Facebook: ಭಾರತದಲ್ಲಿ ಬ್ಯಾನ್ ಆಗಲಿದೆಯಾ ಫೇಸ್ ಬುಕ್? ಹೈಕೋರ್ಟ್ ಎಚ್ಚರಿಕೆಯ ಬಳಿಕ ಮೇಟಾ ಟೆನ್ಷನ್ ನಲ್ಲಿ ಹೆಚ್ಚಳ
Karnataka HC On Facebook Ban: ವಿಶ್ವದ ಅಗ್ರ ಸಾಮಾಜಿಕ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಫೇಸ್ಬುಕ್ಗೆ ಕರ್ನಾಟಕ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ. ತನಿಖೆಯಲ್ಲಿ ಕರ್ನಾಟಕ ಪೊಲೀಸರಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಆರೋಪ ಮೆಟಾ ಮೇಲಿದೆ.
Karnataka HC On Facebook Ban: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠವು ಮೆಟಾಗೆ ಖಡಕ್ ತಾಕೀತು ಮಾಡಿದೆ. ತನಿಖೆಗೆ ಕರ್ನಾಟಕ ಪೊಲೀಸರಿಗೆ ಸಹಕರಿಸುತ್ತಿಲ್ಲ ಎಂಬ ಆರೋಪ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೇಲಿದೆ. ತನಿಖೆಗೆ ಸಹಕರಿಸದೆ ಹೋದಲ್ಲಿ ಫೇಸ್ ಬುಕ್ ಬ್ಯಾನ್ ಮಾಡುವಂತೆ ಹೈಕೋರ್ಟ್ ಹೇಳಿದೆ. ಈ ಪ್ರಕರಣ ಸೌದಿಯಲ್ಲಿ ವಾಸಿಸುವ ಭಾರತೀಯನಿಗೆ ಸಂಬಂಧಿಸಿದೆ, ಅವರ ಹೆಸರು ಶೈಲೇಶ್ ಕುಮಾರ್. ಶೈಲೇಶ್ ಕುಮಾರ್ ಸೌದಿ ಅರೇಬಿಯಾದಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಶೈಲೇಶ್ ಕುಮಾರ್ ಅವರ ಪತ್ನಿ ಕವಿತಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದರ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣ ಏನು
ಸಿಎಎ ಮತ್ತು ಎನ್‌ಆರ್‌ಸಿಯನ್ನು ಬೆಂಬಲಿಸಿ ತಮ್ಮ ಪತಿ ಶೈಲೇಶ್ ಕುಮಾರ್ ಒಮ್ಮೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು, ಆದರೆ ಕೆಲವರು ಅದನ್ನು ಇಷ್ಟಪಡಲಿಲ್ಲ ಮತ್ತು ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಸೌದಿ ಅರೇಬಿಯಾದ ರಾಜ ಹಾಗೂ ಇಸ್ಲಾಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಇದಾದ ಬಳಿಕ ಸೌದಿ ಪೊಲೀಸರು ಶೈಲೇಶ್‌ನನ್ನು ಬಂಧಿಸಿದ್ದಾರೆ. ಎಂದು ಕವಿತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಕುರಿತು ಕವಿತಾ ಅವರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಮಂಗಳೂರು ಪೊಲೀಸರು ಫೇಸ್‌ಬುಕ್‌ನಿಂದ ಕೆಲವು ಮಾಹಿತಿಗಳನ್ನು ಕೇಳಿದ್ದಾರೆ. ಆದರೆ ಕಂಪನಿಯು ಪ್ರತಿಕ್ರಿಯಿಸಿಲ್ಲ. ಶೈಲೇಶ್ ಕುಮಾರ್ ಪ್ರಕರಣದ ತನಿಖೆ 2021 ರಿಂದ ವಿಳಂಬವಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Asteroid: ಎಚ್ಚರ! ಇಂದು ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಲಿದೆ ಬುರ್ಜ್ ಖಲೀಫಾ ಗಾತ್ರದ ಕ್ಷುದ್ರಗ್ರಹ
ತನಿಖೆ ಎಲ್ಲಿಯವರೆಗೆ ತಲುಪಿದೆ?
ಕವಿತಾ ಅವರು ಹೈಕೋರ್ಟ್‌ನ ಸಹಾಯವನ್ನು ಕೋರಿದ್ದಾರೆ ಮತ್ತು ವಿಷಯದ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಸಂಸ್ಥೆಯು ಪೊಲೀಸರೊಂದಿಗೆ ಸಹಕರಿಸದಿದ್ದರೆ, ದೇಶಾದ್ಯಂತ ಅದರ ಸೇವೆಗಳನ್ನು ನಿಷೇಧಿಸುವ ಬಗ್ಗೆ ಯೋಚಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಕವಿತಾ ದಕ್ಷಿಣ ಕನ್ನಡ ಜಿಲ್ಲೆಯ ಬಿಕಾರನಕಟ್ಟೆಯ ನಿವಾಸಿಯಾಗಿದ್ದು. ಇದೀಗ ಪ್ರಕರಣದ ಮುಂದಿನ ವಿಚಾರಣೆ ಜೂನ್ 22 ರಂದು ನಡೆಯಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.