Asteroid: ಎಚ್ಚರ! ಇಂದು ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಲಿದೆ ಬುರ್ಜ್ ಖಲೀಫಾ ಗಾತ್ರದ ಕ್ಷುದ್ರಗ್ರಹ

Asteroid News: ಈ ಕ್ಷುದ್ರಗ್ರಹದ ಹೆಸರು 1994XD. ಇದರ ಅಗಲ 1200 ರಿಂದ 2700 ಅಡಿ. ಈ ಕ್ಷುದ್ರಗ್ರಹವು ತನ್ನದೇ ಆದ ಉಪಗ್ರಹವನ್ನು ಹೊಂದಿದ್ದು, ಅದು ಭೂಮಿಯ ಹತ್ತಿರದಿಂದ ಹಾದುಹೋಗಲಿದೆ. ಇದು ತುಂಬಾ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

Written by - Nitin Tabib | Last Updated : Jun 11, 2023, 06:44 PM IST
  • ಇನ್ನೊಂದೆಡೆ ಮುಂದಿನ 1000 ವರ್ಷಗಳವರೆಗೆ ಯಾವುದೇ ಒಂದು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲ ಎನ್ನುತ್ತಾರೆ ವಿಜ್ಞಾನಿಗಳು.
  • ಆದರೆ ಒಂದು ವೇಳೆ ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹಗಳ ದಿಕ್ಕಿನಲ್ಲಿ ಬದಲಾವಣೆಯಾದರೆ ಅವು ತುಂಬಾ ವಿನಾಶಕಾರಿ ಸಾಬೀತಾಗಬಹುದು.
  • ಬಾಹ್ಯಾಕಾಶದಿಂದ ಬರುವ ಯಾವುದೇ ಕ್ಷುದ್ರಗ್ರಹವು 460 ಅಡಿಗಳಿಗಿಂತ ದೊಡ್ಡದಾಗಿದ್ದು ಮತ್ತು ಭೂಮಿಯಿಂದ 74.8 ಕಿಮೀ ದೂರದಲ್ಲಿದ್ದರೆ, ಆಗ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
Asteroid: ಎಚ್ಚರ! ಇಂದು ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಲಿದೆ ಬುರ್ಜ್ ಖಲೀಫಾ ಗಾತ್ರದ ಕ್ಷುದ್ರಗ್ರಹ title=

Asteroid News: ಬಾಹ್ಯಾಕಾಶದಿಂದ ಅಪಾಯಕಾರಿ ವಿಪತ್ತೊಂದು ಭೂಮಿಯತ್ತ ಧಾವಿಸುತ್ತಿದೆ. ಹೌದು, ಇಂದು, ದೈತ್ಯ ಗಾತ್ರದ ಕ್ಷುದ್ರಗ್ರಹವು ಬಾಹ್ಯಾಕಾಶದಿಂದ ಭೂಮಿಯ ಕಡೆಗೆ ವೇಗವಾಗಿ ಚಲಿಸುತ್ತಿದೆ. ಯಾವ ಸಮಯದಲ್ಲಾದರೂ ಅದು ಭೂಮಿಯ ಸಮೀಪಕ್ಕೆ ಬರಬಹುದು. ಈ ಕ್ಷುದ್ರಗ್ರಹದ ಗಾತ್ರವು ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತಿದೆ. ಈ ಕ್ಷುದ್ರಗ್ರಹ ಭೂಮಿಯಿಂದ 31 ಲಕ್ಷ ಕಿಲೋಮೀಟರ್ ದೂರದಿಂದ ಹಾದುಹೋಗಲಿದೆ. ಇದು ಚಂದ್ರ ಮತ್ತು ಭೂಮಿಯ ನಡುವಿನ ಅಂತರಕ್ಕಿಂತ ಸುಮಾರು 8 ಪಟ್ಟು ಹೆಚ್ಚಾಗಿದೆ.

ಕ್ಷುದ್ರಗ್ರಹವು ತನ್ನದೇ ಆದ ಚಂದ್ರನನ್ನು ಹೊಂದಿದೆ
ಯಾವುದೇ ಒಂದು ಸಮಯದಲ್ಲಿ ಈ ಕ್ಷುದ್ರಗ್ರಹದ ದಿಕ್ಕಿನಲ್ಲಿ ಬದಲಾವಣೆಯಾದರೆ, ಅದು ಭೂಮಿಯ ಮೇಲೆ ಉಂಟುಮಾಡುವ ವಿನಾಶ ಊಹಿಸುವುದು ಕಷ್ಟಸಾಧ್ಯ. ಈ ಕ್ಷುದ್ರಗ್ರಹದ ಹೆಸರು 1994XD. ಇದರ ಅಗಲ 1200 ರಿಂದ 2700 ಅಡಿ. ಈ ಕ್ಷುದ್ರಗ್ರಹವು ತನ್ನದೇ ಆದ ಚಂದ್ರನನ್ನು ಹೊಂದಿದ್ದು, ಅದರೊಂದಿಗೆ ಅದು ಭೂಮಿಯ ಹತ್ತಿರದಿಂದ ಹಾದುಹೋಗಲಿದೆ. ಅದಕ್ಕೆ ತನ್ನದೇ ಆದ ಚಂದ್ರ ಇರುವುದರಿಂದ  ಇದೊಂದು ತುಂಬಾ ಅಪಾಯಕಾರಿ ಪರಿಸ್ಥಿತಿ ಎಂಬುದು ತಜ್ಞರ ಅಭಿಮತವಾಗಿದೆ. ಏಕೆಂದರೆ ಈ ಕ್ಷುದ್ರಗ್ರಹದ ಚಂದ್ರ ಅದರ ಸುತ್ತ ಸುತ್ತುತ್ತಿದ್ದಾನೆ.

