2022ರಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ 5 ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿವು .!

 35 ಸಾವಿರ ರೂಪಾಯಿಯೊಳಗಿನ ಫೋನ್ ಗಳನ್ನು ನೋಡುವುದಾದರೆ  Nothing Phone 1, Pixel 6a, OnePlus Nord 2T ಸೇರಿದಂತೆ ಹಲವು  ಸ್ಮಾರ್ಟ್‌ಫೋನ್‌ಗಳು ಈ ಲಿಸ್ಟ್ ನಲ್ಲಿವೆ.  ಈ ಫೋನ್ ಗಳು ಭಾರೀ ಜನಪ್ರಿಯವಾಗಿದ್ದವು. 

Written by - Ranjitha R K | Last Updated : Dec 12, 2022, 03:57 PM IST
  • 2022 ರ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳಿವು
  • ಬೆಸ್ಟ್ 5 ಫೋನೆಗಳು ಯಾವುವು ಗೊತ್ತಾ ?
  • ಈ ವರ್ಷದ ಅತ್ಯಂತ ಸ್ಟೈಲಿಶ್ ಫೋನ್‌ ನಥಿಂಗ್ ಫೋನ್ 1
2022ರಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ 5  ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿವು .!  title=
Top 5 Smartphones Under 35000

ಬೆಂಗಳೂರು : 35 ಸಾವಿರ ರೂಪಾಯಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಈ ಶ್ರೇಣಿಯಲ್ಲಿ ಉನ್ನತ ವೈಶಿಷ್ಟ್ಯಗಳೊಂದಿಗೆ ಅಪ್ಪರ್ ಮಿಡ್ ರೆಂಜಿನ ಸಾಧನಗಳು ಲಭ್ಯವಿವೆ.  ಈ ಸ್ಮಾರ್ಟ್‌ಫೋನ್‌ಗಳು  ಅತ್ಯುತ್ತಮ ಡಿಸೈನ್ ಹೊಂದಿವೆ. 35 ಸಾವಿರ ರೂಪಾಯಿಯೊಳಗಿನ ಫೋನ್ ಗಳನ್ನು ನೋಡುವುದಾದರೆ  Nothing Phone 1, Pixel 6a, OnePlus Nord 2T ಸೇರಿದಂತೆ ಹಲವು  ಸ್ಮಾರ್ಟ್‌ಫೋನ್‌ಗಳು ಈ ಲಿಸ್ಟ್ ನಲ್ಲಿವೆ.  ಈ ಫೋನ್ ಗಳು ಭಾರೀ ಜನಪ್ರಿಯವಾಗಿದ್ದವು. 

ನಥಿಂಗ್ ಫೋನ್ 1 : 
ಈ ವರ್ಷದ ಅತ್ಯಂತ ಸ್ಟೈಲಿಶ್ ಫೋನ್‌ ವಿಷಯಕ್ಕೆ ಬಂದರೆ ನಥಿಂಗ್ ಫೋನ್ 1  ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲಿದೆ. ಇದು ನೋಡುವುದಕ್ಕೆ ಮಾತ್ರವಲ್ಲ, ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ವಿಷಯದಲ್ಲಿ ಅತ್ಯುತ್ತಮವಾಗಿದೆ.  ಈ ಫೋನ್ ನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 32,999 ರೂ. Sapdragon 778G ಚಿಪ್‌ಸೆಟ್ ಫೋನ್‌ನಲ್ಲಿ ಲಭ್ಯವಿದೆ. ಪ್ರಬಲ ಬ್ಯಾಟರಿಯನ್ನು ಈ ಫೋನ್ ಹೊಂದಿದ್ದು,  ಉತ್ತಮ ಕ್ಯಾಮೆರಾ ಕೂಡಾ ಈ ಫೋನ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ : ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ ಹೊಸ ಟೊಯೋಟಾ ಗ್ರ್ಯಾಂಡ್ ಹೈಲ್ಯಾಂಡರ್ .!

