FAU-G Launch - ನವದೆಹಲಿ:  ಕೊನೆಗೂ ದೀರ್ಘಕಾಲದ ನಿರೀಕ್ಷೆಯ ಬಳಿಕ ಇದೀಗ ಹೊಸ FAU-G ಮೊಬೈಲ್ ಗೇಮ್ ಬಿಡುಗಡೆ ಮಾಡಲಾಗಿದೆ.  nCore Games ಈ ಕುರಿತು  ಅಧಿಕೃತ ಘೋಷಣೆ ಮಾಡಿದೆ. ಈ ಆಟದ ಬ್ರಾಂಡ್ ಅಂಬಾಸಿಡರ್ ಅಕ್ಷಯ್ ಕುಮಾರ್ ಕೂಡ ಇದನ್ನು ಖಚಿತಪಡಿಸಿದ್ದಾರೆ. ಈ ಮೊದಲು ಈ ಆಟವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ.


COMMERCIAL BREAK
SCROLL TO CONTINUE READING

ಇಂದು ಬೆಳಗ್ಗೆ 11 ಗಂಟೆಗೆ ಅಕ್ಷಯ್ ಕುಮಾರ್ FAU-G ಗೇಮ್ ಲಾಂಚ್ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬರೆದುಕೊಂಡಿರುವ ಅಕ್ಷಯ್ ಕುಮಾರ್ FAU-G (Fearless And United Guards) ಶತ್ರುಗಳನ್ನು ಎದುರಿಸಿ ಹಾಗೂ ದೇಶಕ್ಕಾಗಿ ಯುದ್ಧವಾಡಿ ಎಂದು ಹೇಳಿದ್ದಾರೆ.


PUBG ಗೆ ಟಕ್ಕರ್ ನೀಡಿದ FAU-G: ಮೂರೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ನೋಂದಣಿ


ಏನಿದು FAU-G?
 FAU-G ಎಂದರೆ Fearless and United Guards. ಇದೊಂದು ಆಕ್ಷನ್ ಗೇಮ್ ಆಗಿದ್ದು, ಇದನ್ನು ಭಾರತೀಯ ಮೊಬೈಲ್ ಗೇಮ್ ತಯಾರಕ ಕಂಪನ್ nCore Games ಅಭಿವೃದ್ಧಿಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಈ ಆಟದ ಘೋಷಣೆ ಮಾಡಲಾಗಿತ್ತು ( PUBG Mobile Ban ಆದ ತಕ್ಷಣ). ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್, ಈ ಆಟದಿಂದ ಬರುವ ಶೇ. 20 ರಷ್ಟು ಭಾಗವನ್ನು 'ಭಾರತ್ ಕೆ ವೀರ್' ಟ್ರಸ್ಟ್ ಗೆ ಕೊಡುಗೆಯಾಗಿ ನೀಡಲಾಗುವುದು ಎಂದು ಹೇಳಿದ್ದರು.


ಇದನ್ನು ಓದಿ- PUBGಗೆ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ FAU-G ಗೇಮ್, ಹೇಗಿರಲಿದೆ ಫೌಜಿ..?, ಅಕ್ಷಯ್ ಕುಮಾರ್ ಹೇಳಿದ್ದೇನು..?


ಗಲ್ವಾನ್ ಕಣಿವೆ ಘರ್ಷಣೆ ಆಧರಿಸಿ ಇರಲಿದೆ 
ಈ ಕುರಿತು ಮಾತನಾಡಿರುವ nCore ಕಂಪನಿಯ ಸಹ ಸಂಸ್ಥಾಪಕ Vishal Gondal, ಈ ಆಟದ ಮೊದಲ ಲೆವೆಲ್ ಅಥವಾ ಫಸ್ಟ್ ಫೆಸ್ ಗಲ್ವಾನ್ ಕಣಿವೆ ಘರ್ಷಣೆಯನ್ನು ಆಧರಿಸಿ ಇರಲಿದೆ ಎಂದಿದ್ದಾರೆ. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಹಿಂಸಾತ್ಮಕ ಘರ್ಷಣೆ ಸಂಭವಿಸಿತ್ತು. ಆದರೆ ಈ ಆಟವನ್ನು PUB-G MOBILE ಆಟದ ದೇಸಿ ರಿಪ್ಲೇಸ್ಮೆಂಟ್ ಎಂದೇ ಹೇಳಲಾಗುತ್ತಿದೆ. ಆದರೆ, ಈ ಎರಡೂ ಆಟಗಳು ಪರಸ್ಪರ ಭಿನ್ನವಾಗಿವೆ. ಎಕೆಂದರ FAU-G ಒಂದು ಆಕ್ಷನ್ ಗೇಮ್ ಆಗಿದ್ದರೆ, PUB-G ಬ್ಯಾಟಲ್ ರಾಯಲ್ ಗೇಮ್ ಆಗಿದೆ.


ಇದನ್ನು ಓದಿ-PUBG Mobile India ವೆಬ್ ಸೈಟ್ ಮೇಲೆ ಕಾಣಿಸಿಕೊಂಡ Download Link! ನಿಜಾನಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.