Flipkart Big Diwali Sale: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಸಿದ್ದ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದ ಸಂದರ್ಭದಲ್ಲಿ iPhone 15, ಸ್ಯಾಮ್‌ಸಂಗ್ ಸೇರಿದಂತೆ  ಹಲವು ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿ ನೀಡುತ್ತಿದೆ. ಇದರಲ್ಲಿ ಹಲವು ಆಫರ್ ಗಳನ್ನು ಕೂಡ ನೀಡಲಾಗುತ್ತಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ದುಬಾರಿ ಫೋನ್ ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್‌ನಲ್ಲಿ ಯಾವ್ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್‌ಗಳು ಲಭ್ಯವಿವೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಲಭ್ಯವಿರುವ ಅತ್ಯುತ್ತಮ ಡೀಲ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. 


iPhone 15ರ ಖರೀದಿಯಲ್ಲಿ ಭರ್ಜರಿ ಆಫರ್: 
iPhone 15ರಲ್ಲಿ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ.  iPhone 15 ನ 128GB ಸ್ಟೋರೇಜ್ ರೂಪಾಂತರದ ಫೋನ್ ಅನ್ನು 49,999 ರೂ.ಗಳಲ್ಲಿ ಖರೀದಿಸಬಹುದು. ಇದೇ ವೇಳೆ iPhone 15 Plus ನ 128GB ರೂಪಾಂತರವನ್ನು 59,999 ರೂಗಳಲ್ಲಿ ಖರೀದಿಸುವ ಸುವರ್ಣಾವಕಾಶ ಲಭ್ಯವಿದೆ. 


ಇದನ್ನೂ ಓದಿ- BSNL ₹300ಕ್ಕಿಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್, ಪ್ರತಿ ದಿನ ನೀಡುತ್ತೇ ಇಷ್ಟೆಲ್ಲಾ ಲಾಭ


ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್: 
ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್ ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೂ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಮಾರಾಟದಲ್ಲಿ  Galaxy S23 FE ಬೆಲೆ 28,999 ರೂ.ಗೆ ಇಳಿಕೆಯಾಗಲಿದೆ.  Galaxy A14 5G (4GB) ಅನ್ನು 9,499 ರೂ.ಗೆ ಖರೀದಿಸಲು ಅವಕಾಶವಿದೆ. ಇದಲ್ಲದೆ,   Samsung Galaxy S23 5G ಅನ್ನು 37,999 ರೂ.ಗಳಲ್ಲಿ,  Galaxy S24 Plus ಮಾದರಿಯು 64,999 ರೂ. ಪಾವಟಿಸುವ ಮೂಲಕ ನಿಮ್ಮದಾಗಿಸಬಹುದು. 


ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಭರ್ಜರಿ ಕೊಡುಗೆ: 
ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳಲ್ಲೂ ಫ್ಲಿಪ್‌ಕಾರ್ಟ್ ಭರ್ಜರಿ ಕೊಡುಗೆ ನೀಡುತ್ತಿದೆ. Moto G85 5G (8/128GB) ಮಾದರಿಯು 15,999 ರೂಪಾಯಿಗಳಲ್ಲಿ ಲಭ್ಯವಿರಲಿದೆ. Moto edge 50 Pro 5G (12GB) ಅನ್ನು ರೂ 27,999 ಕ್ಕೆ,  Moto ಎಡ್ಜ್ 50 ಫ್ಯೂಷನ್ ಅನ್ನು ರೂ 19,999 ಕ್ಕೆ ಖರೀದಿಸಬಹುದಾಗಿದೆ. 


ಇದನ್ನೂ ಓದಿ- ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್! 


Vivo ಸ್ಮಾರ್ಟ್‌ಫೋನ್‌: 
Vivo ಸ್ಮಾರ್ಟ್‌ಫೋನ್‌ಗಳಲ್ಲೂ ಭರ್ಜರಿ ಕೊಡುಗೆ ನೀಡುತ್ತಿರುವ ಫ್ಲಿಪ್‌ಕಾರ್ಟ್  Vivo T3 Lite 5G ಫೋನ್ 9,499 ರೂ.ಗಳಿಗೆ, Vivo T3 Ultra 5G ಅನ್ನು ರೂ 28,999ರೂ.ಗಳಿಗೆ ಹಾಗೂ Vivo T3 Pro 5G ಮಾದರಿಯನ್ನು 21,999 ರೂ.ಗಳಿಗೆ ಮಾರಾಟ ಮಾಡುತ್ತಿದೆ. 


ರಿಯಲ್‌ಮಿ ಸ್ಮಾರ್ಟ್‌ಫೋನ್‌ ಆಫರ್: 
ರಿಯಲ್‌ಮಿ ಫೋನ್‌ಗಳನ್ನೂ ಕೂಡ ಬಹಳ ಪರಿಣಾಮಕಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಫ್ಲಿಪ್‌ಕಾರ್ಟ್ Realme 12X 5G (8/128GB) ಮಾದರಿಯು 11,499 ರೂಪಾಯಿಗಳಿಗೆ, Realme P1 5G (6/128GB) ಅನ್ನು  12,999 ರೂ.ಗೆ  ಹಾಗೂ Realme P2 Pro 5G (8GB) ಸ್ಮಾರ್ಟ್‌ಫೋನ್‌ ಅನ್ನು 18,999 ರೂ.ಗಳಲ್ಲಿ ಖರೀದಿಸುವ ಅವಕಾಶವನ್ನು ನೀಡುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.