ಗೂಗಲ್ ಪಿಕ್ಸೆಲ್ 6 ಎ : 
ಪಿಕ್ಸೆಲ್ 6 ಗೆ ಹೋಲಿಸಿದರೆ ಗೂಗಲ್ ಪಿಕ್ಸೆಲ್ 6 ಎ ಅಗ್ಗದ ಸ್ಮಾರ್ಟ್‌ಫೋನ್ ಆಗಿದೆ. ಫೋನ್‌ನಲ್ಲಿ 60hz ಡಿಸ್ಪ್ಲೇ ಲಭ್ಯವಿದೆ. ಫೋನ್  ಫ್ಲ್ಯಾಗ್‌ಶಿಪ್ ಮಟ್ಟದ ಕ್ಯಾಮೆರಾವನ್ನು ಹೊಂದಿದೆ. ಫೋನ್ 6.1-ಇಂಚಿನ FHD + ಡಿಸ್ಪ್ಲೇ ಹೊಂದಿದೆ. ಫೋನ್ ನಲ್ಲಿ 12.2MP ಪ್ರಾಥಮಿಕ ಕ್ಯಾಮೆರಾ ಮತ್ತು  12MPಯ ಸೆಕೆಂಡರಿ ಕ್ಯಾಮೆರಾ ಕೂಡಾ ಇರಲಿದೆ. ಇದಲ್ಲದೇ ಮುಂಭಾಗದಲ್ಲಿ 8MP ಸೆಲ್ಫಿ ಶೂಟರ್ ಲಭ್ಯವಿರಲಿದೆ. 6 GB RAM + 128 GB ಸ್ಟೋರೇಜ್ ವೆರಿಯೇಂಟ್ ನ ಬೆಲೆ 29,999 ರೂಪಾಯಿ.

 ಶಿಯೋಮಿ 11ಟಿ  ಪ್ರೊ 5ಜಿ ಹೈಪರ್‌ಫೋನ್ :
 ಶಿಯೋಮಿ 11ಟಿ  ಪ್ರೊ 5ಜಿ ಹೈಪರ್‌ಫೋನ್ ಸಾಕಷ್ಟು  ಜನಪ್ರಿಯ ಫೋನ್ ಆಗಿದೆ.  ಈ ಫೋನ್ 120W ಹೈಪರ್‌ಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ.  ಇದರ 17 ನಿಮಿಷಗಳಲ್ಲಿ 5000mAh ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಫೋನ್ 6.7 ಇಂಚಿನ ಡಿಸ್ಪ್ಲೇ, 108MP ಕ್ಯಾಮೆರಾವನ್ನು ಹೊಂದಿದೆ. 8 GB RAM + 128 GB ಸ್ಟೋರೇಜ್ ರೂಪಾಂತರದ ಬೆಲೆ 33,990 ರೂ.

ಇದನ್ನೂ ಓದಿ : ನಡುಗುವ ಕೈಗಳನ್ನು ಚಿಟಿಕೆಯಲ್ಲಿ ಬೆಚ್ಚಗಾಗಿಸಲು ಕೈಗೆಟುಕುವ ದರದಲ್ಲಿ ನಿಮ್ಮದಾಗಿಸಿ ಹ್ಯಾಂಡ್ ವಾರ್ಮರ್

iQOO ನಿಯೋ 6 :
iQOO ನಿಯೋ 6 ಮಾರಾಟವೂ ಚೆನ್ನಾಗಿತ್ತು. ಫೋನ್ 6.2-ಇಂಚಿನ ಡಿಸ್ಪ್ಲೇ,  64MP ಕ್ಯಾಮೆರಾ ಮತ್ತು  4700mAh ಬ್ಯಾಟರಿಯನ್ನು ಹೊಂದಿದೆ. 8 GB RAM + 128 GB  ಸ್ಟೋರೇಜ್ ವೆರಿಯೇಂಟ್ ಬೆಲೆ 28,999 ರೂ. 

ಒನ್  ಪ್ಲಸ್ ನೋರ್ಡ್  2 ಟಿ :
ಒನ್  ಪ್ಲಸ್ ನೋರ್ಡ್  2 ಟಿ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ನೋರ್ಡ್  2   ಹಿಟ್ ಆದ ನಂತರ Nord 2T ಸೂಪರ್ ಹಿಟ್ ಆಗಿತ್ತು.  ಫೋನ್ 6.7-ಇಂಚಿನ ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು 80W ವೇಗದ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 4,500mAh ಬ್ಯಾಟರಿಯನ್ನು ಹೊಂದಿದೆ. 8GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 28,999 ರೂಪಾಯಿ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News