Mini Water Heater: ಚಳಿಗಾಲದ ಆರಂಭದೊಂದಿಗೆ, ಗೀಸರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಅಂತೆಯೇ, ಚಳಿಗಾಲದಲ್ಲಿ ಕಂಪನಿಗಳು ಗೀಸರ್ ಬೆಲೆಯನ್ನು ಹೆಚ್ಚಿಸುತ್ತವೆ.  ಚಳಿಗಾಲದಲ್ಲಿ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ನೀರಿನಲ್ಲಿ ಕೆಲಸ ಮಾಡುವುದು. ಈ ಋತುವಿನಲ್ಲಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಎಂದರೆ ಅಬ್ಬಬ್ಬಾ... ಈ ಕೆಲಸ ಹೇಗ್ ಮಾಡೋದು ಅನ್ನೋರೇ ಹೆಚ್ಚು. ಆದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಲೇಖನದಲ್ಲಿ ನಾವು ನಿಮಗಾಗಿ ಒಂದು ಪುಟ್ಟ ಶಕ್ತಿಯುತವಾದ ಬಜೆಟ್ ಫ್ರೆಂಡ್ಲಿ ಗ್ಯಾಜೆಟ್ ಕುರಿತು ಮಾಹಿತಿ ನೀಡಲಿದ್ದೇವೆ. ಇದೊಂದು ಮಿನಿ ವಾಟರ್ ಹೀಟರ್ ಆಗಿದ್ದು, ಟ್ಯಾಪ್‌ನೊಂದಿಗೆ ಇದನ್ನು ಫಿಟ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ನೀರು ಬಿಸಿಯಾಗುತ್ತೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದನ್ನು ನಲ್ಲಿಯೊಂದಿಗೆ ಸುಲಭವಾಗಿ ಫಿಟ್ ಮಾಡಬಹುದು. ಮಾತ್ರವಲ್ಲ ಇದರ ಬೆಲೆಯೂ ಕೂಡ ಕಡಿಮೆ.


COMMERCIAL BREAK
SCROLL TO CONTINUE READING

ಈ ಮಿನಿ ಎಲೆಕ್ಟ್ರಿಕ್ ವಾಟರ್ ಹೀಟರ್ ಹೇಗೆ ಕೆಲಸ ಮಾಡುತ್ತದೆ?
ಎಂಆರ್ ವರ್ಲ್ಡ್‌ಶಾಪ್ ಡಿಜಿಟಲ್ ಇನ್‌ಸ್ಟಂಟ್ ಎಲೆಕ್ಟ್ರಿಕ್ ವಾಟರ್ ಹೀಟರ್ ಮೂಲಕ ನೀರು ಕೆಲವೇ ಕ್ಷಣಗಳಲ್ಲಿ ಬಿಸಿಯಾಗುತ್ತದೆ.  ಗೀಸರ್‌ಗೆ ಹೋಲಿಸಿದರೆ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಹೀಟರ್ ಅನ್ನು ಟ್ಯಾಪ್ನಲ್ಲಿಯೇ ಅಳವಡಿಸಲಾಗಿದೆ. ಇದರಿಂದ ನೀವು ಟ್ಯಾಪ್ ಆನ್ ಮಾಡಿದ ಕೂಡಲೇ ಬಿಸಿ ನೀರು ಬರುತ್ತದೆ. ಈ ಹೀಟರ್ ಅನ್ನು ನಿಮ್ಮ ಅಡುಗೆಮನೆಯಲ್ಲಿ ಅಥವಾ ಕೈ, ಬಾಯಿ ತೊಳೆಯಲು ಬಳಸು ಸಿಂಕ್ ನ ಟ್ಯಾಪ್‌ಗಳಲ್ಲಿ ಸುಲಭವಾಗಿ ಫಿಟ್ ಮಾಡಬಹುದು. ಇದು ಗೀಸರ್‌ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. 


ಇದನ್ನೂ ಓದಿ- Light Bill Fraud: ನೀವೂ ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತೀರಾ? ಈ ಸುದ್ದಿ ಓದಿ


ಈ ಮಿನಿ ಎಲೆಕ್ಟ್ರಿಕ್ ವಾಟರ್ ಹೀಟರ್‌ನ  ವೈಶಿಷ್ಟ್ಯಗಳು:
ಮಿನಿ ವಾಟರ್ ಹೀಟರ್ ಅನ್ನು ಯಾವುದೇ ತೊಂದರೆಯಿಲ್ಲದೆ ಕಡಿಮೆ ಸಮಯದಲ್ಲಿ ಅಳವಡಿಸಬಹುದಾಗಿದೆ. ಟ್ಯಾಪ್ನಲ್ಲಿ ಸ್ಥಾಪಿಸಲಾದ ಈ ಹೀಟರ್ ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲ್ಪಟ್ಟಿದೆ ಮತ್ತು ವಿದ್ಯುತ್ ತಂತಿಯ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಈ ವಾಟರ್ ಹೀಟರ್ ನ ಇನ್ನೊಂದು ವಿಶೇಷವೆಂದರೆ ಇದರಲ್ಲಿ ನೀಡಿರುವ ಡಿಸ್ ಪ್ಲೇ. ಈ ಸೊಗಸಾದ ವಾಟರ್ ಹೀಟರ್‌ನಲ್ಲಿ, ನೀವು ನೀರಿನ ತಾಪಮಾನವನ್ನು ಪರಿಶೀಲಿಸಬಹುದಾದ ಡಿಸ್ಪ್ಲೇ ಅನ್ನು ಸಹ ನಿಮಗೆ ನೀಡಲಾಗುತ್ತದೆ.


ಇದನ್ನೂ ಓದಿ- Smart LED TV 32 Inch ಕೇವಲ ರೂ.999ಕ್ಕೆ , ತ್ವರೆ ಮಾಡಿ ಖರೀದಿಸಲು ಇಂದೇ ಕೊನೆಯ ದಿನ


ಮಿನಿ ಎಲೆಕ್ಟ್ರಿಕ್ ವಾಟರ್ ಹೀಟರ್‌ನ ಬೆಲೆ:
ಈ ಮಿನಿ ವಾಟರ್ ಹೀಟರ್‌ನ ಬೆಲೆ 3,999 ರೂ. ಆಗಿದ್ದರೂ, ಅಮೆಜಾನ್‌ನಿಂದ 55% ರಷ್ಟು ದೊಡ್ಡ ರಿಯಾಯಿತಿಯ ನಂತರ, ನೀವು ಅದನ್ನು ಕೇವಲ 1,797  ರೂ.ಗಳಿಗೆ ಖರೀದಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.