ನವದೆಹಲಿ: ನೀವು ಆಪಲ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಐಫೋನ್ 13 ಖರೀದಿಸಲು ಬಯಸುವಿರಾ? ಇದಕ್ಕೆ ಹೆಚ್ಚಿನ ಬೆಲೆ ಇದೆ ಹೇಗೆ ಖರೀದಿಸುವುದು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೊಂದು ಖುಷಿ ಸುದ್ದಿ ಇದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ iPhone 13ರ ಮೇಲೆ ಭರ್ಜರಿ ರಿಯಾಯತಿ ಲಭ್ಯವಿದೆ. ಇಷ್ಟೊಂದು ಕಡಿಮೆ ಬೆಲೆಗೆ ಮತ್ತೆಂದೂ ಈ ಫೋನ್ ನಿಮಗೆ ಸಿಗುವುದಿಲ್ಲ.   


COMMERCIAL BREAK
SCROLL TO CONTINUE READING

ಐಫೋನ್ 13 (128GB) ಅಗ್ಗವಾಗಿ ಖರೀದಿಸಿ


128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ iPhone 13 ಮಾರುಕಟ್ಟೆ ಬೆಲೆ 79,900 ರೂ. ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ Apple ಫೋನಿಗೆ ಶೇ.12ರಷ್ಟು ರಿಯಾಯಿತಿ ಲಭ್ಯವಿದ್ದು, ನೀವು 69,900 ರೂ.ಗೆ ಖರೀದಿಸಬಹುದು. ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು ಈ ಐಫೋನ್‌ಗೆ ಖರೀದಿಸಿದರೆ 1 ಸಾವಿರ ರೂ. ರಿಯಾಯಿತಿ ಸಿಗುತ್ತದೆ. ಈ ರೀತಿ ನೀವು ಈ ಫೋನ್ ಅನ್ನು 68,900 ರೂ.ಗೆ ಖರೀದಿಸಬಹುದು.


ಇದನ್ನೂ ಓದಿ: ಟಾಟಾ ಮೋಟಾರ್ಸ್‌ನ ಹೊಚ್ಚ ಹೊಸ Ace EV ಯೊಂದಿಗೆ ಸ್ಮಾರ್ಟ್ ಸಾರಿಗೆ ವಾಹನ ಬಿಡುಗಡೆ


ಹೆಚ್ಚುವರಿ ಕೊಡುಗೆಗಳೊಂದಿಗೆ ಹೆಚ್ಚಿನ ರಿಯಾಯಿತಿ  


iPhone 13ರ ಈ ಆಫರ್‌ನಲ್ಲಿ ನಿಮಗೆ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಫೋನ್ ಖರೀದಿಸಿದರೆ ನೀವು 16 ಸಾವಿರ ರೂ.ವರೆಗೂ ಉಳಿಸಬಹುದು. ಈ ವಿನಿಮಯ ಕೊಡುಗೆಯ ಸಂಪೂರ್ಣ ಪ್ರಯೋಜನ ಪಡೆದರೆ ನೀವು 16 ಸಾವಿರ ರೂ. ಉಳಿಸಬಹುದು. ಈ ರೀತಿ ನೀವು 79,900 ರೂ. ಬದಲಿಗೆ 52,900 ರೂ.ಗೆ iPhone 13 ಖರೀದಿಸಲು ಸಾಧ್ಯವಾಗುತ್ತದೆ.


iPhone 13 ನ ವೈಶಿಷ್ಟ್ಯಗಳು


128GB ಮಾದರಿಯ iPhone 13 ಸ್ಮಾರ್ಟ್‌ಫೋನ್‌ A15 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ ನೀವು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ, ಇವೆರಡೂ 12MP Sensor ಹೊಂದಿವೆ. ಇದರ ಮುಂಭಾಗದ ಕ್ಯಾಮೆರಾ ಕೂಡ 12MP ಆಗಿದೆ. ಐಫೋನ್ 13 ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಮತ್ತು 5G ಸೇವೆಗಳನ್ನು ಬೆಂಬಲಿಸುತ್ತದೆ.


ಇದನ್ನೂ ಓದಿ: Smartphone Tips: ಇನ್ಮುಂದೆ ಥರ್ಡ್ ಪಾರ್ಟಿ ಆಪ್ ಮೂಲಕ ಕಾಲ್ ರೆಕಾರ್ಡಿಂಗ್ ಅನುಮತಿಸಲ್ಲ ಗೂಗಲ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.