Flipkart Big Billion Days Sale: iPhone 13 ಆರ್ಡರ್ ಮಾಡಿದ ವ್ಯಕ್ತಿ ಮನೆಗೆ ಬಂತು iPhone 14
Flipkart Big Billion Days Sale: ನಾವು ಹಲವು ಬಾರಿ ಏನೋ ಆರ್ಡರ್ ಮಾಡಿದರೆ ಇನ್ನಾವುದೋ ವಸ್ತುವನ್ನು ಸ್ವೀಕರಿಸಿರುವ ಹಲವು ಉದಾಹರಣೆಗಳಿವೆ. ಅದರಲ್ಲೂ ಐಫೋನ್ ಆರ್ಡರ್ ಮಾಡಿದ ವ್ಯಕ್ತಿಗೆ ಡಿಟರ್ಜೆಂಟ್ ಸಾಬೂನ್ ವಿತರಿಸಿದ ಸುದ್ದಿಯಂತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೀಗ, ಫ್ಲಿಪ್‌ಕಾರ್ಟ್‌ನಿಂದ 50 ಸಾವಿರ ರೂಪಾಯಿಗಳಿಗೆ ಐಫೋನ್ 13 ಅನ್ನು ಆರ್ಡರ್ ಮಾಡಿದ ವ್ಯಕ್ತಿ ಮನೆಗೆ ತಲುಪಿದ್ದು ಐಫೋನ್ 14. ಏನಿದು ವಿಷಯ ಇಲ್ಲಿದೆ ಫುಲ್ ಡೀಟೇಲ್ಸ್...
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್: ಹಬ್ಬದ ಸೀಸನ್‌ನಲ್ಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಭಾರೀ ರಿಯಾಯಿತಿಯೊಂದಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿಯೂ ಹಲವು ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗಿತ್ತು. ಈ ಮಾರಾಟದಲ್ಲಿ ಸರಕುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಮಾರಾಟದ ಸಮಯದಲ್ಲಿ, ಜನರು ಖರೀದಿಸಿದ ವಸ್ತುಗಳಿಗೆ ವ್ಯತಿರಿಕ್ತವಾಗಿ ತಪ್ಪು ಸರಕುಗಳನ್ನು ಪಡೆದ ಇಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಅದರಲ್ಲೂ ಈ ಹಿಂದೆ ಐಫೋನ್ ಆರ್ಡರ್ ಮಾಡಿದ ವ್ಯಕ್ತಿಗೆ ಡಿಟರ್ಜೆಂಟ್ ಸಾಬೂನ್ ವಿತರಿಸಿದ ಸುದ್ದಿಯಂತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೀಗ, ಫ್ಲಿಪ್‌ಕಾರ್ಟ್‌ನಿಂದ 50 ಸಾವಿರ ರೂಪಾಯಿಗಳಿಗೆ ಐಫೋನ್ 13 ಅನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಐಫೋನ್ 14 ಅನ್ನು ವಿತರಿಸಲಾಗಿದೆ.
ಹೌದು, ಇದು ಆಶ್ಚರ್ಯವಾದರೂ ಸತ್ಯ. ಟ್ವಿಟರ್‌ನಲ್ಲಿ, ವ್ಯಕ್ತಿಯೊಬ್ಬರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು 50 ಸಾವಿರಕ್ಕೆ ತನ್ನ ಅನುಯಾಯಿಯು ಐಫೋನ್ 13 ಬದಲಿಗೆ ಐಫೋನ್ 14ಅನ್ನು ಸ್ವೀಕರಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಜಿಯೋ 5ಜಿ ಸೇವೆ ಆರಂಭ ! ಅನ್ಲಿಮಿಟೆಡ್ ಡೇಟಾ ಜೊತೆಗೆ ಸಿಗಲಿದೆ ಭರ್ಜರಿ ಆಫರ್
ಅಶ್ವಿನ್ ಹೆಗ್ಡೆ ಎಂಬ ಟ್ವಿಟರ್ ಬಳಕೆದಾರರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದರಲ್ಲಿ ಫ್ಲಿಪ್‌ಕಾರ್ಟ್‌ನಿಂದ ಐಫೋನ್ 13 ಆರ್ಡರ್ ಮಾಡಿದ ಬಗ್ಗೆ ಮಾಹಿತಿ ಇದ್ದರೆ, ಇನ್ನೊಂದು ಚಿತ್ರದಲ್ಲಿ ಐಫೋನ್ 14 ಬಾಕ್ಸ್ ಇತ್ತು. 'ನನ್ನ ಅನುಯಾಯಿಯೊಬ್ಬರು ಫ್ಲಿಪ್‌ಕಾರ್ಟ್‌ನಿಂದ ಐಫೋನ್ 13 ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಪಡೆದರು' ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ- BSNL ಗ್ರಾಹಕರಿಗೊಂದು ಬಂಬಾಟ್ ಸುದ್ದಿ, ಕೇಂದ್ರ ಸಚಿವರ ಘೋಷಣೆ ಕೇಳಿ ನೀವು ಕುಣಿದು ಕುಪ್ಪಳಿಸುವಿರಿ
ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಕೇವಲ ಎರಡು ದಿನಗಳಲ್ಲಿ, ಟ್ವೀಟ್ 8,000 ಕ್ಕೂ ಹೆಚ್ಚು ಲೈಕ್ಸ್ ಮತ್ತು 400 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ. ಕೆಲವರು ಫ್ಲಿಪ್‌ಕಾರ್ಟ್ ಅನ್ನು ಗೇಲಿ ಮಾಡುತ್ತಿದ್ದಾರೆ ಮತ್ತು ಕೆಲವರು ಐಫೋನ್ 14 ಅನ್ನು ಸ್ವೀಕರಿಸಿದ ವ್ಯಕ್ತಿಯು ತಾನು ಖರೀದಿಸಿದ ಅದೇ ಆರ್ಡರ್ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಜನರ ಪ್ರತಿಕ್ರಿಯೆ ಹೇಗಿದೆ ನೋಡೋಣ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.