Flipkart ನೀಡುತ್ತಿದೆ ಭಾರೀ offers, Smartphone, Smart TVಗಳ ಮೇಲೆ ಭರ್ಜರಿ Discount
ಇದೀಗ ಫ್ಲಿಪ್‌ಕಾರ್ಟ್‌ನ Big Diwali Sale ಪ್ರಾರಂಭವಾಗಿದೆ. ಇದರಲ್ಲಿ ಐದು ದಿನಗಳವರೆಗೆ ಅನೇಕ ಉತ್ಪನ್ನಗಳ ಮೇಲೆ ಭಾರೀ ಆಫರ್ ಗಳನ್ನೂ ಘೋಷಿಸಲಾಗಿದೆ.
ನವದೆಹಲಿ : ಫ್ಲಿಪ್‌ಕಾರ್ಟ್ ಇತ್ತೀಚೆಗಷ್ಟೇ ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ಕೊನೆಗೊಳಿಸಿದೆ. ಇದೀಗ ಫ್ಲಿಪ್‌ಕಾರ್ಟ್‌ನ Big Diwali Sale ಪ್ರಾರಂಭವಾಗಿದೆ. ಇದರಲ್ಲಿ ಐದು ದಿನಗಳವರೆಗೆ ಅನೇಕ ಉತ್ಪನ್ನಗಳ ಮೇಲೆ ಭಾರೀ ಆಫರ್ ಗಳನ್ನೂ ಘೋಷಿಸಲಾಗಿದೆ.
Apple AirPodsಗಳ ಮೇಲೆ ಭಾರೀ ರಿಯಾಯಿತಿ :
ಫ್ಲಿಪ್‌ಕಾರ್ಟ್‌ನ ದೀಪಾವಳಿ ಸೇಲ್ ನಲ್ಲಿ (flipkart diwali sale) 14,900 ರೂ. ಮೌಲ್ಯದ ಆಪಲ್ ಏರ್‌ಪಾಡ್‌ಗಳ ಮೇಲೆ 39% ರಿಯಾಯಿತಿ ಸಿಗಲಿದೆ. ಅಂದರೆ ರಿಯಾಯಿತಿ ಬಳಿಕ AirPodsಗಳನ್ನು 8,999ರಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಎಸ್‌ಬಿಐನ ಕ್ರೆಡಿಟ್ ಕಾರ್ಡ್ (SBI Credit card) ಬಳಸಿದರೆ 900 ರೂ. ಯಷ್ಟು ಹೆಚ್ಚು ರಿಯಾಯಿತಿ ಸಿಗುತ್ತದೆ. ಅದನ್ನು ತಿಂಗಳಿಗೆ 1,500 ರೂ. ಇಎಂಐನಲ್ಲಿ ಖರೀದಿಸಬಹುದು.
ಇದನ್ನೂ ಓದಿ : TRUTH Social: ಸ್ವಂತ ಸೋಶಿಯಲ್ ಮೀಡಿಯಾ ವೇದಿಕೆ ಚಾಲನೆಗೆ ಮುಂದಾದ ಡೊನಾಲ್ಡ್ ಟ್ರಂಪ್
ಅರ್ಧ ಬೆಲೆಗೆ ಖರೀದಿಸಬಹುದು Lenovo Tablet :
Lenovo Tab M10 (HD) ವೈಫೈ + 4 ಜಿ ಟ್ಯಾಬ್ಲೆಟ್ 30,000 ಬದಲಿಗೆ ಕೇವಲ 14,999 ರೂ.ಗಳಿಗೆ ಲಭ್ಯವಿದೆ. ಸಮಾಯಿಯ ಕ್ರೆಡಿಟ್ ಕಾರ್ಡ್ ಬಳಸಿದರೆ 1,500 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಇದರಲ್ಲಿ ನಿಮಗೆ ವಿನಿಮಯ ಕೊಡುಗೆಯ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಈ ಲೆನೊವೊ ಟ್ಯಾಬ್ (Lenovo Tab) ಅನ್ನು ತಿಂಗಳಿಗೆ 513 ರೂ.ಗಳ ಇಎಂಐನಲ್ಲಿ ಖರೀದಿಸಬಹುದು.
Smartwatch ಮೇಲೆ 12,000ರೂ.ವರೆಗೆ ರಿಯಾಯಿತಿ :
ಫ್ಲಿಪ್‌ಕಾರ್ಟ್‌ನ ಸೇಲ್ ನಲ್ಲಿ (Flipkart sale) 25,990 ರೂ ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ 2 ಅನ್ನು 11,990 ರೂ .ಗೆ ಖರೀದಿಸಬಹುದು. ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಬಳಕೆದಾರರು 1,199ರೂ . ಹೆಚ್ಚಿನ ರಿಯಾಯಿತಿ ಪಡೆಯಬಹುದು. ಇದನ್ನು ತಿಂಗಳಿಗೆ 1,999 ರೂ . ಇಎಂಐನಲ್ಲಿ (EMI) ಖರೀದಿಸಬಹುದು.
Realme Smartphoneಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಿ :
Realme C11, 64GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ಫೋನ್ ಅನ್ನು 9,999 ರೂ. ಬದಲಾಗಿ 7,999 ರೂ. ಗೆ ಖರೀದಿಸಬಹುದು. ಯಾವುದೇ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (Debit card) ಮೂಲಕ ಪಾವತಿಸಿದರೂ, 200 ರೂ.ಗಳ ರಿಯಾಯಿತಿ ಸಿಗಲಿದೆ. SBI ನ ಕ್ರೆಡಿಟ್ ಕಾರ್ಡ್ ಬಳಸಿದರೆ 780 ರೂ. ಹೆಚ್ಚುವರಿ ರಿಯಾಯಿತಿ ಮತ್ತು ಎಕ್ಸ್ಚೇಂಜ್ ಆಫರ್ ನೊಂದಿಗೆ 7,450 ರೂ. ಗಳಿಗೆ ಖರೀದಿಸಬಹುದು.
ಇದನ್ನೂ ಓದಿ : Redmi Note 11 Series: ಮುಂದಿನವಾರ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರೆಡ್ಮಿ ನೋಟ್ 11 ಸೀರಿಸ್
ಎಲ್ಜಿ ಸ್ಪ್ಲಿಟ್ ಡ್ಯುಯಲ್ ಇನ್ವರ್ಟರ್ ಎಸಿಯಲ್ಲಿ 40% ರಿಯಾಯಿತಿ :
66,990 ರೂ . ಬೆಲೆಯ ಎಲ್ಜಿ ಕನ್ವರ್ಟಿಬಲ್ 5-ಇನ್ -1 1.5 ಟನ್ ಸ್ಪ್ಲಿಟ್ ಡ್ಯುಯಲ್ ಇನ್ವರ್ಟರ್ ಎಸಿಯನ್ನು ಫ್ಲಿಪ್ ಕಾರ್ಟ್ ನಿಂದ .399,990 ರೂ.ಗೆ ಖರೀದಿಸಬಹುದು. ಆನ್‌ಲೈನ್ ಪೇಮೆಂಟ್ ಮಾಡಿದರೆ ಒಂದು ಸಾವಿರ ರೂಪಾಯಿಗಳ ರಿಯಾಯಿತಿ ಸಿಗಲಿದೆ. SBI ನ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 1,500 ರೂಪಾಯಿಗಳ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಈ ಎಸಿಯನ್ನು ತಿಂಗಳಿಗೆ ರೂ 3 .333 ಇಎಂಐಗೆ ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