PUBG Mobile India ವೆಬ್ ಸೈಟ್ ಮೇಲೆ ಕಾಣಿಸಿಕೊಂಡ Download Link! ನಿಜಾನಾ?

ಪಬ್ ಜಿ ಮೊಬೈಲ್ ಆಟದ ಅಭಿಮಾನಿಗಳು ಹೇಳುವ ಪ್ರಕಾರ, ಅವರು ಕಂಪನಿಯ ಅಧಿಕೃತ ವೆಬ್ ಸೈಟ್ ಮೇಲೆ APK ಡೌನ್ಲೋಡ್ ಲಿಂಕ್ ನೋಡಿರುವುದಾಗಿ ಹೇಳಿದ್ದಾರೆ.

Last Updated : Nov 21, 2020, 05:03 PM IST
  • PUBG Mobile India ವೆಬ್ ಸೈಟ್ ಮೇಲೆ Download Link ಕಾಣಿಸಿಕೊಂಡಿದೆ.
  • ಇದನ್ನು ಗಮನಿಸಿರುವ ಕೆಲ ಬಳಕೆದಾರರು ಈ ಮಾಹಿತಿ ಹಂಚಿಕೊಂಡಿದ್ದಾರೆ.
  • ಆದರೆ ಈ ಕುರಿತು ಇದುವರೆಗೆ PUBG ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
PUBG Mobile India ವೆಬ್ ಸೈಟ್ ಮೇಲೆ ಕಾಣಿಸಿಕೊಂಡ Download Link! ನಿಜಾನಾ? title=

ನವದೆಹಲಿ:  PUBG Mobile ಅನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು. ನಿಷೇಧಕ್ಕೆ ಒಳಗಾದ ದಿನದಿಂದಲೇ ಕಂಪನಿ ಭಾರತದಲ್ಲಿ ಪುನಃ ಎಂಟ್ರಿ ನೀಡಲು ನಿರಂತರವಾಗಿ ಪ್ರಯತ್ನ ಮುಂದುವರೆಸಿದೆ. ಪಬ್ ಜಿ ಭಾರತದಲ್ಲಿ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. Tencent ಕಂಪನಿಯಿಂದ ಸಂಪೂರ್ಣವಾಗಿ ಬೇರ್ಪಟ್ಟ ಬಳಿಕ PUBG Corpನ ಮೂಲ ಕಂಪನಿ Karfton PUBG ಆಟವನ್ನು ಹೋಸ್ಟ್ ಮಾಡಲು Microsoft Azure ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಇದನ್ನು ಓದಿ- ಚೀನಾ ಮೂಲದ PUBG Gameಗೆ ಸೆಡ್ಡುಹೊಡೆಯಲು ಬಂತು Akshay Kumar ಅವರ FAU-G

