UPI Payments: ನಿಮ್ಮ ಯುಪಿಐ ಪಾವತಿಯನ್ನು ಸುರಕ್ಷಿತವಾಗಿರಿಸಲು ತಪ್ಪದೇ ಪಾಲಿಸಿ ಈ 5 ಟಿಪ್ಸ್
UPI Payments: ತಂತ್ರಜ್ಞಾನ ಯುಗದಲ್ಲಿ ಆನ್‌ಲೈನ್ ಪಾವತಿಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ, ಸೈಬರ್ ಕ್ರೈಮ್ನಿಂದಾಗಿ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಯುಪಿಐ ಬಳಸಿಕೊಂಡು ಆನ್‌ಲೈನ್ ಪಾವತಿಗಳನ್ನು ಮಾಡುವಾಗ ಸುರಕ್ಷತೆಗೆ ಸರಿಯಾದ ರೀತಿಯಲ್ಲಿ ಗಮನಹರಿಸುವುದು ತುಂಬಾ ಅಗತ್ಯವಾಗಿದೆ.
UPI Payments: ಈ ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯು ಹಣಕಾಸಿನ ವಹಿವಾಟನ್ನು ತುಂಬಾ ಸುಲಭಗೊಳಿಸಿದೆ. ಆದರೆ, ವಿಪರ್ಯಾಸವೆಂದರೆ, ಇದರೊಂದಿಗೆ ಸೈಬರ್ ಅಪರಾಧಿಗಳು ಗಮನಾರ್ಹ ಹೆಚ್ಚಾಗಿವೆ. ಹಾಗಾಗಿ, ಸಂಭಾವ್ಯ ಆರ್ಥಿಕ ನಷ್ಟವನ್ನು ತಪ್ಪಿಸಲು ಯುಪಿಐ ಬಳಸಿಕೊಂಡು ಆನ್‌ಲೈನ್ ಪಾವತಿಗಳನ್ನು ಮಾಡುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ತುಂಬಾ ಅಗತ್ಯವಾಗಿದೆ. ಈ ಲೇಖನದಲ್ಲಿ ಯುಪಿಐ ಬಳಸಿಕೊಂಡು ಆನ್‌ಲೈನ್ ಪಾವತಿಗಳನ್ನು ಮಾಡುವಾಗ ಅನುಸರಿಸಬೇಕಾದ ಐದು ಪ್ರಮುಖ ಸುರಕ್ಷತಾ ಸಲಹೆಗಳ ಬಗ್ಗೆ ತಿಳಿಯೋಣ...
ಸ್ಕ್ರೀನ್ ಲಾಕ್:
ನೀವು ಯಾವುದೇ ಸಾಧನದಲ್ಲಿ ಯುಪಿಐ ಪಾವತಿ ಮಾಡುತ್ತಿದ್ದರೆ ಮೊದಲು ಆ ಸಾಧನದ ಸ್ಕ್ರೀನ್ ಲಾಕ್ ಬಗ್ಗೆ ಹೆಚ್ಚಿನ ಒತ್ತು ನೀಡಿ. ಅದು ನಿಮ್ಮ ಕಂಪ್ಯೂಟರ್ ಆಗಿರಲಿ, ಇಲ್ಲ ಸ್ಮಾರ್ಟ್ಫೋನ್ ಆಗಿರಲಿ ಇದರಲ್ಲಿ ಬಲವಾದ ಸ್ಕ್ರೀನ್ ಲಾಕ್, ಪಾಸ್‌ವರ್ಡ್ ಅಥವಾ ಪಿನ್ ಹೊಂದಿಸಿ. ಈ ಪಾಸ್‌ವರ್ಡ್ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಲು ಮಾತ್ರವಲ್ಲದೆ, ಪಾವತಿ, ಹಣಕಾಸಿನ ವಹಿವಾಟು ನಡೆಸುವ ಅಪ್ಲಿಕೇಶನ್‌ಗಳನ್ನು ರಕ್ಷಿಸಲು ಕೂಡ ಮುಖ್ಯವಾಗಿದೆ. ಇದರಿಂದ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುವುದನ್ನು ತಡೆಯಬಹುದು.