ನಾಸಾ ಪ್ರಕಾರ, ಈ ಕ್ಷುದ್ರಗ್ರಹವು ಭೂಮಿಯಿಂದ ದೂರದಿಂದ ಹಾದುಹೋಗಲಿದೆ. ಆದರೂ ಕೂಡ ಇದು ಭೂಮಿಗೆ ಅಪಾಯಕಾರಿಯಾಗಿದ್ದು. ಅದರ ಗಾತ್ರವು ಮಾರಣಾಂತಿಕತೆಯನ್ನು ಸಾಬೀತುಪಡಿಸಬಹುದು.

ಇದನ್ನೂ ಓದಿ-Parents Alert! ಆನ್ಲೈನ್ ಗೇಮ್ ಆಡಿ 52 ಲಕ್ಷ ರೂ. ಉಡಾಯಿಸಿದ 13 ವರ್ಷದ ಬಾಲಕಿ, 5 ರೂ.ಗಳಿಗೆ ಕುಸಿದ ತಾಯಿಯ ಖಾತೆಯ ಬ್ಯಾಲೆನ್ಸ್

ಇನ್ನೊಂದೆಡೆ ಮುಂದಿನ 1000 ವರ್ಷಗಳವರೆಗೆ ಯಾವುದೇ ಒಂದು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಒಂದು ವೇಳೆ ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹಗಳ ದಿಕ್ಕಿನಲ್ಲಿ ಬದಲಾವಣೆಯಾದರೆ ಅವು ತುಂಬಾ ವಿನಾಶಕಾರಿ ಸಾಬೀತಾಗಬಹುದು. ಬಾಹ್ಯಾಕಾಶದಿಂದ ಬರುವ ಯಾವುದೇ ಕ್ಷುದ್ರಗ್ರಹವು 460 ಅಡಿಗಳಿಗಿಂತ ದೊಡ್ಡದಾಗಿದ್ದು ಮತ್ತು ಭೂಮಿಯಿಂದ 74.8 ಕಿಮೀ ದೂರದಲ್ಲಿದ್ದರೆ, ಆಗ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ-ICC World Cup 2023 ಹಾಗೂ Asia Cup ಗಳ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಿದೆ ಡಿಸ್ನಿ+ ಹಾಟ್ ಸ್ಟಾರ್

ಕ್ಷುದ್ರಗ್ರಹಗಳು ಮಂಗಳ ಮತ್ತು ಗುರುಗಳ ನಡುವೆ ಬರುತ್ತವೆ
ಸೌರವ್ಯೂಹದ ಗ್ರಹಗಲಾಗಿರುವ ಮಂಗಳ ಮತ್ತು ಗುರು ಗ್ರಹಗಳ ನಡುವೆ ಹಾದುಹೋಗುವ ಕ್ಷುದ್ರಗ್ರಹಗಳು ಭೂಮಿಯತ್ತ ಬರುತ್ತವೆ. ಈ ಹಿಂದೆ DART ಮಿಷನ್ ಮೂಲಕ, ಭೂಮಿಯತ್ತ ಧಾವಿಸುತ್ತಿದ್ದ ಒಂದು ಕ್ಷುದ್ರಗ್ರಹದ ದಿಕ್ಕನ್ನು ನಾಸಾ ಬದಲಿಸಿತ್ತು. ಬಾಹ್ಯಾಕಾಶದಲ್ಲಿಯೇ ಅದಕ್ಕೆ ಡಿಕ್ಕಿ ಹೊಸೆಸುವ ಮೂಲಕ ಕ್ಷುದ್ರಗ್ರಹದ ದಿಕ್ಕನ್ನು ಬದಲಾಯಿಸಲಾಗಿತ್ತು. ಭವಿಷ್ಯದಲ್ಲಿ ಕ್ಷುದ್ರಗ್ರಹವು ಭೂಮಿಯ ಕಡೆಗೆ ಬಂದರೆ, ರಾಕೆಟ್‌ನಿಂದ ದಾಳಿ ಮಾಡುವ ಮೂಲಕ ಅದನ್ನು ನಾಶಪಡಿಸಬೇಕು ಅಥವಾ ಬಾಹ್ಯಾಕಾಶದಲ್ಲಿಯೇ ಅದರ ದಿಕ್ಕನ್ನು ಬದಲಾಯಿಸಬಹುದು ಎಂಬುದರ ಕುರಿತು ಈ ಪ್ರಯೋಗ ನಡೆಸಲಾಗಿತ್ತು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News