ್ಸ್​ಅಪ್​ ಮತ್ತು ಇನ್​ಸ್ಟಾಗ್ರಾಮ್​ ಗಳು ಒಂದು ಗಂಟೆ ಸ್ಥಗಿತಗೊಂಡಿದ್ದರಿಂದ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್​ ಡಾಲರ್ ನಷ್ಟ ಆಗಿದೆ ಎಂದು‌ ನೆಟ್​ಬ್ಲಾಕ್ಸ್​ನ (Netbox) 'ದ ಕಾಸ್ಟ್​ ಆಫ್​ ಶಟ್​ಡೌನ್​ ಟೂಲ್​' (The Cost of Shutdown Tool) ಅಂದಾಜು ಮಾಡಿದೆ. ಅಷ್ಟೇಯಲ್ಲದೆ ನಿನ್ನೆ ಸಂಜೆ ಆಗಿರುವ ಈ‌ ತೊಡಕಿನಿಂದ ಸಮಸ್ಯೆ ಮತ್ತು ನಷ್ಟ ಇನ್ನೂ ಮುಂದುರಿಯಲಿದೆ ಎಂದು ಕೂಡ ಹೇಳಿದೆ.


ಇದನ್ನೂ ಓದಿ- BSNL ಅದ್ಭುತ ಪ್ಲಾನ್: ನಿತ್ಯ 5 ಜಿಬಿ ಇಂಟರ್ನೆಟ್ ಜೊತೆಗೆ ಸಿಗಲಿದೆ ಈ ಸೌಲಭ್ಯ


ಫೇಸ್​ಬುಕ್​, ವಾಟ್ಸ್​ಅಪ್​ ಮತ್ತು ಇನ್​ಸ್ಟಾಗ್ರಾಮ್​ ಗಳು ಒಂದು ಗಂಟೆ ಸ್ಥಗಿತಗೊಳ್ಳಲು ತಾಂತ್ರಿಕ ವೈಫಲ್ಯ ‌(Technical Laps) ಕಾರಣ ಎಂದು ಹೇಳಲಾಗುತ್ತಿದೆ. ಈ ಅವಘಡದಿಂದ ಫೇಸ್​​ಬುಕ್​ನ ಷೇರು (Facebook Share) ಶೇಕಡಾ 6ರಷ್ಟು ಕುಸಿತ ಕಂಡಿದೆ.‌ ಸರ್ವರ್ ಡೌನ್ (Server Down) ಸಮಸ್ಯೆಯ ಬಗ್ಗೆ ಟ್ವಿಟರ್​ ಮೂಲಕ ಬಳಕೆದಾರರ (Consumers) ಕ್ಷಮೆ ಕೋರಿದೆ.


ಫೇಸ್​ಬುಕ್​, ವಾಟ್ಸ್​ಅಪ್​ ಮತ್ತು ಇನ್​ಸ್ಟಾಗ್ರಾಮ್​ ಮೂಲಗಳು ತಮ್ಮ ಸರ್ವರ್ ಡೌನ್ ಆಗಲು ತಾಂತ್ರಿಕ ವೈಫಲ್ಯ ಎಂದು ಹೇಳುತ್ತವೆ. ಆದರೆ ನಿರ್ಧಿಷ್ಟವಾದ ಕಾರಣ ಮುಂದಿಟ್ಟಿಲ್ಲ. ಹಾಗಾಗಿ ಹ್ಯಾಕ್​ ಆಗಿದ್ದಿರಲೂಬಹುದು ಎಂಬ ಅನುಮಾನಗಳು ಮೂಡುತ್ತಿವೆ. ಒಟ್ಟಾರೆ ಫೇಸ್​ಬುಕ್​, ವಾಟ್ಸ್​ಅಪ್​ ಮತ್ತು ಇನ್​ಸ್ಟಾಗ್ರಾಮ್​ ಗಳು ಸ್ಥಗಿತಗೊಂಡಿದ್ದರಿಂದ ಜನರ ಸಾಮಾಜಿಕ ಜಾಲತಾಣದ ಅವಲಂಬನೆ ಬಹಿರಂಗವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.