Electricity Bill saving tips: ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡಲು ಈ ಸಾಧನವನ್ನು ಸ್ಥಾಪಿಸಿ

Electricity Bill saving tips: ನಿಮ್ಮ ಮನೆಯ ವಿದ್ಯುತ್ ಮೀಟರ್ ಒಂದು ಸಣ್ಣ ಸಾಧನವನ್ನು ಅಳವಡಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬಹುದು. ಈ ಡಿವೈಸ್ ವೆಚ್ಚವೂ ಕೂಡ ತುಂಬಾ ಕಡಿಮೆ.

Written by - Yashaswini V | Last Updated : Oct 13, 2022, 10:10 AM IST
  • ಈ ಸೊಗಸಾದ ಸಾಧನವನ್ನು ಅತ್ಯಂತ ಸುಲಭವಾಗಿ ಬಳಸಬಹುದು.
  • ವಿದ್ಯುತ್ ಮೀಟರ್‌ನ ಪಕ್ಕದಲ್ಲಿ ಈ ಸಣ್ಣ ಸಾಧನವನ್ನು ಸ್ಥಾಪಿಸುವುದರಿಂದ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ
  • ಯಾವುದೀ ಸಾಧನ, ಅದರ ವೈಶಿಷ್ಟ್ಯಗಳೇನು ಎಂದು ತಿಳಿಯೋಣ
Electricity Bill saving tips: ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡಲು ಈ ಸಾಧನವನ್ನು ಸ್ಥಾಪಿಸಿ title=
Electricity Bill saving tips

Electricity Bill saving tips: ಹೆಚ್ಚುತ್ತಿರುವ ವಿದ್ಯುತ್ ಬಿಲ್‌ನಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಚಿಂತೆಬಿಡಿ. ನಿಮ್ಮ ಮನೆಯ ವಿದ್ಯುತ್ ಮೀಟರ್ ಪಕ್ಕದಲ್ಲಿ ಒಂದು ಸಣ್ಣ ಡಿವೈಸ್ ಅಳವಡಿಸಿ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬಹುದು. ಅಂತಹ ಒಂದು ಸಾಧನವೇ ವೆಲ್ಬರ್ಗ್ ಪವರ್ ಸೇವರ್. ಇದರ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...

ವೆಲ್ಬರ್ಗ್ ಪವರ್ ಸೇವರ್:
ವೆಲ್ಬರ್ಗ್ ಪವರ್ ಸೇವರ್ ಒಂದು ಹೊಸ ನವೀಕರಿಸಿದ ವಿದ್ಯುತ್ ಉಳಿತಾಯ ಸಾಧನವಾಗಿದೆ. 500 ರೂ.ಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಈ ಸಾಧನವನ್ನು ನೀವು ಸುಲಭವಾಗಿ ಸ್ಥಾಪಿಸಬಹುದು. ಈ ಎಲೆಕ್ಟ್ರಿಸಿಟಿ ಸೇವರ್ ಡಿವೈಸ್ ಅನ್ನು ನಿಮ್ಮ ಮನೆಯ ವಿದ್ಯುತ್ ಮೀಟರ್‌ನ ಪಕ್ಕದಲ್ಲಿ ಸ್ಥಾಪಿಸುವುದರಿಂದ ನೀವು ಶೇ.50 ರಷ್ಟು ವಿದ್ಯುತ್ ಬಿಲ್‌ ಉಳಿಸಬಹುದು. 

ಇದನ್ನೂ ಓದಿ- ಸ್ಮಾರ್ಟ್‌ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡುವ ಅಗತ್ಯವಿಲ್ಲ, ಜಸ್ಟ್ ಈ ಸಲಹೆಗಳನ್ನು ಟ್ರೈ ಮಾಡಿ

ಈ ಸೊಗಸಾದ ಸಾಧನವನ್ನು ಅತ್ಯಂತ ಸುಲಭವಾಗಿ ಬಳಸಬಹುದು. ಇದು ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ವೋಲ್ಟೇಜ್ ಏರಿಳಿತದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿಗೆ ಹಾನಿಯಾಗದಂತೆ ತಡೆಯುತ್ತದೆ.  ಈ ಉತ್ತಮ ಗುಣಮಟ್ಟದ ಸಾಧನವನ್ನು ಅಮೆಜಾನ್‌ನಲ್ಲಿ 999 ರೂ. ಬದಲಿ 499ರೂ. ಗೆ ಮಾರಾಟ ಮಾಡಲಾಗುತ್ತಿದೆ. 

ಇದನ್ನೂ ಓದಿ- ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್: iPhone 13 ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ

ವೆಲ್ಬರ್ಗ್ ಪವರ್ ಸೇವರ್ ಹೊಸ ನವೀಕರಿಸಿದ ವಿದ್ಯುತ್ ಉಳಿತಾಯ ಸಾಧನದ ವೈಶಿಷ್ಟ್ಯಗಳು:
ಈ ಸಾಧನವನ್ನು ನಿಮ್ಮ ಮನೆ ಅಥವಾ ಕಚೇರಿಯ ವಿದ್ಯುತ್ ಮೀಟರ್ ಪಕ್ಕದಲ್ಲಿ ಸ್ಥಾಪಿಸುವುದರಿಂದ ಇದು ವಿದ್ಯುತ್ ಫಲಕದ ಸಾಮರ್ಥ್ಯ ಮತ್ತು ವಿದ್ಯುತ್ ಉಲ್ಬಣಗಳನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಯಾವುದೇ ಮನೆಯ ವಿದ್ಯುತ್ ಅಂಶವು 0.99 ಆಗಿರಬೇಕು. ಅದು ಹೆಚ್ಚು ಅಥವಾ ಕಡಿಮೆಯಾದರೆ ಈ ಸಾಧನವು ಸಮತೋಲನಗೊಳ್ಳುತ್ತದೆ. ಸರಳವಾಗಿ ಹೇಳುವುದಾದರೆ, ಇದು ವಿದ್ಯುತ್ ವ್ಯರ್ಥವಾಗುವುದನ್ನು ತಪ್ಪಿಸಿ, ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News