ಈ ನೂತನ ಒಪ್ಪಂದದ ಬಳಿಕ ಕಂಪನಿಗೆ ಚೈನೀಸ್ ಮೂಲದ ಕಂಪನಿಯಿಂದ ಸಂಪೂರ್ಣ ಮುಕ್ತಿ ಸಿಗುವುದರ ಜೊತೆಗೆ ಬಳಕೆದಾರರ ದತ್ತಾಂಶ ಸಂಗ್ರಹಣೆಗಾಗಿ ಯಾವುದೇ ಚೀನಾ ಸರ್ವರ್ ಅನ್ನು ಅವಲಂಭಿಸಬೇಕಾಗಿಲ್ಲ. ಚೀನಾ ಸರ್ವರ್ ಜೊತೆಗೆ ಸಂಪರ್ಕ ಹೊಂದಿರುವ ಕಾರಣ PUBG ಅನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ವರದಿಗಳ ಪ್ರಕಾರ ಈ ಆಪ್ ಅನ್ನು ಭಾರತದಲ್ಲಿ ರೀಲಾಂಚ್ ಮಾಡಲು ಕೇಂದ್ರ ಸರ್ಕಾರದ ಜೊತೆಗೆ ಕಂಪನಿ ಮಾತುಕತೆ ನಡೆಸಿದ್ದು, ಒಮ್ಮತ ಕೂಡ ಮೂಡಿದೆ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದ PUBG Corp, ತನ್ನ ಬ್ಯಾಟಲ್ ರಾಯಲ್ ಅನ್ನು ವಿಶೇಷವಾಗಿ ಭಾರತೀಯ ರೂಪಾಂತರದಲ್ಲಿ ಪರಿಚಯಿಸಲು ಪ್ರಯತ್ನಗಳು ನಡೆದಿವೆ ಎಂದಿತ್ತು. ಪಬ್ ಜಿ ಮೊಬೈಲ್ ಇಂಡಿಯಾ ಈ ಕುರಿತು ಈಗಾಗಲೇ ಹಲವು ಟೀಸರ್ ಗಳನ್ನು ಸಹ ಬಿಡುಗಡೆ ಮಾಡಿದ್ದು, ಶೀಘ್ರವೇ ಸಂಪೂರ್ಣ ಟೀಸರ್ ಬಿಡುಗಡೆಯಾಗುವ ನಿರೀಕ್ಷೆ ಇದೆ. MySmartPrice ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಕಂಪನಿಯ ಅಧಿಕೃತ ವೆಬ್ ಸೈಟ್ ಮೇಲೆ ಕೆಲ ಬಳಕೆದಾರರು PUBG Mobile India APK ಡೌನ್ ಲೋಡ್ ಲಿಂಕ್ ಗಮನಿಸಿದ್ದಾರೆ ಎನ್ನಲಾಗಿದೆ. ಈ ಲಿಂಕ್ ನಲ್ಲಿ ಒಟ್ಟು ಎರಡು ಬಟನ್ ಗಳನ್ನು ನೀಡಲಾಗಿದ್ದು, ಒಂದು ಬಟನ್ ಮೇಲೆ ಗೂಗಲ್ ಪ್ಲೇ ಸ್ಟೋರ್ ಹಾಗೂ ಎರಡನೇ ಬಟನ್ ಮೇಲೆ APK ಫೈಲ್ ಡೌನ್ ಲೋಡ್ ಲೇಬಲ್ ಇತ್ತು ಎನ್ನಲಾಗಿದೆ.

ಇದನ್ನು ಓದಿ-ಭಾರತದಲ್ಲಿನ PUBG ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್..! ಇಂದಿನಿಂದಲೇ ಈ ನಿಯಮ ಜಾರಿ..!

ಆದರೆ, ಈ ಬಟನ್ ಗಳಿಗೆ ಯಾವುದೇ ಲಿಂಕ್ ಅಟ್ಯಾಚ್ ಆಗಿರಲಿಲ್ಲ ಹಾಗೂ ಬಟನ್ ಗಳ ಮೇಲೆ ಕ್ಲಿಕ್ಕಿಸಿದಾಗ ಅವು ವಿವಿಧ PUBG Mobile ಪೇಜ್ ಗಳಿಗೆ ರೀಡೈರೆಕ್ಟ್ ಮಾಡಲಾಗುತ್ತಿತ್ತು ಎಂದು ಬಳಕೆದಾರರು ಹೇಳಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ PUBG Mobile India Comming Soon ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತಿತ್ತು ಎಂದು ಬಹುತೇಕ ಬಳಕೆದಾರರು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ APK ಡೌನ್ ಲೋಡ್ ಗುಂಡಿ ಒತ್ತಿದಾಗ ಅದು PUBG Mobile India Facebook ಪುಟಕ್ಕೆ ರೀಡೈರೆಕ್ಟ್ ಆಗುತ್ತಿತ್ತು ಎಂದು ಬಳಕೆದಾರರು ಹೇಳಿದ್ದಾರೆ.

ಇದನ್ನು ಓದಿ- PUBG ಅಭಿಮಾನಿಗಳಿಗೊಂದು ಸಂತಸದ ಸುದ್ದಿ, ಕಂಪನಿ ಕೈಗೊಂಡಿದೆ ಈ ನಿರ್ಧಾರ

ಇದರರ್ಥ ಇದುವರೆಗೆ ಯಾವುದೇ ಡೌನ್ ಲೋಡ್ ಲಿಂಕ್ ನೀಡಲಾಗಿಲ್ಲ ಹಾಗೂ ಸದ್ಯಕ್ಕೆ ಕಾಯುವುದೇ ಒಂದು ಪರ್ಯಾಯವಾಗಿದೆ. ಭಾರತ ಸರ್ಕಾರದಿಂದ ಆಪ್ ರೀಎಂಟ್ರಿಗೆ ಹಸಿರು ನಿಶಾನೆ ಸಿಕ್ಕಿದೆಯೋ ಇಲ್ಲವೋ ಎಂಬುದರ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

Trending News