Flipkart's Big Sale: ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ, ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ವಿಶೇಷ ಕ್ರಿಸ್ಮಸ್ ಮಾರಾಟವನ್ನು ( Vivo Christmas Carnival) ತಂದಿದೆ. ವಿವೋ ಕ್ರಿಸ್ಮಸ್ ಕಾರ್ನಿವಲ್, ಡಿಸೆಂಬರ್ 22 ರಂದು ಪ್ರಾರಂಭವಾಗಿದೆ. ಡಿಸೆಂಬರ್ 25 ರವರೆಗೆ ನಡೆಯುವ ಈ ಸೇಲ್‌ನಲ್ಲಿ ನಿಮಗೆ ಎಲ್ಲಾ Vivo ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇಂದು ನಾವು Vivo ನ ಅದ್ಭುತ 4G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ Vivo Y53s ನಲ್ಲಿ ಲಭ್ಯವಿರುವ ಆಫರ್‌ಗಳ ಕುರಿತು ತಿಳಿಸುತ್ತಿದ್ದೇವೆ. ಕೊಡುಗೆಯ ಸಂಪೂರ್ಣ ಲಾಭ ಪಡೆಯುವ ಮೂಲಕ ನೀವು ರೂ. 22,990 ಮೌಲ್ಯದ ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 1,735 ರೂ.ಗಳಲ್ಲಿ ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

Vivo Y53s ಅನ್ನು 1,700 ರೂ.ಗೆ ಖರೀದಿಸುವುದು ಹೇಗೆ ಎಂಬುದು ಇಲ್ಲಿದೆ:
Vivo ನ ಈ 4G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 22,990 ರೂ.ಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿನ Vivo ಕ್ರಿಸ್ಮಸ್ ಕಾರ್ನಿವಲ್‌ನಲ್ಲಿ (Flipkart Vivo Christmas Carnival) , ನೀವು 19% ರಿಯಾಯಿತಿಯ ನಂತರ 18,490 ರೂ.ಗಳಲ್ಲಿ ಈ ಫೋನ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 5% ಕ್ಯಾಶ್‌ಬ್ಯಾಕ್ ಅಂದರೆ ರೂ.905 ಮತ್ತು ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿದರೆ, ನೀವು ವಿಶೇಷ ಪ್ರಿಪೇಯ್ಡ್ ಆಫರ್‌ನ ಪ್ರಯೋಜನವನ್ನು ಪಡೆಯುತ್ತೀರಿ. ಇದರಿಂದ ನೀವು 400 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಈ ಮೂಲಕ ಸ್ಮಾರ್ಟ್ ಫೋನ್ ಬೆಲೆ 17,185 ರೂ.ಗೆ ಇಳಿಯಲಿದೆ. 


ಇದನ್ನೂ ಓದಿ- Googleನಲ್ಲಿ ಅಪ್ಪಿತಪ್ಪಿಯೂ ಕೂಡ ಈ 5 ಸಂಗತಿಗಳ ಹುಡುಕಾಟ ನಡೆಸಬೇಡಿ, ಇಲ್ದಿದ್ರೆ ಜೈಲು ಶಿಕ್ಷೆ ಗ್ಯಾರಂಟಿ


ಈ ಡೀಲ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೊಡ ಲಭ್ಯ: 
Vivo Y53s ನ ಈ ಡೀಲ್‌ನಲ್ಲಿ, ನಿಮಗೆ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ನಿಮ್ಮ ಹಳೆಯ ಫೋನ್‌ಗೆ ಬದಲಾಗಿ ಈ ಸ್ಮಾರ್ಟ್‌ಫೋನ್ (Smartphone) ಖರೀದಿಸಿದರೆ, ನೀವು 15,450 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದರೆ, ಈ Vivo ಸ್ಮಾರ್ಟ್‌ಫೋನ್‌ನ ಬೆಲೆ 17,185 ರೂ.ಗಳಿಂದ ಕೇವಲ 1,735 ರೂ.ಗೆ ಇಳಿಯುತ್ತದೆ. 


ಇದನ್ನೂ ಓದಿ- Best Recharge Plan: ರೂ.400ಕ್ಕೂ ಕಮ್ಮಿ ಬೆಲೆಗೆ 300 ದಿನಗಳ ವ್ಯಾಲಿಡಿಟಿ, ನಿತ್ಯ 2GB ಡೇಟಾ, ಉಚಿತ ಕಾಲಿಂಗ್


ಈ Vivo ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು :
Vivo Y53s 4G ಸ್ಮಾರ್ಟ್‌ಫೋನ್ ಆಗಿದ್ದು ಅದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. MediaTek Helio G80 ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು 6.58-ಇಂಚಿನ Full HD + LCD Hello Full View ಡಿಸ್ಪ್ಲೇ ಮತ್ತು 5,000mAh ಬ್ಯಾಟರಿಯನ್ನು ಪಡೆಯುತ್ತೀರಿ. ಕ್ಯಾಮೆರಾದ ಕುರಿತು ಹೇಳುವುದಾದರೆ, ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದರಲ್ಲಿ ಮುಖ್ಯ ಸಂವೇದಕ 64MP ಮತ್ತು ಉಳಿದ ಎರಡು ಸಂವೇದಕಗಳು 2MP ಆಗಿವೆ. ಈ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ನಲ್ಲಿ, ನೀವು 16MP ಮುಂಭಾಗದ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ. 


ಫ್ಲಿಪ್‌ಕಾರ್ಟ್‌ನಲ್ಲಿನ ಈ Vivo ಕ್ರಿಸ್ಮಸ್ ಕಾರ್ನಿವಲ್ ಡಿಸೆಂಬರ್ 25 ರವರೆಗೆ ನಡೆಯಲಿದೆ. ಆದ್ದರಿಂದ ಈ ಮಾರಾಟದ ಕೊಡುಗೆಗಳ ಲಾಭವನ್ನು ಪಡೆಯಲು ನಿಮಗೆ ಕೆಲವೇ ದಿನಗಳು ಮಾತ್ರ ಇವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.