ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!

Online Scam: ನಕಲಿ ಕರೆ, ಸಂದೇಶಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ TRAI ಅಕ್ಟೋಬರ್ 01ರಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆದರೆ, ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲು ಸ್ಕ್ಯಾಮರ್‌ಗಳು ಹೊಸ ಹೊಸ ತಂತ್ರವನ್ನು ಪ್ರಯತ್ನಿಸುತ್ತಿದ್ದಾರೆ. 

Written by - Yashaswini V | Last Updated : Oct 23, 2024, 09:01 AM IST
  • ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮರ್‌ಗಳು ಇಂಟರ್ನೆಟ್ ಕರೆಗಳ ಮೂಲಕ ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ.
  • ವಂಚಕರು ವಿ‌ಪಿ‌ಎನ್ ಬಳಸಿ ಕರೆ ಮಾಡುವುದರಿಂದ ಅವರ ಸಂಖ್ಯೆಯನ್ನು ಪತ್ತೆಹಚ್ಚುವುದು ಕಷ್ಟ ಎನ್ನಲಾಗುತ್ತಿದೆ.
  • ಆದರೆ, ಇಂತಹ ಕರೆಗಳನ್ನು ರಿಸೀವ್ ಮಾಡುವುದರಿಂದ ಕೆಲವೇ ನಿಮಿಷಗಳಲ್ಲಿ ನಿಮ್ಮ ಅಕೌಂಟ್ ಫುಲ್ ಖಾಲಿಯಾಗಬಹುದು.
ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!  title=

Online Scam: ತಂತ್ರಜ್ಞಾನ ಯುಗದಲ್ಲಿ ಟೆಲಿಕಾಂ ಕಂಪನಿಗಳು AI ನಂತಹ ಹೊಸ ವಿಧಾನಗಳ ಮೂಲಕ ವಂಚನೆಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ. ಜನರನ್ನು ವಂಚನೆಗೊಳಿಸುತ್ತಿರುವ ಸ್ಕ್ಯಾಮರ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಕ್ಟೋಬರ್ 1 ರಿಂದ TRAI ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರಿಂದಾಗಿ ನೆಟ್‌ವರ್ಕ್‌ನಲ್ಲಿ ನೇರವಾಗಿ ನಕಲಿ ಕರೆಗಳು ಮತ್ತು ಸಂದೇಶಗಳಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ.  ಆದರೆ, ಜನರನ್ನು ವಂಚಿಸಲು ಸ್ಕ್ಯಾಮರ್‌ಗಳು ಸಹ ಹೊಸ ತಂತ್ರವನ್ನು ಅಳವಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. 

ಇಂಟರ್ನೆಟ್ ಕರೆಗಳ ಮೊರೆ ಹೋದ ಸ್ಕ್ಯಾಮರ್‌ಗಳು: 
TRAI ಜಾರಿಗೆ ತಂದಿರುವ ಹೊಸ ನಿಯಮದಿಂದಾಗಿ ಭಾರತದಲ್ಲಿ ಸುಲಭವಾಗಿ ನಕಲಿ ಕರೆಗಳು ಮತ್ತು ಸಂದೇಶಗಳ ಮೂಲಕ ಜನರನ್ನು ವಂಚಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ, ಹೊಸ ತಂತ್ರ ಅಳವಡಿಸಿಕೊಂಡಿರುವ ವಂಚಕರು ಇಂಟರ್ನೆಟ್ ಕರೆಗಳ ಮೊರೆ ಹೋಗಿದ್ದಾರೆ.  ಈ ಇಂಟರ್ನೆಟ್ ಕರೆಗಳ ಹಗರಣಕ್ಕೆ ಬಲಿಯಾದರೆ ಎರಡೇ ನಿಮಿಷದಲ್ಲಿ ನಿಮ್ಮ ಅಕೌಂಟ್ ಸಂಪೂರ್ಣವಾಗಿ ಖಾಲಿಯಾಗುತ್ತೆ... 

ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಈ 3 ಬದಲಾವಣೆ ಕಂಡ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಅಂತಾನೆ ಅರ್ಥ..!

ಇಂಟರ್ನೆಟ್ ಕರೆಗಳ ಮೂಲಕ ಅಕೌಂಟ್​ಗೆ ಕನ್ನ:  
ಹೌದು, ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮರ್‌ಗಳು ಇಂಟರ್ನೆಟ್ ಕರೆಗಳ ಮೂಲಕ ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ವಂಚಕರು ವಿ‌ಪಿ‌ಎನ್ ಬಳಸಿ ಕರೆ ಮಾಡುವುದರಿಂದ ಅವರ ಸಂಖ್ಯೆಯನ್ನು ಪತ್ತೆಹಚ್ಚುವುದು ಕಷ್ಟ ಎನ್ನಲಾಗುತ್ತಿದೆ. ಆದರೆ, ಇಂತಹ ಕರೆಗಳನ್ನು ರಿಸೀವ್ ಮಾಡುವುದರಿಂದ ಮತ್ತು ಈ ನಿಮ್ಮ ವೈಯಕ್ತಿಕ ಕ್ಷಣಾರ್ಧದಲ್ಲಿ ನಿಮ್ಮ ಅಕೌಂಟ್ ಖಾಲಿ ಆಗಬಹುದು. 

ಇದನ್ನೂ ಓದಿ- BSNL ನೀಡುತ್ತಿದೆ ಗ್ರಾಹಕರ ಆಯ್ಕೆಯ VIP ಮೊಬೈಲ್ ನಂಬರ್, ಇಲ್ಲಿದೆ ಅದನ್ನು ಪಡೆಯುವ ಸರಳ ವಿಧಾನ..! 

ವರದಿಯೊಂದರ ಪ್ರಕಾರ,  ಥೈಲ್ಯಾಂಡ್‌ನಲ್ಲಿ ಇಂಟರ್ನೆಟ್‌ನಿಂದ ಕರೆ ಮಾಡುವ ಜನರು ಸಾಮಾನ್ಯವಾಗಿ +697 ಅಥವಾ +698 ರಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಕರೆ ಮಾಡುತ್ತಾರೆ ಎಂದು ಥೈಲ್ಯಾಂಡ್ ದೂರಸಂಪರ್ಕ ಪ್ರಾಧಿಕಾರ ಮಾಹಿತಿ ಹಂಚಿಕೊಂಡಿದೆ.   ಇಂತಹ ಸಂಖ್ಯೆಗಳಿಂದ ಇಂಟರ್ನೆಟ್ ಕರೆ ಬಂದರೆ ಯಾವುದೇ ಕಾರಣದಿಂದಲೂ ಈ ಕರೆಗಳನ್ನು ರಿಸೀವ್ ಮಾಡಬೇಡಿ. ಈ ಸಂಖ್ಯೆಗಳಿಂದ ಕರೆ ಬಂದರೆ ಕೂಡಲೇ ಸೈಬರ್ ಕ್ರೈಂ ನಲ್ಲಿ ಈ ಬಗ್ಗೆ ವರದಿ ಮಾಡುವುದು ಉತ್ತಮ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News