ಸುರಕ್ಷಿತ ಯುಪಿಐ ಪಿನ್ ರಚಿಸಿ ಮತ್ತು ಯಾರೊಂದಿಗೂ ಪಿನ್ ಹಂಚಿಕೊಳ್ಳಬೇಡಿ:
ನಿಮ್ಮ ಆನ್‌ಲೈನ್ ವಹಿವಾಟುಗಳನ್ನು ಸುರಕ್ಷಿತಗೊಳಿಸಲು ಸುರಕ್ಷಿತ ಯುಪಿಐ ಪಿನ್ ಅನ್ನು ರಚಿಸಿ. ಹಾಗೆಯೇ ಯಾವುದೇ ಸಂದರ್ಭದಲ್ಲಿ ನಿಮ್ಮ ಯುಪಿಐ ಖಾತೆಯ ಪಾಸ್‌ವರ್ಡ್ ಎಂದರೆ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏಕೆಂದರೆ ಇದರಿಂದಾಗಿ ನೀವು ವಂಚನೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ- Wifi Router Tips: ಮನೆಯ ಈ ನಾಲ್ಕು ಸ್ಥಳಗಳಲ್ಲಿ ಅತಿ ಹೆಚ್ಚಿನ ಇಂಟರ್ನೆಟ್ ವೇಗ ನೀಡುತ್ತೇ ವೈಫೈ ರೌಟರ್!
ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ:
ನೀವು ನೆನಪಿನಲ್ಲಿಡಬೇಕಾದ ಪ್ರಮುಖ ಅಂಶವೆಂದರೆ ಯಾವುದೇ ಬ್ಯಾಂಕ್ ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಗಳನ್ನು ಫೋನ್ ಇಲ್ಲವೇ, ಮೆಸೇಜ್ ಮೂಲಕ ಕೇಳುವುದಿಲ್ಲ. ನಿಮ್ಮ ಖಾತೆ ಬ್ಲಾಕ್ ಆಗುತ್ತೆ ಅಥವಾ ನಿಮಗೆ ಸಾವಿರಾರು ರೂ., ಉಡುಗೊರೆ ಲಭ್ಯವಾಗಲಿದ್ದು ಅದನ್ನು ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಎಂದು ಬರುವ ಸಂದೇಶಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಪರಿಶೀಲಿಸದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ಅಥವಾ ಅನುಮಾನಾಸ್ಪದ ಸಂಖ್ಯೆಗಳಿಂದ ಕರೆಗಳಿಗೆ ಉತ್ತರಿಸುವುದನ್ನು ತಪ್ಪಿಸಿ. ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಲಿಂಕ್‌ಗಳನ್ನು ಹೊಂದಿರುವ ನಕಲಿ ಸಂದೇಶಗಳನ್ನು ಕಳುಹಿಸುತ್ತಾರೆ ಅಥವಾ ಬ್ಯಾಂಕ್‌ಗಳು ಅಥವಾ ಇತರ ಸಂಸ್ಥೆಗಳಿಂದ ಕರೆ ಮಾಡುತ್ತಿರುವಂತೆ ನಟಿಸಿ ನಿಮ್ಮ ವೈಯಕ್ತಿಕ ಮಾಹಿತಿ, ಒಟಿಪಿ ಪಡೆದು ಮೋಸ ಮಾಡುತ್ತಾರೆ.
ವಹಿವಾಟುಗಳ ಮೇಲ್ವಿಚಾರಣೆ:
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಆಗಮನದೊಂದಿಗೆ ಬಹುತೇಕ ಎಲ್ಲಾ ವಹಿವಾಟುಗಳು ಯುಪಿಐ ಮೂಲಕವೇ ನಡೆಯುತ್ತವೆ. ಆದರೆ, ಈ ವಹಿವಾಟುಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವುದು ಕೂಡ ಅಗತ್ಯವಾಗಿದೆ.
ಇದನ್ನೂ ಓದಿ- Smartphone: ಭಾರತೀಯರು ದಿನಕ್ಕೆ ಎಷ್ಟು ಬಾರಿ ಫೋನ್ ತೆರೆಯುತ್ತಾರೆ? ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಆಘಾತಕಾರಿ ವರದಿ ಬಹಿರಂಗ
ಬಹು ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ತಪ್ಪಿಸಿ:
ಆನ್‌ಲೈನ್ ಪಾವತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಂಟ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳಿಂದ ವಿಶ್ವಾಸಾರ್ಹ ಮತ್ತು ಪರಿಶೀಲಿಸಿದ ಪಾವತಿ ಅಪ್ಲಿಕೇಶನ್‌ಗಳನ್ನು ಮಾತ್ರವೇ ಇನ್ಸ್ಟಾಲ್ ಮಾಡಿ. ಮೋಸದ ಚಟುವಟಿಕೆಗಳ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಫೋನ್‌ನಲ್ಲಿ ಬಹು ಪಾವತಿ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡುವುದನ್ನು ತಪ್ಪಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.