Jio ಈ ಪ್ಲಾನ್ ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆ Free Netflix ಮತ್ತು 75GB ಡೇಟಾ

ಜಿಯೋದ 399 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ಅಪಾರ ಪ್ರಯೋಜನಗಳನ್ನು ಪಡೆಯುತ್ತಾರೆ. ಇದು ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ನ ಅಗ್ಗದ ಯೋಜನೆಯಾಗಿದೆ. 

Written by - Ranjitha R K | Last Updated : Dec 22, 2021, 05:51 PM IST
  • ಜಿಯೋದ 399 ರೂ. ಪೋಸ್ಟ್ ಪೇಯ್ಡ್ ಯೋಜನೆ
  • ಜಿಯೋದ 399 ರೂ. ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ಅಪಾರ ಪ್ರಯೋಜನಗಳನ್ನು ಪಡೆಯುತ್ತಾರೆ.
  • ಇದು ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್‌ನ ಅಗ್ಗದ ಯೋಜನೆಯಾಗಿದೆ.
Jio ಈ ಪ್ಲಾನ್ ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆ Free Netflix ಮತ್ತು 75GB  ಡೇಟಾ  title=
ಜಿಯೋದ 399 ರೂ. ಪೋಸ್ಟ್ ಪೇಯ್ಡ್ ಯೋಜನೆ (file photo)

ನವದೆಹಲಿ : ರಿಲಯನ್ಸ್ ಜಿಯೋ (Reliance Jio) ತನ್ನ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಅಗ್ಗದ ಯೋಜನೆಗಳೂ ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಬಳಕೆದಾರರು ಪೋಸ್ಟ್ ಪೇಯ್ಡ್ (Jio Postpaid) ಕಡೆಗೆ ವಾಲುತ್ತಿದ್ದಾರೆ. ಪ್ರಿಪೇಯ್ಡ್ನಿಂದ ಪೋಸ್ಟ್ ಪೇಯ್ಡ್ ಗೆ ಹೋಗಲು ಬಯಸುವುದಾದರೆ, ಜಿಯೋ ಪೋಸ್ಟ್ ಪೇಯ್ಡ್‌ನ ಅಗ್ಗದ ಯೋಜನೆಯ ಮಾಹಿತಿ ಇಲ್ಲಿದೆ. ಈ ಯೋಜನೆಯಲ್ಲಿ ಬಳಕೆದಾರರು ಅಪಾರ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯು ಬಜೆಟ್‌ ಗೂ  ಸರಿಹೊಂದುತ್ತದೆ. 

ಜಿಯೋದ 399 ರೂ. ಪೋಸ್ಟ್‌ಪೇಯ್ಡ್ ಯೋಜನೆ :
ಜಿಯೋದ 399 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ (Jio Postpaid Scheme), ಬಳಕೆದಾರರು ಅಪಾರ ಪ್ರಯೋಜನಗಳನ್ನು ಪಡೆಯುತ್ತಾರೆ. ಇದು ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ನ ಅಗ್ಗದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಳಕೆದಾರರು 75GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಅನಿಯಮಿತ ಕರೆ ಮತ್ತು ಪ್ರತಿದಿನ 100 SMSನ ಲಾಭ ಸಿಗಲಿದೆ. 

ಇದನ್ನೂ ಓದಿ : Googleನಲ್ಲಿ ಅಪ್ಪಿತಪ್ಪಿಯೂ ಕೂಡ ಈ 5 ಸಂಗತಿಗಳ ಹುಡುಕಾಟ ನಡೆಸಬೇಡಿ, ಇಲ್ದಿದ್ರೆ ಜೈಲು ಶಿಕ್ಷೆ ಗ್ಯಾರಂಟಿ

ಉಚಿತ ನೆಟ್‌ಫ್ಲಿಕ್ಸ್ :
OTT ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಪ್ರತ್ಯೇಕವಾಗಿ OTT ಪ್ಲಾಟ್‌ಫಾರ್ಮ್‌ನ ಚಂದಾದಾರಿಕೆಗಾಗಿ ಹಣವನ್ನು ಖರ್ಚು ಮಾಡುತ್ತಿದ್ದರೆ, ಅದರ ಅಗತ್ಯವಿರುವುದಿಲ್ಲ. ಏಕೆಂದರೆ ಈ ಪ್ಲಾನ್ ನಲ್ಲಿ Netflix ಮತ್ತು Amazon Prime ಚಂದಾದಾರಿಕೆಯು ಉಚಿತವಾಗಿ ಸಿಗಲಿದೆ. ಈ ಯೋಜನೆಯ ಸಿಂಧುತ್ವವು ಒಂದು ತಿಂಗಳವರೆಗೆ ಇರಲಿದೆ.
 
ಜಿಯೋದ 419 ರೂ. ಪ್ರಿಪೇಯ್ಡ್ ಯೋಜನೆ :
Jio ನ ಪ್ರಿಪೇಯ್ಡ್ ಯೋಜನೆಗಳ ಕುರಿತು ಮಾತನಾಡುವುದಾದರೆ, Jio 399 ರೂ.ಗಳ ಯಾವುದೇ ಯೋಜನೆಯನ್ನು ಹೊಂದಿಲ್ಲ. ಆದರೆ 419 ರೂ.ಗಳ ಪ್ರಿಪೇಯ್ಡ್ ಪ್ಲಾನ್ (Prepaid plan) ಇದೆ. ಇದರಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಕೂಡಾ ಲಭ್ಯವಿರಲಿದೆ. ಅಂದರೆ, ಈ ಯೋಜನೆಯಲ್ಲಿ ಒಟ್ಟು 84GB ಡೇಟಾ ಲಭ್ಯವಿರುತ್ತದೆ. ಆದರೆ, ಯೋಜನೆಯೊಂದಿಗೆ ನೆಟ್‌ಫ್ಲಿಕ್ಸ್ ಅಥವಾ ಅಮೆಜಾನ್ ಪ್ರೈಮ್ (Amazon prime) ಚಂದಾದಾರಿಕೆ ಲಭ್ಯವಿಲ್ಲ. ಇದರಲ್ಲಿ, ಬಳಕೆದಾರರು ಜಿಯೋ ಅಪ್ಲಿಕೇಶನ್‌ಗಳಿಗೆ (Jio App) ಆಕ್ಸೆಸ್ ಪಡೆಯುತ್ತಾರೆ.

ಇದನ್ನೂ ಓದಿ : Best Recharge Plan: ರೂ.400ಕ್ಕೂ ಕಮ್ಮಿ ಬೆಲೆಗೆ 300 ದಿನಗಳ ವ್ಯಾಲಿಡಿಟಿ, ನಿತ್ಯ 2GB ಡೇಟಾ, ಉಚಿತ ಕಾಲಿಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News