Toll Tax Collection with Number Plate: ಇನ್ಮುಂದೆ FasTag ಅಗತ್ಯವಿಲ್ಲ: ಈ ರೀತಿ ಮಾಡಿದ್ರೆ ಖಾತೆಯಿಂದ ಕಡಿತವಾಗುತ್ತೆ ಟೋಲ್ ಟ್ಯಾಕ್ಸ್
Toll Tax Collection with Number Plate: ಈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಟೋಲ್ ಪ್ಲಾಜಾದಲ್ಲಿ ವಾಹನಗಳ ಕಾಯುವ ಅವಧಿಯು ಕಡಿಮೆಯಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಹೇಳಿಕೊಂಡಿದೆ. ಪ್ರಸ್ತುತ, ದೇಶದಲ್ಲಿ ಸುಮಾರು 97 ಪ್ರತಿಶತದಷ್ಟು ಟೋಲ್ ಸಂಗ್ರಹವನ್ನು ಫಾಸ್ಟ್ಯಾಗ್ ಮೂಲಕ ಮಾಡಲಾಗುತ್ತಿದೆ. ಆದರೆ ಟೋಲ್ ಪ್ಲಾಜಾಗಳು ಜಾಮ್ ಆಗುತ್ತವೆ.
Toll Tax Collection with Number Plate: ಶೀಘ್ರದಲ್ಲೇ ದೇಶದಲ್ಲಿ ಟೋಲ್ ತೆರಿಗೆ ಸಂಗ್ರಹಿಸುವ ವಿಧಾನ ಬದಲಾಗಲಿದೆ. ಪ್ರಸ್ತುತ ಟೋಲ್ ಸಂಗ್ರಹಕ್ಕಾಗಿ ದೇಶಾದ್ಯಂತ ಫಾಸ್ಟ್ಯಾಗ್ ಅನ್ನು ಬಳಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಈಗ ಹೆದ್ದಾರಿಯಲ್ಲಿನ ಟೋಲ್ ಪ್ಲಾಜಾ ರದ್ದುಪಡಿಸಲು ಚಿಂತನೆ ನಡೆಸಿದೆ. ಬದಲಾಗಿ ಕ್ಯಾಮೆರಾ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದಿದೆ. ಈ ಪ್ರಕ್ರಿಯೆಯಲ್ಲಿ, ವಾಹನಗಳ ನಂಬರ್ ಪ್ಲೇಟ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ಬ್ಯಾಂಕ್ ಖಾತೆಯಿಂದ ಟೋಲ್ ಕಡಿತಗೊಳಿಸಲಾಗುತ್ತದೆ. ಈ ಕ್ಯಾಮೆರಾಗಳನ್ನು ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ (ANPR) ಕ್ಯಾಮೆರಾಗಳು ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: 2022ರಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ 5 ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿವು .!
ಈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಟೋಲ್ ಪ್ಲಾಜಾದಲ್ಲಿ ವಾಹನಗಳ ಕಾಯುವ ಅವಧಿಯು ಕಡಿಮೆಯಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಹೇಳಿಕೊಂಡಿದೆ. ಪ್ರಸ್ತುತ, ದೇಶದಲ್ಲಿ ಸುಮಾರು 97 ಪ್ರತಿಶತದಷ್ಟು ಟೋಲ್ ಸಂಗ್ರಹವನ್ನು ಫಾಸ್ಟ್ಯಾಗ್ ಮೂಲಕ ಮಾಡಲಾಗುತ್ತಿದೆ. ಆದರೆ ಟೋಲ್ ಪ್ಲಾಜಾಗಳು ಜಾಮ್ ಆಗುತ್ತವೆ.
ANPR ಹೇಗೆ ಕೆಲಸ ಮಾಡುತ್ತದೆ?
ದೇಶದಾದ್ಯಂತ ಎಲ್ಲಾ ಹೆದ್ದಾರಿಗಳಿಂದ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲಾಗುವುದು ಎಂದು ರಸ್ತೆ ಸಚಿವಾಲಯ ಹೇಳಿದೆ. ಟೋಲ್ ಪ್ಲಾಜಾದ ಸ್ಥಳದಲ್ಲಿ ANPR ಅನ್ನು ಸ್ಥಾಪಿಸಲಾಗುವುದು. ಇದು ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಿ, ಬ್ಯಾಂಕ್ ಖಾತೆಯಿಂದ ಟೋಲ್ ತೆರಿಗೆಯನ್ನು ಕಡಿತಗೊಳಿಸುತ್ತದೆ. ಹೆದ್ದಾರಿಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ವ್ಯವಸ್ಥೆಯು ನಂಬರ್ ಪ್ಲೇಟ್‌ನ ಚಿತ್ರವನ್ನು ತೆಗೆದುಕೊಳ್ಳುವ ಮೂಲಕ ವಿಳಾಸದ ದೂರವನ್ನು ಕಂಡುಹಿಡಿಯುತ್ತದೆ. ಅದಕ್ಕೆ ಅನುಗುಣವಾಗಿ ಟೋಲ್ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ.
ಇದನ್ನೂ ಓದಿ: DK Shivakumar challenges BJP: ಮೊದಲು ಪಾಲಿಕೆ ಚುನಾವಣೆ ನಡೆಸಲಿ: ಬಿಜೆಪಿಗೆ ಡಿಕೆಶಿ ಸವಾಲ್
ಪೈಲಟ್ ಯೋಜನೆ:
ಅದರ ಪರೀಕ್ಷೆಗಾಗಿ ಸರ್ಕಾರ ಪ್ರಾಯೋಗಿಕ ಯೋಜನೆಯನ್ನು ನಡೆಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೆಪ್ಟೆಂಬರ್‌ನಲ್ಲಿ ತಿಳಿಸಿದ್ದರು. ಈ ವ್ಯವಸ್ಥೆಯು ವಾಹನಗಳ ದೂರದ ಆಧಾರದ ಮೇಲೆ ಟೋಲ್ ಅನ್ನು ತೆಗೆದುಕೊಳ್ಳುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.